ಭದ್ರಾವತಿ ನಗರಸಭೆ ಅಯವ್ಯಯ: ೧.೨೮ ಕೋಟಿ ಉಳಿತಾಯ ಬಜೆಟ್ ಮಂಡನೆ…
ಭದ್ರಾವತಿ: ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್ ೨೦೨೪- ೨೫ರ ಅಯವ್ಯಯ ಮಂಡನೆ ಮಾಡಿದ್ದು ರೂ ೧.೨೮ ಕೋಟಿ ರೂಗಳ ಉಳಿತಾಯ ಬಜೆಟ್ ಮಂಡಿಸಿದರು.
ಅಯವ್ಯಯದ ಆರಂಭಿಕ ಶಿಲ್ಕು ೪೧೬೭.೮೨ ಲಕ್ಷ, ಒಟ್ಟು ಸ್ವೀಕೃತಿರೂ ೧೧.೨೦೭.೨೧ ಲಕ್ಷ, ರಾಜಸ್ವ ಸ್ವೀಕೃತಿಗಳು ರೂ ೪೭೪೩.೯೬ ಲಕ್ಷ, ಬಂಡವಾಳ ಸ್ವಿಕೃತಿಗಳು ರೂ ೪೨೬೨.೨೫ ಲಕ್ಷ, ಆಸಾಧಾರಣ ಸ್ವಿಕೃತಿಗಳು ರೂ ೨೨೦೧. ಲಕ್ಷ ರೂಗಳು. ಒಟ್ಟು ವೆಚ್ಚ ರೂ ೧೧೨೦೫.೯೩ ಲಕ್ಷ, ರಾಜಸ್ವ ಪಾವತಿಗಳು ರೂ ೪೬೨೯.೭೯.೦೦ ಲಕ್ಷ, ಬಂಡವಾಳ ಪಾವತಿಗಳು ರೂ ೫೨೮೦.೧೪ ಲಕ್ಷ, ಆಸಾಧಾರಣ ಪಾವತಿಗಳು ರೂ ೧೨೯೬ ಲಕ್ಷ. ಅಯವ್ಯಯದ ಅಖೈರು ಶಿಲ್ಕು ರೂ ೪೧೬೯.೧೦ ಲಕ್ಷ, ಒಟ್ಟು ಉಳಿತಾಯ ೧.೨೮ ಕೋಟಿರೂಗಳು.
ಸಭೆ ಪ್ರಾರಂಭ ಆಗುತ್ತಿದ್ದಂತೆ ನಗರಸಭಾ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಪತ್ರಿಕಾ ವಿತರಕರಿಗೆ ಶಿವಮೊಗ್ಗ ನಗರಸಭೆಯಲ್ಲಿ ಕ್ಷೇಮನಿಧಿ ಕಾಯ್ದಿರಿಸಿದ್ದು ಅದರಂತೆ ಇಲ್ಲೂ ಮೀಸಲಿಡಿ ಎಂದರೆ, ಚನ್ನಪ್ಪ ಮಾತನಾಡಿ, ಈ ಭಾರಿ ಮಂಡಿಸಿರುವ ಬಜೆಟ್‌ನಲ್ಲಿ ಯಾವುದೆ ಹೊಸತನ ಇಲ್ಲ. ಎ ಹಳೆಯ ಸಂಗತಿ ವಿಷಯಗಳೆ ಪುನರಾವರ್ತನೆ ಆಗಿವೆ. ಹತ್ತು ವರ್ಷಗಳ ಕಾಲದ ಅಂಶಗಳು ಯೋಜನೆಗಳೆ ಪುನಃ ಇದೆ. ಆದರೆ ಬಹು ಮುಖ್ಯವಾಗಿ ಬಜೆಟ್‌ನಲ್ಲಿ ತಿಳಿಸಿದಂತೆ ನಗರಸಭೆಗೆ ಆದಾಯ ಬಂದಿಲ್ಲ ಎಂದು ಆರೋಪಿಸಿ ಯಾಕೆ ವಸೂಲಾತಿ ಮಾಡಿಲ್ಲ ಎಂದು ಪ್ರಶ್ನಿಸಿದ್ದು ಈ ಭಾರಿಯ ಬಜೆಟ್ ಹೈಲೈಟ್ ಆಗಿತ್ತು.
ಪ್ರತಿ ಭಾರಿಯೂ ಕೇವಲ ವಿಷಯಗಳ ಬಗ್ಗೆ ಕೆಲವೆ ಕೆಲ ಸದಸ್ಯರುಗಳು ಚರ್ಚೆ ಮಾಡುತ್ತಿದ್ದರೆ ಹೊರತು ಪ್ರಮುಖವಾಗಿ ನಗರಸಭೆಗೆ ಬರಬೇಕಾದ ಆದಾಯದ ಬಗ್ಗೆ ಯಾರು ಪ್ರಶ್ನಿಸುತ್ತಿರಲಿಲ್ಲ ಹಾಗು ಈ ಬಗ್ಗೆ ಯಾರು ಚಿಂತನೆ ಮಾಡುತ್ತಿರಲಿಲ್ಲ. ಈ ಭಾರಿ ಚನ್ನಪ್ಪ ಪ್ರಶ್ನಿಸಿದ್ದು ವಿಶೇಷವಾಗಿ ಸಭೆಯ ಗಮನ ಸೆಳೆಯಿತು.
ಸಿಎನ್ ರಸ್ತೆಯನ್ನು ಡಾ.ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡಿದ್ದು ಅದು ಇನ್ನೂ ಕಾರ್ಯಗತವಾಗದಿರುವ ಬಗ್ಗೆ, ಫುಡ್ ಕೋರ್ಟ್ ಸ್ಥಾಪನೆ ಬಗ್ಗೆ, ಹಾಗು ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ಬಜೆಟ್‌ನಲ್ಲಿ ಯಾವುದೆ ಅನುದಾನವನ್ನು ಕಾಯ್ದಿರಿಸದಿರುವುದರ ಬಗ್ಗೆ ಆಕ್ಷೇಪಿಸಿದರು, ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆ ಎಂದು ಆ ಸಮುದಾಯದವರಿಗೆ ಅನ್ಯಾಯ ಮಾಡುವುದು ಸರಿಯಲ್ಲ ಎಂದರಲ್ಲದೆ ಈ ಬಗ್ಗೆ ಮುಂದಿನ ದಿನಗಳಲ್ಲಿ ಕೇಸ್ ದಾಖಲಿಸ ಬೇಕಾಗುತ್ತದೆ ಎಂದು ಬಿ.ಟಿ. ನಾಗರಾಜ್ ಎಚ್ಚರಿಸಿದರು.
ಬಿ.ಕೆ.ಮೋಹನ್ ಮಾತನಾಡಿ ಪ್ರಮುಖ ಆದಾಯದ ಮೂಲಗಳಾದ ಕಟ್ಟಡ ಪರವಾನಿಗೆ ವ್ಯಾಪಾರ ಪರವಾನಿಗೆ, ನಗರದ ತುಂಬೆ ಫ್ಲೆಕ್ಸ್ ಆಳವಡಿಸಲು ಶುಲ್ಕ ವಿಧಿಸದಿರುವ ಬಗ್ಗೆ ಆರೋಪಸಿ ಸರ್ಕಾರದ ಕಾರ್ಯಕ್ರಮಗಳನ್ನು ಹೊರತು ಪಡಿಸಿ ಉಳಿದ ಎ ಖಾಸಗಿ ಕಾರ್ಯಕ್ರಮಗಳ ಫ್ಲೆಕ್ಸ್‌ಗಳನ್ನು ಹಾಕಲು ಕಡ್ಡಾಯವಾಗಿ ಶುಲ್ಕ ವಿಧಿಸಿ. ಅನಧಿಕತ ಫ್ಲೆಕ್ಸಿಗಳನ್ನು ಕಿತ್ತು ಹಾಕಿ ಎಂದರು.
ಚನ್ನಪ್ಪ ಮಾತನಾಡಿ ಕೇವಲ ಎಸ್‌ಸಿ ಎಸ್‌ಟಿ ಹಾಗು ಹಿಂದುಳಿದ ಸಮುದಾಯಗಳ ಬಗ್ಗೆ ಮಾತ್ರ ಗಮನ ನೀಡದೆ ಇತರ ಜತಿಗಳಲ್ಲಿ ಹಿಂದುಳಿದವರ ಬಗ್ಗೆ ನಗರಸಭೆ ವತಿಯಿಂದ ನೀಡುವ ಸಹಾಯದ ಬಗ್ಗೆ ಮಾತನಾಡಿದರು. ನಗರಸಭೆ ವತಿಯಿಂದ ರಂಗಪ್ಪ ವತ್ತದ ಬಳಿ ಇರುವ ಜೈ ಭೀಮ್ ನಗರದಲ್ಲಿ ಪೌರ ಕಾರ್ಮಿಕರುಗಳಿಗೆ ವಸತಿ ಸಮುಚ್ಚಯ ನಿರ್ಮಿಸಿದ್ದು ಅದನ್ನು ತ್ವರಿತವಾಗಿ ಕಾಮಗಾರಿ ಮುಗಿಸಿ ಅರ್ಹ ಕಾರ್ಮಿಕರಿಗೆ ನಿಯಮಾನುಸಾರ ದಾಖಲಾತಿ ಗಳನ್ನು ಪರೀಕ್ಷಿಸಿ ವಸತಿಗಳನ್ನು ಹಂಚಿಕೆ ಮಾಡಿ ಇದರಲ್ಲಿ ಯಾವುದೆ ಕಾರಣಕ್ಕೂ ನಿಧಾನ ಮಾಡಬೇಡಿ ಎಂದರು.
ಪಕ್ಷೇತರ ಸದಸ್ಯ ಮೋಹನ್ ಹಾಗು ಕಾಂಗ್ರೆಸ್‌ನ ಟಿಪ್ಪು ಮಾತ ನಾಡಿ ನಗರಸಭೆ ಮೊದಲು ಆದಾಯ ಬರುವಂತೆ ಮಾಡಿ ಅದಕ್ಕೆ ಬೇಕಾದ ಸಲಹೆ ಸಹಕಾರ ತಾವೆ ಸ್ವತಃ ನೀಡುವುದಾಗಿ ಮತ್ತು ಅದಕ್ಕೆ ಬೇಕಾದ ದಾರಿಯನ್ನು ತಾವು ತೋರಿಸುವುದಾಗಿ ಹೇಳಿ ಸಭೆಯಲ್ಲಿ ಅಚ್ಚರಿ ಮೂಡಿಸಿದರು.
ಟಿವಿ ವೀಕ್ಷಿಸುವ ಕೇಬಲ್‌ಗೆ ತಿಂಗಳಿಗೆ ೩೦೦ ರೂ, ಆದರೆ ಕುಡಿಯುವ ನೀರಿನ ಕಂದಾಯಕ್ಕೆ ೧೨೦ರು ನೀಡಲು ಹಿಂದೆ ಮುಂದೆ ನೋಡುತ್ತಾರೆ. ಹತ್ತು ಸಾವಿರ ಆದಾಯ ಬಂದರೆ ಒಂದು ಲಕ್ಷ ರೂ ಖರ್ಚು ಅಥವ ನಷ್ಟ ತೋರಿಸು ತ್ತಾರೆ, ಹೀಗಾದಲ್ಲಿ ನಗರಸಭೆ ಹೇಗೆ ನಡೆಯಬೇಕು. ಆದಾಯದ ಬಗ್ಗೆ ಹಾಗು ಸೋರಿಕೆಯ ಬಗ್ಗೆ ಯಾರೂ ನಿಗಾವಹಿಸುತ್ತಿಲ್ಲ. ಅಧಿಕಾರಿಗಳು ಹಾಗು ಸಿಬ್ಭಂದಿಗಳು ಬೇಜವಾಬ್ದಾರಿ ತೋರುತ್ತಿzರೆ. ಕಂದಾಯ ವಸೂಲು ಮಾಡದ ನಷ್ಟಕ್ಕೆ ಕಾರಣ ಆಗುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ಏನು ಕ್ರಮ ಕೈಗೊಂಡಿದ್ದಿರಾ ಎಂದು ಆಕ್ರೋಶ ವ್ಯಕ್ತಪಡಿಸಿ, ನಗರಸಭೆ ಅಧಿಕಾರಿಗಳು ಮತ್ತು ಸದಸ್ಯರುಗಳು ಸರಿಯಾಗಿ ಪ್ರಾಮಾಣಿಕತೆ ಹಾಗು ನಿಷ್ಟೆಯಿಂದ ಕಾರ್ಯ ನಿರ್ವಹಿಸಿ ನಗರಸಭೆಗೆ ಬರಬೇಕಾದ ಆದಾಯವನ್ನು ಸರಿಯಾಗಿ ವಸೂಲಿ ಮಾಡಿ ಕ್ರೋಡಿಕರಣ ಮಾಡಿದರೆ ಸರ್ಕಾರದ ಯಾವುದೆ ಅನುದಾನ ಇಲ್ಲದೆ ಊರಿನ ಅಭಿವಧ್ಧಿ ಮಾಡಬಹು ಎಂದರು.
ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತ್‌ರಾಜ್, ಆಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಂದಾಯಾಧಿಕಾರಿ ರಾಜ್ ಕುಮಾರ್ ಸೇರಿದಂತೆ ನಗರಸಭೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಭಂದಿಗಳು ಹಾಜರಿದ್ದರು.