ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಬೈಂದೂರಿನ ವಿವಿಧೆಡೆ ಕಾಂಗ್ರೆಸ್‌ನಿಂದ ಭರ್ಜರಿ ಪ್ರಚಾರ…

Share Below Link

ಬೈಂದೂರು : ಶಿವಮೊಗ್ಗ ಲೋಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ತಾಲ್ಲೂಕಿನ ಶಂಕರನಾರಾಯಣದ ಬೆದ್ರಕಟ್ಟೆಯ ಜನತಾ ಕಾಲೋನಿಗೆ ಭೇಟಿ ನೀಡಿ ಕೊರಗ ಸಮುದಾಯದ ಮುಖಂಡ ರೊಂದಿಗೆ ಮಾತುಕತೆ ನಡೆಸಿದರು.
ಕಾಲೋನಿಯಲ್ಲಿ ೭೦ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿzರೆ. ಆದರೆ, ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಸಾಕಷ್ಟಿವೆ. ಈ ಭಾಗದ ಜನರಿಗೆ ಪ್ರಮುಖ ಸಮಸ್ಯೆಯಾದ ಮನೆ ನಿರ್ಮಾಣಕ್ಕೆ ಭೂಮಿಯ ಸಮಸ್ಯೆ ತೀರದ ದಾಹದಂತಿದೆ. ಅದೇ ರೀತಿ, ಕುಡಿಯುವ ನೀರು, ರಸ್ತೆ, ಭೂ- ಹಕ್ಕು ಪತ್ರ ಸೇರಿದಂತೆ ಅನೇಕ ಸಮಸ್ಯೆಗಳು ಈ ಭಾಗದಲ್ಲಿ ತಲೆ ದೂರಿವೆ. ಆದರೆ, ಇಲ್ಲಿಯವರೆಗೆ, ಯಾವುದೇ ಸಂಸದರು ಈ ಕಾಲೋ ನಿಗೆ ಭೇಟಿ ನೀಡಿಲ್ಲ ಎಂದು ಸ್ಥಳೀ ಯರು ಅಳಲು ತೋಡಿಕೊಂಡರು.
ಈ ಭಾಗದಲ್ಲಿ ಹೆಚ್ಚಿನ ಪರಿಶಿಷ್ಟ ಜತಿ, ಪರಿಶಿಷ್ಟ ಪಂಗಡದ ಸಮುದಾಯದ ಬುಟ್ಟಿ ನೇಕಾರರು, ಚೆಂಡೆ ವಾದ್ಯ ವಾದಕರು ಸೇರಿ ಇನ್ನಿತರ ಕುಲಕಸುಬು ನಂಬಿ ಕೊಂಡು ಬದುಕ ನಡೆಸುತ್ತಿzರೆ. ಆದರೆ, ಸರ್ಕಾರ ಇಲ್ಲಿಯವರೆ ಯಾವುದೇ, ರೀತಿಯ ಮಕ್ಕಳ ಉದ್ಯೋಗ, ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಸೃಷ್ಟಿಸಿಲ್ಲ. ಆದ್ದರಿಂದ, ಈ ಭಾಗದ ಜನರಿಗೆ ಸಮರ್ಪಕ ವಾದ ಸೌಲಭ್ಯ ಕಲ್ಪಿಸಿಕೊಡುವಂತೆ ಕಾಲೋನಿಯ ಜನರು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಸಿದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರು, ಇಲ್ಲಿನ ಸ್ಥಳೀಯ ಸಮಸ್ಯೆ ಗಳಿಗೆ ಸ್ಪಂದಿಸುವುದಾಗಿ ತಿಳಿಸಿ, ಮುಂದಿನ ದಿನದಲ್ಲಿ ಸಮಾಜ ದೊಂದಿಗೆ ಇರುವುದಾಗಿ ಭರವಸೆ ನೀಡಿದರು.
ಪ್ರಮುಖರಾದ ಅನಿಲ್ ಕುಮಾರ್ ತಡಕಲ್, ರಾಜು ಪೂಜರಿ, ಸದಾಶಿವ ಶೆಟ್ಟಿ, ಗುರುದತ್ ಷೇಟ್, ಸಂಕೇತ್ ಶೆಟ್ಟಿ, ಕಷ್ಣ ನಾಯ್ಕ್, ರಾಮಚಂದ್ರ ದೇವಾಡಿಗ, ಎ.ಪಿ ಶೆಟ್ಟಿ, ಬಿ.ಕೆ. ಶ್ರೀನಿವಾಸ, ಜಿ.ಎಸ್.ಹರಿಪ್ರಸಾದ್ ಆಚಾರ್, ಸಂಪಿಗೇಡಿ ಸಂಜೀವ್ ಶೆಟ್ಟಿ, ಸುಧಾಕರ ಶೆಟ್ಟಿ ಸೇರಿ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.