ಯುವ ಜೆಡಿಎಸ್ ಜಿಲ್ಲಾ ಘಟಕದಿಂದ ಶಾಸಕಿ ಶಾರದಾ ಪೂರ್‍ಯಾನಾಯ್ಕರ ಜನ್ಮದಿನ ಆಚರಣೆ…
ಜಾತ್ಯತೀತ ಜನತಾದಳ ಶಿವಮೊಗ್ಗ ಜಿಲ್ಲಾ ಯುವ ಘಟಕದಿಂದ ಇಂದು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾಪೂರ್‍ಯಾನಾಯ್ಕ ಅವರ ಜನ್ಮದಿನವನ್ನು ಪಕ್ಷದ ಕಛೇರಿಯಲ್ಲಿ ಜಿಲ್ಲಾಧ್ಯಕ್ಷ ಮಧುಕುಮಾರ್ ಅವರ ನೇತೃತ್ವದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕಡಿದಾಳ್ ಗೋಪಾಲ್, ಜಿಲ್ಲಾ ಕಾರ್‍ಯಾಧ್ಯಕ್ಷ ದಾದಾಪೀರ್, ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್, ರಾಜ್ಯ ಕಾರ್ಯದರ್ಶಿ ರಾಕೇಶ್ ಡಿಸೋಜ, ಯುವ ಜೆಡಿಎಸ್ ಜಿಲ್ಲಾ ಕಾರ್‍ಯಾಧ್ಯಕ್ಷ ಎಸ್.ಎಲ್. ನಿಖಿಲ್, ಪ್ರಧಾನ ಕಾರ್ಯದರ್ಶಿ ಪ್ರೇಮ್ ಕುಮಾರ್, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಯೂಸೂಫ್ ಭಯ್ಯಾ, ಜೆಡಿಎಸ್ ರೈತ ಘಟಕದ ಜಿಲ್ಲಾಧ್ಯಕ್ಷ ದಾನೇಶಪ್ಪ, ಪ್ರಮುಖರಾದ ತ್ಯಾಗರಾಜ್, ಸಿದ್ದಪ್ಪ, ಸಂಗಯ್ಯ, ರಮೇಶ್ ನಾಯ್ಕ, ನಾಗೇಶ್, ರುದ್ರೇಶ್, ಸಮದ್, ನೂರುಲ್ಲಾ, ಅವಿನಾಶ್, ಸಂಜಯ್, ನಿಧಿ ಸೇರಿದಂತೆ ಜಿಲ್ಲೆಯ ವಿವಿಧ ಘಟಕಗಳ ಪ್ರಮುಖರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.