ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಚುನಾವಣೆಗಾಗಿ ಜನನಾಯಕ ಬಿಎಸ್‌ವೈರನ್ನು ಜಾತಿ ನಾಯಕರನ್ನಾಗಿಸಿದ ಬಿಜೆಪಿ: ಆಯ್ನೂರ್ ವಿಷಾದ

Share Below Link

ಶಿವಮೊಗ್ಗ: ಬಿಜೆಪಿಯವರು ಬಿ.ಎಸ್. ಯಡಿಯೂರಪ್ಪ ಅವ ರನ್ನು ಚುನಾವಣೆಗೋಸ್ಕರ ಜತಿಯ ನಾಯಕನನ್ನಾಗಿ ಮಾಡಿ ದ್ದು, ವಿಷಾದನೀಯ ಎಂದು ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು.
ಅವರು ತಮ್ಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿ.ಎಸ್ ಯಡಿ ಯೂರಪ್ಪನವರು ಒಬ್ಬ ಹೋರಾ ಟಗಾರರು. ಜನನಾಯ ಕರು. ಅಂತಹ ವ್ಯಕ್ತಿಯನ್ನು ಚುನಾವ ಣೆಗಾಗಿ ಬಿಜೆಪಿಯವರು ವೀರ ಶೈವ ಲಿಂಗಾಯತರ ಹೆಸರಿನಲ್ಲಿ ಜತಿಯ ನಾಯಕನನ್ನಾಗಿ ರೂಪಿಸಿ zರೆ. ಅವರ ಕೈಯಲ್ಲಿ ಪತ್ರ ಬರೆಯಿಸಿ ಲಿಂಗಾಯತ ಅಭ್ಯ ರ್ಥಿಗೆ ಮತ ಕೊಡುವಂತೆ ಮನವಿ ಮಾಡಿಸಿzರೆ. ಇದು ಅತ್ಯಂತ ದುರದೃಷ್ಟಕರವಾದುದು ಎಂ ದರು.ಚುನಾವಣೆ ಮುಗಿದಿದೆ. ಶಾಂತಿಯುತವಾಗಿ ನಡೆದಿದೆ. ಇದಕ್ಕೆ ಕಾರಣರಾದ ಪಕ್ಷದ ಮುಖಂಡರು, ಕಾರ್ಯಕರ್ತರು, ಜಿಡಳಿತ, ಚುನಾವಣಾ ಆಯೋಗ, ಪೊಲೀಸ್ ಇಲಾಖೆ, ಮುಖ್ಯವಾಗಿ ಪೊಲೀಸ್ ಇಲಾ ಖೆಗೆ ಅಭಿನಂದನೆ ಸಲ್ಲಿಸಿದರು.
ನಾನು ಮತ್ತು ನಮ್ಮ ತಂಡ ಎಂದಿನಂತೆ ಶಾಂತಿ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಮತ ಕೇಳಿದೆವು. ಆದರೆ ಬಿಜೆಪಿಯವರು ಧರ್ಮ, ಜತಿ, ಹಣದ ಮೇಲೆ ಮತ ಕೇಳಿzರೆ. ಕಾಂಗ್ರೆಸ್ ಕೂಡ ಜತಿ, ಉಪಜತಿಗಳ ಸಭೆ ನಡೆಸಿ ಹಣ ಖರ್ಚು ಮಾಡಿ ಮತ ಕೇಳಿದೆ. ಬಿಜೆಪಿಯವರು ಪ್ರತಿ ಬೂತ್‌ಗಳಲ್ಲಿ ಬಜರಂಗಿ ಫೋಟೊ ಹಾಕಿ, ಕೇಸರಿ ಶಾಲು ಹೊದ್ದು, ಗೋಪೂಜೆ ಹೆಸರಲ್ಲಿ ಮತ ಸೆಳೆಯುವ ಪ್ರಯತ್ನ ಮಾಡಿzರೆ. ಅಭಿವೃದ್ಧಿ ಮತ್ತು ಮುಂದಿನ ಯೋಜನೆಗಳ ಬಗ್ಗೆ ಎರಡೂ ಪಕ್ಷಗಳು ಮಾತಾಡಿಲ್ಲ. ಹಾಗಾಗಿ ನನ್ನ ಗೆಲುವು ಖಚಿತ ಎಂದರು.
ಶಿವಮೊಗ್ಗದ ಎಲ್ಲ ೩೨ ವಾರ್ಡುಗಳಲ್ಲಿ ನಾವು ಮತ ಪಡೆಯುತ್ತೇವೆ ವಿಶೇಷವಾಗಿ ೧೪ ವಾರ್ಡುಗಳಲ್ಲಿ ಅಲ್ಪಸಂಖ್ಯಾತರು ಹೆಚ್ಚಿzರೆ. ಹಾಗೆಯೇ ಐದಾರು ವಾರ್ಡುಗಳಲ್ಲಿ ತ್ರಿಕೋನ ಸ್ಪರ್ಧೆ ಇದ್ದು, ೧೪ ವಾರ್ಡುಗಳಲ್ಲಿ ಬಿಜೆಪಿ ಮತ ಪಡೆಯುವುದಿಲ್ಲ. ಕಾಂಗ್ರೆಸ್ ಕೂಡ ಅನೇಕ ವಾರ್ಡುಗಳಲ್ಲಿ ಮತ ಪಡೆಯಲಾರದು. ಒಟ್ಟಾರೆ ಲೆಕ್ಕಾಚಾರದ ಆಧಾರದ ಮೇಲೆ ಮತದಾರರು ಜೆಡಿಎಸ್‌ಗೆ ಬೆಂಬಲ ನೀಡಿzರೆ ಎಂದರು.
ರಾಜ್ಯದಲ್ಲಿಯೂ ಸಹ ಸಮೀಕ್ಷೆಗಳು ಹೇಳುವ ಅಭಿ ಪ್ರಾಯದಂತೆ ಜೆಡಿಎಸ್ ಪಕ್ಷ ಆಡಳಿತ ನಡೆಸುವುದು ಖಚಿತವಾ ಗಿದೆ. ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರುವುದಿಲ್ಲ. ಅತಂತ್ರ ಪರಿಸ್ಥಿತಿ ಉಂಟಾಗಲಿದೆ. ಜೆಡಿ ಎಸ್ ಬೆಂಬಲವಿಲ್ಲದೆ ಯಾವುದೇ ಪಕ್ಷ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿ ಎಸ್ ಜಿಧ್ಯಕ್ಷ ಎಂ. ಶ್ರೀಕಾಂತ್, ಮಾಜಿ ಶಾಸಕ ಕೆ.ಬಿ. ಪ್ರಸ ನ್ನಕುಮಾರ್, ಮುಖಂಡರಾದ ವೈ.ಹೆಚ್. ನಾಗರಾಜ್, ದೀಪಕ್ ಸಿಂಗ್, ಸತ್ಯನಾರಾಯಣ, ಐಡಿ ಯಲ್ ಗೋಪಿ, ಎಂ.ಪಿ. ಸಂಪ ತ್, ಶಿ.ಜು. ಪಾಶಾ ಇದ್ದರು.