ಜಿಲ್ಲಾ ಸುದ್ದಿತಾಜಾ ಸುದ್ದಿ

ಭದ್ರಾವತಿ: ನಾಡಹಬ್ಬ ದಸರಾ ಲೋಗೋ ಬಿಡುಗಡೆ

Share Below Link

ಭದ್ರಾವತಿ(ಹೊಸನಾವಿಕ): ನಗರಸಭೆ ವತಿಯಿಂದ ಆಚರಿಸು ತ್ತಿರುವ ದಸರಾ ಹಬ್ಬದ ಆಚರಣೆ ಯನ್ನು ಅದ್ದರೂರಿಯಿಂದ ಆಚರಿಸುವ ಸಲುವಾಗಿ ನಗರ ಸಭೆ ಅಧ್ಯಕ್ಷರ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ಅಧ್ಯಕ್ಷೆ ಜೆ.ಸಿ.ಗೀತಾ ರಾಜ್‌ಕುಮಾರ್ ತಿಳಿಸಿದರು.
೨೦೨೫ರ ದಸರಾ ನಾಡ ಹಬ್ಬದ ಲೋಗೋವನ್ನು ಬಿಡುಗಡೆ ಮಾಡಿ, ಮಾಧ್ಯಮದೊಂದಿಗೆ ಮಾತನಾಡಿದ ಅವರು, ದಸರಾ ಉತ್ಸುವಾರಿ ಸಮಿತಿ ಅಧ್ಯಕ್ಷರಾಗಿ ನಗರಸಭೆ ಅಧ್ಯಕ್ಷೆ ಜೆ.ಸಿ.ಗೀತಾ ರಾಜ್‌ಕುಮಾರ್, ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕೆ.ಸುದೀಪ್ ಕುಮಾರ್, ಸಾಂಸ್ಕೃತಿಕ ಮತ್ತು ಮೆರವಣಿಗೆ ಸಮಿತಿ ಅಧ್ಯಕ್ಷಾಗಿ ಕೆ.ಉದಯ್ ಕುಮಾರ್, ಪ್ರಚಾರ ಮತ್ತು ಅಲಂಕಾರ ಸಮಿತಿ ಅಧ್ಯಕ್ಷ ರಾಗಿ ವಿ.ಕದಿರೇಶ್, ಮನರಂಜನಾ ಸಮಿತಿ ಅಧ್ಯಕ್ಷರಾಗಿ ಬಷೀರ್ ಅಹಮದ್, ಕ್ರೀಡಾ ಸಮಿತಿ ಅಧ್ಯಕ್ಷರಾಗಿ ಚೆನ್ನಪ್ಪ, ದೇವರುಗಳ ಉತ್ಸವ ಸಮಿತಿ ಅಧ್ಯಕ್ಷರಾಗಿ ಬಿ.ಎಂ.ಮಂಜುನಾಥ್, ಅಯುಧ ಪೂಜೆ ಉಸ್ತುವಾರಿ ಮತ್ತು ಮಹಿಳಾ ಸಮಿತಿ ಅಧ್ಯಕ್ಷರಾಗಿ ಸರ್ವಮಂಗಳ ರವರುಗಳನ್ನು ನೇಮಕ ಮಾಡಲಾ ಗಿದೆ ಎಂದರು.
ಸೆ . ೨೨ ರ ಸೋಮವಾರ ಬೆಳಿಗ್ಗೆ ೧೦.೩೦ ಕ್ಕೆ ನಗರಸಭಾ ಕಚೇರಿಯ ಆವರಣದಲ್ಲಿ ನಗರದ ಸಮಾಜ ಸೇವಕರಾದ ಹೆಚ್.ವಿ.ಶಿವ ರುದ್ರಪ್ಪ ಈ ಭಾರಿಯ ದಸರಾ ಹಬ್ಬದ ಉದ್ಘಾಟನೆಯನ್ನು ನೆರವೇರಿ ಸಲಿzರೆ. ಅಂದು ಬೆಳಿಗ್ಗೆ ೯ ಗಂಟೆಯಿಂದ ಸಿzರ್ಥ ಅಂಧ ಕೇಂದ್ರದ ವಿಧ್ಯಾರ್ಥಿಗಳಿಂದ ಭಾಗ ಗೀತೆ ಹಾಗು ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ ೬ ಗಂಟೆಗೆ ಶಿವಮೊಗ್ಗದ ಝೇಂ ಕಾರ್ ಮೆಲೋಡಿಸ್ ರವರಿಂದ ಸುಗಮ ಸಂಗೀತಾ ಕಾರ್ಯಕ್ರಮ ನಡೆಯಲಿದೆ. ನಗರಸಭೆ ಅಧ್ಯಕ್ಷೆ ಜೆ.ಸಿ.ಗೀತಾ ರಾಜ್‌ಕುಮಾರ್ ಉದ್ಘಾಟನೆ ಮಾಡಲಿzರೆ.


ಸೆ.೨೩ ರ ಮಂಗಳವಾರ ಬೆಳಿಗ್ಗೆ ೯.೩೦ ಕ್ಕೆ ಜನ್ನಾಪುರದ ಬಂಟರ ಭವನದಲ್ಲಿ ಮಹಿಳೆಯರಿಂದ ಇಂಧನ ರಹಿತ ಅಡುಗೆ ಸ್ಪರ್ಧೆ ನಡೆಯಲಿದ್ದು ಆರ್ಟ್ ಆಫ್ ಲಿವಿಂಗ್ ನ ಯೋಗ ಶಿಕ್ಷಕಿ ಭಾಗ್ಯಾ ಮೂರ್ತಿ ಉದ್ಘಾಟನೆ ಮಾಡಲಿ zರೆ. ಸಂಜೆ ೬ ಗಂಟೆಗೆ ಜನ್ನಾಪುರದ ಡಾ.ಬಿ.ಆರ್.ಅಂಬೇಡ್ಕರ್ ಜನ ಪದ ಕಲಾ ಸಂಘದ ವತಿಯಿಂದ ಕಿರು ನಾಟಕ ಮತ್ತು ಜನಪದ ಗೀತೆಗಳ ಗಾಯನ ಹಾಗು ನ್ಯೂ ಟೌನ್ ಮಿತ್ರ ಕಲಾ ಮಂಡಳಿ ವತಿಯಿಂದ ಸಂಗ್ಯಾ ಬಾಳ್ಯ ನಾಟಕ ಪ್ರದ ರ್ಶನ ನಗರಸಭೆ ಕಚೇರಿ ಆವರಣ ದಲ್ಲಿ ನಡೆಯಲಿದ್ದು, ವಿ.ಕದಿರೇಶ್ ಉದ್ಘಾಟನೆ ಮಾಡಲಿzರೆ.
ಸೆ.೨೩ ಹಾಗು ೨೪ ರಂದು ಬೆಳಿಗ್ಗೆ ೯.೩೦ ಕ್ಕೆ ಕನಕ ಮಂಟಪ ಮೈದಾನದಲ್ಲಿ ಕ್ರೀಕೇಟ್ ಪಂದ್ಯಾ ವಳಿ ನಡೆಯಲಿದ್ದು ಬಿ.ಎಸ್. ಗಣೇಶ್ ಉದ್ಘಾಟನೆ ಮಾಡಲಿ zರೆ. ಸೆ.೨೪ ರ ಬುಧವಾರ ಸಂಜೆ ೬ ಗಂಟೆಗೆ ಭಧ್ರಾ ಸುಗಮ ಸಂಗೀತ ವೇದಿಕಯವರಿಂದ ಹಾಗು ಆರ್ ಜೆ ಕಲಾ ತಂಡದವರಿಂದ ಜನಪದ ಹಾಗು ಸುಗಮ ಸಂಗೀತ ಕಾರ್ಯ ಕ್ರಮ ನಗರಸಭೆ ಕಚೇರಿ ಆವರಣ ದಲ್ಲಿ ನಡೆಯಲಿದ್ದು, ಬಿ.ಕೆ. ಮೋಹನ್ ಉದ್ಘಾಟನೆ ಮಾಡಲಿ zರೆ.
ಸೆ. ೨೫ ರ ಗುರುವಾರ ಬೆಳಿಗ್ಗೆ ೯.೩೦ ಕ್ಕೆ ಕನಕ ಮಂಟಪ ಮೈದಾನ ದಲ್ಲಿ ಮಹಿಳಾ ಕ್ರೀಡಾ ಕೂಟ ನಡೆಯಲಿದ್ದು ನಗರದ ರಾಣಿ ರುದ್ರಮ್ಮ ಪ್ರಶಸ್ತಿ ವಿಜೇತರು ಹಾಗು ೩ ಬಾರಿ ಖೋ ಖೋ ರಾಷ್ಟ್ರ ಪ್ರಶಸ್ತಿ ವಿಜೇತರಾದ ಎಸ್.ಜನಕಿ ಸುರೇಶ್ ಪಂದ್ಯಾವಳಿಯನ್ನು ಉದ್ಘಾಟನೆ ಮಾಡಲಿzರೆ. ಅಂದು ಸಂಜೆ ೬ ಗಂಟೆಗೆ ಅಪರಂಜಿ ಅಭಿ ನಯ ಶಾಲೆವತಿಯಿಂದ ನಾಟಕ ಪ್ರದರ್ಶನ ಹಾಗು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ದಸರಾ ಕವಿ ಗೋಷ್ಟಿ ಮತ್ತು ಕಥೆ ಗೋಷ್ಟಿ ನಗರಸಭೆ ಕಚೇರಿ ಆವರಣ ದಲ್ಲಿ ನಡೆಯಲಿದ್ದು ಬಿ.ಟಿ.ನಾಗ ರಾಜ್ ಉದ್ಘಾಟನೆ ಮಾಡಲಿzರೆ.
ಸೆ. ೨೬ ರ ಶುಕ್ರವಾರ ಬೆಳಿಗ್ಗೆ ೧೦ ಗಂಟೆಗೆ ಕನಕಮಂಟಪ ಮೈದಾನ ದಲ್ಲಿ ಕುಸ್ತಿ ಪಂದ್ಯಾವಳಿ ನಡೆಯಲಿದೆ. ನಗರದ ಹಿರಿಯ ಕುಸ್ತಿ ಪಟು ಹೆಚ್.ವಾಸುದೇವ್ ಉದ್ಘಾಟನೆ ಮಾಡಲಿzರೆ. ಸಂಜೆ ೬ ಗಂಟೆಗೆ ಕಾಲೇಜು ವಿಧ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಗರಸಭೆ ಕಚೇರಿ ಆವರಣದಲ್ಲಿ ನಡೆಯಲಿದೆ. ಟಿಪ್ಪು ಸುಲ್ತಾನ್ ಉದ್ಘಾಟನೆ ಮಾಡಲಿzರೆ.
ಸೆ. ೨೭ ರ ಶನಿವಾರ ಬೆಳಿಗ್ಗೆ ೧೦ ಗಂಟೆಗೆ ಕನಕಮಂಟಪ ಮೈದಾನ ದಲ್ಲಿ ಕಬ್ಬಡ್ಡಿ ಪಂದ್ಯಾವಳಿ ನಡೆಯ ಲಿದೆ. ನಗರದ ಹಿರಿಯ ಕಬ್ಬಡ್ಡಿ ಆಟಗಾರ ಹಾಗು ಕಬ್ಬಡ್ಡಿ ಕೇಸರಿ ವಿಜೇತರಾದ ಹೆಚ್.ಆರ್.ರಂಗ ನಾಥ್ ಉದ್ಘಾಟನೆ ಮಾಡಲಿzರೆ. ಸೆ. ೨೮ ರ ಭಾನುವಾರ ಬೆಳಿಗ್ಗೆ ೯.೩೦ ಕ್ಕೆ ನ್ಯೂಟೌನ್ ಸರ್ ಎಂ.ವಿ.ಒಳಾಂ ಗಣ ಕ್ರೀಡಾಂಗಣದಲ್ಲಿ ಶಟಲ್ ಬ್ಯಾಟ್‌ಮಿಂಟನ್ ಸ್ಪರ್ಧೆ ನಡೆಯ ಲಿದ್ದು, ಸೆಂಟ್ ಜೋಸೇಫ್ ಶಾಲೆ ಯ ಕಾರ್ಯದರ್ಶಿ ರಾಬರ್ಟ್ ಡಿಸೋಜ ಉದ್ಘಾಟನೆ ಮಾಡಲಿ zರೆ. ಸಂಜೆ ೬ ಗಂಟೆಗೆ ಕನಕ ಮಂಟಪ ಮೈದಾನದಲ್ಲಿ ಮಹಿಳಾ ಸಂಘಗಳ ವತಿಯಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ.
ಸೆ.೨೯ ರ ಸೋಮವಾರ ಸಂಜೆ ೬ ಗಂಟೆಗೆ ಕನಕ ಮಂಟಪ ಮೈದಾನದಲ್ಲಿ ಚರಣ್ ಸಂಗೀತ ಮೆಲೋಡಿ ಆರ್ಕೆಸ್ಟ್ರಾ ದವರಿಂದ ರಸಮಂಜರಿ ಕಾರ್ಯಕ್ರಮ ನಡೆ ಯಲಿದ್ದು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟನೆ ಮಾಡಲಿ zರೆ. ಸೆ.೩೦ ರ ಮಂಗಳವಾರ ಸಂಜೆ ೬ ಗಂಟೆಗೆ ಕನಕ ಮಂಟಪ ಮೈದಾ ನದಲ್ಲಿ ಜೀ ಕನ್ನಡ ವಾಹಿನಿಯ ಹೆಸರಾಂತ ಕಾಮಿಡಿ ಕಿಲಾಡಿಗಳು ಹಾಗು ಕನ್ನಡ ಕೋಗಿಲೆ ಖ್ಯಾತಿಯ ಬೆಂಗಳೂರು ಗಾಯಕರಿಂದ ಅಮೋಘ ನೃತ್ಯ, ಸಂಗೀತಾ, ಕಾಮಿಡಿ ಕಾರ್ಯಕ್ರಮ ನಡೆಯ ಲಿದ್ದು ಶಾಸಕ ಬಿ.ಕೆ.ಸಂಗಮೇಶ್ವರ ಉದ್ಘಾಟನೆ ಮಾಡಲಿzರೆ.
ಅ. ೧ ರ ಬುಧವಾರ ಬೆಳಿಗ್ಗೆ ೧೦ ಗಂಟೆಗೆ ನಗರಸಭೆ ಕಚೇರಿ ಮುಂಭಾಗದಲ್ಲಿ ಆಯುಧ ಪೂಜೆ ಕಾರ್ಯಕ್ರಮ ನಡೆಯಲಿದ್ದು, ನಗರಸಭೆ ಅಧ್ಯಕ್ಷೆ ಜೆ.ಸಿ.ಗೀತಾ ರಾಜ್‌ಕುಮಾರ್ ಉದ್ಘಾಟನೆ ಮಾಡಲಿzರೆ. ಅ. ೨ ಗುರುವಾರ ಮಧ್ಯಾಹ್ನ ೩ ಗಂಟೆಗೆ ಬಿಹೆಚ್ ರಸ್ತೆ ಲೋಯರ್ ಹುತ್ತಾದ ಬಳಿ ಇರುವ ಶ್ರೀ ತಿರುಮಲ ವೆಂಕಟೇಶ್ವರ ದೇವಸ್ಥಾನದ ಬಳಿ ದಸರಾ ಮೆರವಣಿಗೆಯನ್ನು ಶಾಸಕ ಬಿ.ಕೆ.ಸಂಗಮೇಶ್ವರ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟನೆ ಮಾಡಲಿzರೆ. ಅಂದು ಸಂಜೆ ೬ ಗಂಟೆಗೆ ಹಳೇ ನಗರದ ಕನಕ ಮಂಟಪ ಮೈದಾನದಲ್ಲಿ ತಹಸಿ ಲ್ದಾರ್ ಪರಸಪ್ಪ ಕುರುಬರ ಬನ್ನಿ ಮುಡಿಯುವ ಮೂಲಕ ದಸರಾ ಹಬ್ಬಕ್ಕೆ ತೆರೆ ಎಳೆಯಲಿzರೆ.
ವೇದಿಕೆಯಲ್ಲಿ ನಾಡಹಬ್ಬ ದಸರಾ ಅಂಗವಾಗಿ ನಡೆಯುವ ಸಮಿತಿಗಳ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ನಗರಸಭಾ ಸದಸ್ಯರು ನಗರಸಭಾ ಕಚೇರಿ ಅಧಿಕಾರಿಗಳು ಪಾಲ್ಗೊಂಡಿದ್ದರು.