ತಾಜಾ ಸುದ್ದಿರಾಜಕೀಯ

ಭೋವಿ ಸಮಾಜದಿಂದ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಬೆಂಬಲ:ಧೀರರಾಜ್ ಹೊನ್ನವಿಲೆ …

Share Below Link

ಶಿವಮೊಗ್ಗ: ಜೆಡಿಎಸ್‌ಗೆ ಬೋವಿ ಸಮಾಜದ ಬಹುತೇಕ ಮುಖಂಡರು ಬೆಂಬಲ ವ್ಯಕ್ತಪಡಿಸಿ ದ್ದಾರೆ ಹಾಗೂ ಶಿವಮೊಗ್ಗ ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ನೂರು ಮಂಜುನಾಥ್ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತಾರೆ ಎಂದು ಬೋವಿ ಸಮಾಜದ ತಾಲೂಕು ಅಧ್ಯಕ್ಷ ಹಾಗೂ ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಬೋವಿ ಸಮಾಜಕ್ಕೆ ಎರಡೂ ರಾಷ್ಟ್ರೀಯ ಪಕ್ಷಗಳು ಅನ್ಯಾಯ ಮಾಡಿವೆ. ಹಿಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರ ಣವಾಗಿದ್ದ ಗೂಳಿಹಟ್ಟಿ ಶೇಖರ್, ಶಿವರಾಜ ತಂಗಡಗಿ ಮತ್ತು ವೆಂಕ ಟರಮಣಪ್ಪ ಅವರನ್ನು ಎರಡೂ ಪಕ್ಷಗಳು ನಿರ್ಲಕ್ಷಿಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಬೋವಿ ಸಮಾಜದ ಕೊಡುಗೆ ಇದೆ. ಹಿಂದಿನಿಂದಲೂ ಬೋವಿ ಸಮಾಜಕ್ಕೆ ಎಂಎಲ್‌ಎ ಟಿಕಟ್ ನೀಡಲು ನಿರಾಕರಿಸುತ್ತಾ ಬಂದಿರುವ ಬಿಜೆಪಿ ನಾನು ಪಕ್ಷೇತರ ನಾಗಿ ಪಾಲಿಕೆ ಸದಸ್ಯನಾಗಿ ಗೆದ್ದು ಬಂದಾಗ ಬಿಎಸ್‌ವೈ ಮತ್ತು ಈಶ್ವ ರಪ್ಪನವರು ೨೦೨೩ರಲ್ಲಿ ಎಂಎಲ್‌ಎ ಟಿಕಟ್ ನೀಡುವ ಭರವಸೆ ನೀಡಿದ್ದರು. ಪಾಲಿಕೆಯಲ್ಲಿ ಕೂಡ ಮೇಯರ್ ಸ್ಥಾನ ನೀಡುವ ಸಂದರ್ಭದಲ್ಲಿ ಈಗಿನ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪನವರು ಅಡ್ಡಗಾಲಿಟ್ಟು ನನಗೆ ಮೇಯರ್ ಸ್ಥಾನ ಸಿಗದಂತೆ ಕುತಂತ್ರ ಮಾಡಿ ದ್ದರು.
ಅವರು ಶಾಡೋ ಮೇಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಬೋವಿ ಸಮಾಜ ಬಿಜೆಪಿಯವರಿಗೆ ಲೆಕ್ಕಕಿಕಿಲ್ಲ ನಿರಂತರವಾಗಿ ಬೋವಿ ಸಮಾಜದ ಮುಖಂಡರನ್ನು ತುಳಿ ಯುವ ಕೆಲಸ ಬಿಜೆಪಿ ಮಾಡುತ್ತಾ ಬಂದಿದೆ ಎಂದು ಗಂಭೀರ ಆರೋಪ ಮಾಡಿದರು.
ಜಿಲ್ಲೆಯಲ್ಲಿ ಬೋವಿ ಸಮಾಜ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದು, ಶಿವಮೊಗ್ಗ ಗ್ರಾಮಾಂತರ ಮತ್ತು ಶಿವಮೊಗ್ಗ ನಗರ ಮತ್ತು ಭದ್ರಾವತಿ ಕ್ಷೇತ್ರಗ ಳಲ್ಲಿ ಜೆಡಿಎಸ್ ಬೆಂಬಲಿಸಲಿದೆ ಎಂದ ಅವರು, ನನಗೆ ಬಿಜೆಪಿ ಬಿಡುವ ಮನಸ್ಸಿರಲಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ಸಮಾಜವನ್ನು ನಿರ್ಲಕ್ಷಿಸುತ್ತಿರುವುದರಿಂದ ಎರಡೂ ಪಕ್ಷಗಳನ್ನು ಸೋಲಿಸುವ ಉದ್ದೇಶದಿಂದ ಅನಿವಾರ್ಯವಾಗಿ ಜೆಡಿಎಸ್‌ಗೆ ಬೆಂಬಲಿಸುವ ನಿರ್ಧಾರಕ್ಕೆ ಬಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹುಚ್ಚು ರಾಯಪ್ಪ, ಗಣೇಶ್, ರಾಘ ವೇಂದ್ರ, ವಿಜಯಕುಮಾರ್, ಗೋಪಾಲಕೃಷ್ಣ, ಸಂತೋಷ್ ಕುಮಾರ್ ಮತ್ತಿತರರಿದ್ದರು.