ಬಿಜೆಪಿ ಚುನಾವಣಾ ಆಯೋಗದ ಜತೆ ಸೇರಿ ಸಂಚು…
ಶಿಕಾರಿಪುರ : ಪ್ರಜಭುತ್ವವನ್ನು ಗಟ್ಟಿಗೊಟ್ಟಿಸಲು ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ನೀಡಲಾದ ಮತದಾನ ವ್ಯವಸ್ಥೆಯನ್ನು ಬಿಜೆಪಿ ಚುನಾವಣಾ ಆಯೋಗದ ಜತೆ ಸೇರಿ ಕೊಲೆಗೈಯುವ ಸಂಚು ರೂಪಿಸಿದೆ ಎಂದು ಮಹಿಳಾ ಕಾಂಗ್ರೆಸ್ ಜಿಧ್ಯಕ್ಷೆ ಶ್ವೇತಾ ಬಂಡಿ ಆರೋಪಿಸಿದರು.
ಪಟ್ಟಣದ ಕನಕ ಉದ್ಯಾನವನ ಮುಂಭಾಗ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾದ ವೋಟ್ ಚೋರ್ ಗದ್ಧಿ ಚೋರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂವಿಧಾನ ಪ್ರಜಪ್ರಭುತ್ವ ವ್ಯವಸ್ಥೆಯ ಪವಿತ್ರ ಗ್ರಂಥವಾಗಿದ್ದು ಎಲ್ಲ ಜತಿ ಧರ್ಮದ ಜನತೆಯನ್ನು ಒಗ್ಗೂಡಿಸಿ ಕರೆದೊಯ್ಯುವ ಜತೆಗೆ ಸ್ವಾಭಿಮಾನದಿಂದ ಬದುಕುವ ಹಕ್ಕು ನೀಡಿದೆ ಎಂದರು.
ಸಂವಿಧಾನದ ಮೂಲಕ ರಾಷ್ಟ್ರಪತಿ, ಪ್ರಧಾನಿ ಸಹಿತ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಚುನಾವಣೆಯಲ್ಲಿ ಒಂದು ಮತ ನೀಡುವ ಹಕ್ಕು ನೀಡಲಾಗಿದ್ದು ಆ ಮೂಲಕ ಬಹುಜನರ ಅಪೇಕ್ಷೆಯ ವ್ಯಕ್ತಿಯನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಚುನಾವಣೆ ಮೂಲಕ ಮತದಾರರು ಆಯ್ಕೆ ಮಾಡಿ ಕೊಳ್ಳುವ ಹಕ್ಕನ್ನು ಚುನಾವಣಾ ಆಯೋಗದ ಮೂಲಕ ಬಿಜೆಪಿ ಕಸಿದುಕೊಳ್ಳುವ ಸಂಚು ರೂಪಿಸಲಾ ಗಿದ್ದು, ಈ ದಿಸೆಯಲ್ಲಿ ಮಹದೇವಪುರದಲ್ಲಿ ಲಕ್ಷಕ್ಕೂ ಅಧಿಕ ನಕಲಿ ಮತದಾರರ ಗುರುತಿನ ಪತ್ರದ ಮೂಲಕ ನಾಗರೀಕರ ಹಕ್ಕನ್ನು ಚ್ಯುತಿಗೊಳಿಸಲಾಗಿದೆ ಎಂದು ಆರೋಪಿಸಿದ ಅವರು, ೪೦ ಸಾವಿರ ಅಧಿಕ ಸುಳ್ಳು ವಿಳಾಸ ಪತ್ತೆಯಾಗಿದ್ದು ಈ ಬಗ್ಗೆ ಚುನಾವಣಾ ಆಯೋಗ ಬೇಜವಾಬ್ದಾರಿತನದ ಉತ್ತರ ನೀಡುತ್ತಿದೆ ಎಂದು ದೂರಿದರು.
ಚುನಾವಣಾ ಅಕ್ರಮದ ಮೂಲಕ ಅಧಿಕಾರ ಪಡೆದಿರುವ ಕೇಂದ್ರ ಸರ್ಕಾರ ನಮ್ಮ ಆರೋಪ ವನ್ನು ಸುಳ್ಳು ಎಂದು ಸಾಬೀತು ಪಡಿಸಲಿ. ತಪ್ಪಿದಲ್ಲಿ ಅಧಿಕಾರ ಕೈಬಿಟ್ಟು ಕೆಳಗಿಳಿಯುವಂತೆ ಸವಾಲು ಹಾಕಿದ ಅವರು, ಚುನಾವಣಾ ಅಕ್ರಮದ ಬಗ್ಗೆ ರಾಹುಲ್ ಗಾಂಧಿ ದೇಶಾದ್ಯಂತ ಸಂಚಲನ ಮೂಡಿಸಿ zರೆ. ಜನಸಾಮಾನ್ಯರ ಜತೆ ಅತ್ಯಂತ ಸಂಯಮದಿಂದ ಕುಳಿತು ಸಂವಹನ ನಡೆಸುವ ರಾಹುಲ್ ಭವಿಷ್ಯದ ಭವ್ಯ ಭಾರತ ನಿರ್ಮಾಣಕ್ಕೆ ಶ್ರಮಿಸು ತ್ತಿzರೆ ಹೊರತು ಮೋದಿ ರೀತಿ ಮನ್ ಕಿ ಭಾತ್, ಬೇಟಿ ಪಡಾವೋ ಬಚಾವೋ ಎಂದು ಬಾಷಣಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ಮಾತ್ರ ಸಂವಿಧಾನದ ಆಶಯ ಕಟ್ಟುನಿಟ್ಟಾಗಿ ಜರಿಗೊಳಿಸಲಿದ್ದು ಜನಸಾಮಾನ್ಯರು ಘನತೆ ಗೌರವ ದಿಂದ ಬದುಕಲು ತಳವರ್ಗದ ಜನತೆ ಐಎಎಸ್, ಕೆಎಎಸ್, ವೈದ್ಯಕೀಯ ಶಿಕ್ಷಣ ಪಡೆಯಲು ಸಾಧ್ಯ ಎಂದ ಅವರು, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ ವ್ಯಾಪ್ತಿ ಯಲ್ಲಿ ಹೊಸ ಮತದಾರರ ಬಗ್ಗೆ,ಪ್ರಸ್ತುತ ವಾಸವಿದ್ದು ಮತಪಟ್ಟಿ ಯಿಂದ ಉzಶಪೂರ್ವಕವಾಗಿ ಕೈಬಿಟ್ಟಿರುವ ಬಗ್ಗೆ ಹೆಚ್ಚಿನ ಜಗ್ರತೆ ವಹಿಸುವಂತೆ ಕರೆ ನೀಡಿದರು.
ಜಿ.ಪಂ ಮಾಜಿ ಉಪಾಧ್ಯಕ್ಷ ಎನ್. ಅರುಣ್ ಮಾತನಾಡಿ, ೧೯೮೩ರಲ್ಲಿ ಮತದಾನಕ್ಕೆ ತೆರಳಿದಾಗ ಮತ ಚಲಾವಣೆಯಾಗಿ ವಾಪಾಸ್ ಬಂದಿದ್ದು ಇದೀಗ ಮತಗಳ್ಳತನದ ಅನುಮಾನ ದಟ್ಟವಾಗಿದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಮ ಪಾರಿವಾಳದ ಮಾತನಾಡಿ, ಬಲಿಷ್ಠ ಸಂವಿಧಾನ ದಿಂದಾಗಿ ಮಹಿಳೆಯರು ರಾತ್ರಿ ನಿರ್ಭಯವಾಗಿ ಒಡಾಡುತ್ತಿದ್ದು ಜಗತ್ತಿನಲ್ಲಿ ಭಾರತದ ಸಂವಿಧಾನಕ್ಕೆ ವಿಶೇಷ ಗೌರವವಿದೆ ಎಂದರು. ಮತಗಳ್ಳತನ ಪತ್ತೆ ಹಚ್ಚಿದ ರಾಹುಲ್ ಗಾಂಧಿ ಬಗ್ಗೆ ಅಪ್ಪಮಕ್ಕಳು ಕೇವಲವಾಗಿ ಮಾತನಾಡುತ್ತಿ ರುವುದು ಸರಿಯಲ್ಲ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ, ಪುರಸಭೆ ನಾಮನಿರ್ದೇಶಿತ ಸದಸ್ಯ ರವಿಕಿರಣ್, ಶ್ರೀಧರ ಕರ್ಕಿ, ಸುರೇಶ್ ಧಾರವಾಡ, ವಿಜಯಕುಮಾರ್, ರೇಣುಕಸ್ವಾಮಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಲೋಹಿತ್ ನಿರ್ದೇಶಕ ಕಾಂತೇಶ್, ಸುವರ್ಣಮ್ಮ, ಚೈತ್ರ, ಕೃಷ್ಣೋಜಿ ರಾವ್, ವಾಸುದೇವಾಚಾರ್, ಈಶಣ್ಣ ಕಲವತ್ತಿ, ಮಂಜು ಮತ್ತಿತರರು ಹಾಜರಿದ್ದರು.
