ಸತ್ಯ ಕತೆ ಆಧಾರಿತ ಭುಗಿಲು ಪುಸ್ತಕ ಲೋಕಾರ್ಪಣೆ…
ಹೊಸನಗರ : ತಾಲೂಕು ಕಾರಣಗಿರಿ ರಾಷ್ಟ್ರೋತ್ಥಾನ ಬಳಗದಿಂದ ಇಲ್ಲಿನ ಗಾಯತ್ರಿ ಮಂದಿರದಲ್ಲಿ ತುರ್ತು ಪರಿಸ್ಥಿತಿಗೆ ೫೦ ವರ್ಷ ತುಂಬಿದ ಸಂದರ್ಭದಲ್ಲಿ ಜನಕ್ರಾಂತಿಯ ಸತ್ಯ ಕಥೆ ಆಧಾರಿತ ಮುಗಿಲು ಪುಸ್ತಕವನ್ನು ಶಾಸಕ ಆರಗ eನೇಂದ್ರ ಮತ್ತು ಹಾದಿಗಲ್ಲು ಡಾ. ಲಕ್ಷ್ಮೀನಾರಾಯಣ ಅವರು ಲೋಕಾರ್ಪಣೆ ಗೊಳಿಸಿದರು.
ಇದೇ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿ ಜೈಲು ಸೇರಿದ ಹೊಸನಗರ ತಾಲೂಕಿನ ಕಾರ್ಯಕರ್ತ ವಿನಾಯಕ, ಟಿಆರ್ ಕೃಷ್ಣಪ್ಪ. ಟಿಡಿ ಚಂದ್ರಶೇಖರ್ ಅವರನ್ನು ರಾಷ್ಟ್ರೋತ್ಥಾನ ಬಳಗ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಪ್ರಮುಖರಾದ ನಳಿನ ಚಂದ್ರ, ಹನಿಯ ರವಿ, ಉಮೇಶ್ ಕಂಚಿ ಕಾರ್ ಹಾಗೂ ರಾಷ್ಟ್ರೋತ್ಥಾನ ಬಳಗದ ಸರ್ವ ಸದಸ್ಯರು ಭಾಗವಹಿಸಿದ್ದರು.
