ಭದ್ರಾವತಿ: ನಗರಸಭೆಯ ಬಜೆಟ್ ಪೂರ್ವ ಭಾವಿ ಸಭೆ…
ಭದ್ರಾವತಿ : ನಿರೀಕ್ಷಿತ ಆದಾಯ ಮತ್ತು ವೆಚ್ಚಗಳ ಬಗ್ಗೆ ನಗರಸಭಾ ವತಿಯಿಂದ ಫೆ.೨೬ರಂದು ನಗರಸಭಾ ಸಭಾಂಗಣದಲ್ಲಿ ನಗರಸಭಾ ಅಧ್ಯಕ್ಷೆ ಗೀತಾ ರಾಜಕುಮಾರ ಅಧ್ಯಕ್ಷತೆಯಲ್ಲಿ ೨೦೨೬-೨೦೨೭ ನೇ ಸಾಲಿಗೆ ಸಭೆ ನಡೆಸಲಾಯಿತು.
ನಗರಸಭೆಯ ಸ್ವಂತ ಆದಾಯಗಳಾದ ಸ್ವಯಂಘೋಷಿತ ಆಸ್ತಿ ತೆರಿಗೆ, ನೀರಿನ ತೆರಿಗೆ ಇತರೆ ಆದಾಯ ಸರ್ಕಾರದ ಅನುದಾನ ಗಳು ಸೇರಿ ಒಟ್ಟು ೧೧,೪೨೯.೧೦ ಲಕ್ಷಗಳ ನಿರೀಕ್ಷೆಯನ್ನು ನಗರಸಭೆ ಹೊಂದಿದ್ದು ನಗರದ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ೨೬-೨೭ ನೇ ಸಾಲಿನ ಬಜೆಟ್ ತಯಾರಿಸಿದೆ.
ನಿರೀಕ್ಷಿತ ಆದಾಯಗಳಲ್ಲಿ ಆಸ್ತಿ ತೆರಿಗೆ ಯಿಂದ ೮ ಕೋಟಿ ೭೦.೦೦ ಲಕ್ಷ, ನೀರಿನ ಶುಲ್ಕದಿಂದ ೪ ಕೋಟಿ ೮೦ ಲಕ್ಷ, ಬಾಡಿಗೆ ಗಳಿಂದ ೨೫ ಲಕ್ಷ, ಉದ್ದಿಮೆ ಪರವಾನಿಗೆ ಯಿಂದ ೩೮ ಲಕ್ಷದ೧೦ ಸಾವಿರ, ಇತರೆ ಆದಾಯ ಗಳಾದ ಅಭಿವೃದ್ಧಿ ಶುಲ್ಕ ದಿಂದ ೮೦ ಲಕ್ಷ ಬ್ಯಾಂಕ್ ಬಡ್ಡಿ , ಸುಂಕ ವಸೂಲಾತಿ ಆದಾಯಗಳಿಂದ ೧ ಕೋಟಿ ೨೫ ಲಕ್ಷ, ರಾಜ್ಯ ಸರ್ಕಾರದ ಅನುದಾನಗಳಾದ ಎಸ್ ಎಫ್. ಸಿ. ಮುಕ್ತ ನಿಧಿಯಿಂದ ೫ ಕೋಟಿ ೫೦ ಲಕ್ಷ, ಎಸ್ ಎಫ್. ಸಿ. ವೇತನ ನಿಧಿಯಿಂದ ೧೧ ಕೋಟಿ ೮೧ ಲಕ್ಷ, ಎಸ್ ಎಫ್. ಸಿ.ವಿದ್ಯುತ್ ನಿಧಿಯಿಂದ ೧೬೫೦ ಲಕ್ಷಗಳು, ಎಸ್ ಎಫ್. ಸಿ. ಕುಡಿಯುವ ನೀರಿನ ಅನುದಾನ ದಿಂದ ೧೦ ಲಕ್ಷ ಮತ್ತು ಎಸ್ ಎಫ್ ಸಿ ವಿಶೇಷ ಅನುದಾನದಿಂದ ೨೭೦೦ ಲಕ್ಷಗಳು ಸೇರಿ ಒಟ್ಟು ೬೦೯೧ ಲಕ್ಷಗಳು ಅನುದಾನ ಬರುವ ನಿರೀಕ್ಷೆಯನ್ನು ಹೊಂದಿದೆ.

ಕೇಂದ್ರ ಸರ್ಕಾರದ ಅನುದಾನ ಗಳಾದ ಅಮೃತ್ ನಗರ ಯೋಜನೆ ಅನುದಾನ ದಿಂದ ೨೦೦೦ ಲಕ್ಷಗಳು, ನಲ್ಮ್ ಯೋಜನೆ ಅನುದಾನದಿಂದ ೭೦ ಲಕ್ಷ, ಎಸ್ ಬಿ ಎಂ ೨. ೦ ಯೋಜನೆ ಅಡಿ ೩೦೦ ಲಕ್ಷ ಹಾಗೂ ಹದಿನಾರನೇ ಹಣಕಾಸು ಯೋಜನೆ ಅನುದಾನ ೧೩೫೦ ಲಕ್ಷಗಳು ಸೇರಿ ಒಟ್ಟು ೧೧೪೨೯.೧೦ ಲಕ್ಷಗಳ ಅನುದಾನ ನಗರಸಭೆ ನಿರೀಕ್ಷಿಸಿದೆ.
ನಿರೀಕ್ಷಿತ ಒಟ್ಟು ವೆಚ್ಚವಾಗಿ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ನಗರಸಭಾ ನಿಧಿ ೫೦.೦೦ ಲಕ್ಷ ಹಾಗೂ ಸರ್ಕಾರದ ಅನುದಾನ ೧೨೩೬.೦೦ ಸೇರಿ ಒಟ್ಟು ೧೨೮೬.೦೦, ಚರಂಡಿಗಳ ಅಭಿವೃದ್ಧಿ ಮತ್ತು ನಿರ್ವಹಣೆ ನಗರಸಭಾ ನಿಧಿ ೩೦.೦೦ ಲಕ್ಷ ಹಾಗೂ ಸರ್ಕಾರದ ಅನುದಾನ ೧೧೪೭.೦೦ ಸೇರಿ ಒಟ್ಟು ೧೧೭೭.೦೦, ಒಳಚರಂಡಿ ಕಾಮ ಗಾರಿಗೆ ನಗರಸಭಾ ನಿಧಿಯಿಂದ ೨೦.೦೦ ಲಕ್ಷ ಹಾಗೂ ಸರ್ಕಾರದ ಅನುದಾನ ವಾಗಿ ೧೦೨೫ ಲಕ್ಷಗಳು ಸೇರಿ ಒಟ್ಟು ೧೦೪೫ ಲಕ್ಷಗಳ ವೆಚ್ಚ, ಹೊರ ಗುತ್ತಿಗೆ ನೀರು ಸರಬ ರಾಜು ಸಿಬ್ಬಂದಿ ಗಳ ವೇತನ ಪಾವತಿಗೆ ನಗರಸಭಾ ದಿಂದ ೩೯೪ ಲಕ್ಷಗಳು, ನೈರ್ಮಲಿಕರಣ ಹೊರಗುತ್ತಿಗೆ ನೇರ ಪಾವತಿ ಸಿಬ್ಬಂದಿ ಗಳ ವೇತನ ನಗರಸಭೆಯಿಂದ ೪೨೧ ಲಕ್ಷ ಸರ್ಕಾರದ ಅನುದಾನ ೨೦೧೬ ಲಕ್ಷ ಒಟ್ಟು ೬೩೭ ಲಕ್ಷ, ಬೀದಿ ದೀಪಗಳ ನಿರ್ವಹಣೆಗೆ ನಗರಸಭೆ ಯಿಂದ ೧೬೮ ಲಕ್ಷ, ನೀರು ಸರಬರಾಜು ನಿರ್ವಹಣೆ ಮತ್ತು ಅಭಿವೃದ್ಧಿಗೆ ನಗರಸಭೆಯಿಂದ ೧೭೮ ಲಕ್ಷ ಸರ್ಕಾರದ ಅನುದಾನ ೧೦:೨೫ ಲಕ್ಷ ಸೇರಿ ಒಟ್ಟು ೧೨ ೦೩ ಲಕ್ಷಗಳು, ಪ.ಜ./ ಪ. ಪಂ / ಇತರೆ ಶೇ. ಗಳಾದ ೨೪.೧೦, ೭.೨೫ ಮತ್ತು ಶೇ. ೫ ಸಮುದಾಯದ ಅಭಿವೃದ್ಧಿಗಾಗಿ ನಗರಸಭೆಯಿಂದ ೧೦ ಲಕ್ಷ ಸರಕಾರದ ಅನುದಾನ ೨೦೦ ಲಕ್ಷ ಸೇರಿ ೨೧೦ ಲಕ್ಷ, ನಲ್ಮ್ ಯೋಜನೆಗೆ ಸರ್ಕಾರದ ಅನುದಾನ ೭೦ಲಕ್ಷ,, ಸ್ವಚ್ಛ ಭಾರತ್ ಮಿಷನ್ ಕಾಮಗಾರಿ ಗಳಗಾಗಿ ಸರ್ಕಾರದ ಅನುದಾನ ದಿಂದ ೩೦೦ ಲಕ್ಷ, ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕದ ಅಭಿ ವೃದ್ಧಿ ಕಾಮಗಾರಿಗಾಗಿ ಸರ್ಕಾರದ ಅನುದಾನದಿಂದ ೮೯೬ ಲಕ್ಷ, ಉದ್ಯಾನವನ ಮತ್ತು ಕೆರೆ ಅಭಿವೃದ್ಧಿಗಾಗಿ ಅಮೃತ್ಯು ಯೋಜನೆ ಅಡಿಯಲ್ಲಿ ನಗರಸಭೆಯಿಂದ ೨.೧೦ ಲಕ್ಷ ಸರ್ಕಾರದ ಅನುದಾನ ೫೨೪ ಲಕ್ಷ ಸೇರಿ ಒಟ್ಟು ೫೨೬.೧೦ ಲಕ್ಷ, ವಿದ್ಯುತ್ ಬಿಲ್ ಪಾವತಿಗಾಗಿ ನಗರ ಸಭೆಯಿಂದ ೨೦ ಲಕ್ಷ ಸರ್ಕಾರದ ಅನುದಾನದಿಂದ ೧೭೨೦ ಲಕ್ಷ ಸೇರಿ ದ್ ೧೭೪೦ ಲಕ್ಷ, ಖಾಯಂ ಮತ್ತು ಹೊರಗುತ್ತಿಗೆ ನೌಕರರ ವೇತನ ನಗರಸಭೆ ಯಿಂದ ೧೨೦ಲಕ್ಷ ಸರಕಾರದ ಅನುದಾನ ದಿಂದ ೧೧೮೧ ಲಕ್ಷ ಸೇರಿ ೧೩೦೧ ಲಕ್ಷ ವಾಹನ ಗಳ ದುರಸ್ತಿ ಮತ್ತು ನಿರ್ವಹಣೆ ಹಾಗೂ ಇಂಧನದ ವೆಚ್ಚ ನಗರಸಭೆಯಿಂದ ೨೨೬ ಲಕ್ಷ ದಸರಾ ಆಚರಣೆ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆಗೆ ನಗರಸಭೆಯಿಂದ ೫೫ ಲಕ್ಷ ಕಚೇರಿಯ ಇತರೆ ವೆಚ್ಚಗಳಾಗಿ ೧೯೫ ಲಕ್ಷ ಸೇರಿ ಒಟ್ಟು ನಗರಸಭಾ ನಿಧಿಯಿಂದ ೧೮೮೯. ೧೦. ಲಕ್ಷ ಸರ್ಕಾ ರದ ಅನುದಾನದಿಂದ ೯೫೪೦ ಲಕ್ಷ ಸೇರಿ ಒಟ್ಟು ೧೨,೪೨೯.೧೦ ಲಕ್ಷ ರೂಗಳ ಅಯ- ವ್ಯಯಗಳಿಗೆ ನಗರ ಸಭೆಯಿಂದ ಇಂದು ಕರೆದಿದ್ದ ಬಜೆಟ್ ಪೂರ್ವಸಭೆಯಲ್ಲಿ ಅಂಕಿ ಅಂಶಗಳನ್ನು ಮಂಡಿಸಲಾಯಿತು.

ಇದೇ ಸಂದರ್ಭದಲ್ಲಿ ಸಭೆ ಯಲ್ಲಿ ಉಪಸ್ಥಿತರಿದ್ದ ಸಂಘ- ಸಂಸ್ಥೆಗಳ ಅಧ್ಯಕ್ಷರು ಪದಾಧಿ ಕಾರಿಗಳು ಸ್ವಚ್ಛತೆ ನೀರು ಸರಬರಾಜು ರಸ್ತೆ ಅಗಲೀಕರಣ, ಪರಿಹಾರ ನೀಡಿದರೂ ಕಟ್ಟಡಗಳ ತೆರವು ಆಗದಿರುವುದು ಅಂಬೇಡ್ಕರ್ ಭವನದ ಉದ್ಘಾಟನೆಗೆ ಅಗತ್ಯವಿರುವ ಹಣ ಬಿಡುಗಡೆಗೆ ಸರ್ಕಾರಿ ಶಾಲೆಗಳ ನಿರ್ವಹಣೆಗೆ ಹಾಗೂ ಶಾಲೆಗಳ ಸುತ್ತಮುತ್ತಲಿನ ಕಾಲಿ ಪ್ರದೇಶಗಳಲ್ಲಿ ಉದ್ಯಾನವನ ನಿರ್ಮಿಸುವ ಬಗ್ಗೆ ಕೆರೆ ಅಭಿವೃದ್ಧಿ ಬಗ್ಗೆ ಅಂಗಡಿಗಳ ಪರವಾನಿಗೆ ಶುಲ್ಕ ಸೇರಿದಂತೆ ಇತರೆ ಶುಲ್ಕಗಳ ಬಗ್ಗೆ ಸಹ ಚರ್ಚಿಸಲಾಯಿತು. ಮನೆ ಮಾಲೀಕರ ಸಂಘದ ವತಿಯಿಂದ ಮನವಿ ನೀಡುವ ಬಗ್ಗೆ ಚರ್ಚಿಸಿ ಸಲಹೆ ನೀಡಲಾಯಿತು.
ನಗರಸಭಾ ಅಧ್ಯಕ್ಷ ಗೀತಾ ರಾಜಕುಮಾರ್ ಸವೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಶೀರ್ ಅಹ್ಮದ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರೇಮ ಬದರಿನಾರಾಯಣ್, ಆಯುಕ್ತ ಹೇಮಂತ್ ವೇದಿಕೆಯಲ್ಲಿದ್ದು ಸಭೆಗೆ ಮಾಹಿತಿಗಳನ್ನು ನೀಡಿದರು.
ವಿವಿಧ ಸಂಘಸಂಸ್ಥೆ ಮುಖಂಡರಾದ ಟಿ ಜಿ ಬಸವರಾಜಯ್ಯ, ಎಲ್ ವಿ ರುದ್ರಪ್ಪ, ಸಿ ಎನ್ ಗಿರೀಶ್ ಬಿ.ಎಲ್. ಚಂದ್ರಪ್ಪ, ಬಿ.ಎನ್. ರಾಜು, ವಸಂತ ಕುಮಾರ್ ವೆಂಕಟೇಶ್ ಸೇರಿದಂತೆ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

