ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಭದ್ರಾವತಿ: ಕಿಡಿಗೇಡಿಗಳಿಂದ ಪಾಕಿಸ್ತಾನ ಜಿಂದಾಬಾದ್ ಘೋಷಣೆ;ಹಿಂದೂ ಪರ ಸಂಘಟನೆಗಳ ತೀವ್ರ ಆಕ್ರೋಶ…

Share Below Link

ಭದ್ರಾವತಿ : ಸ್ವಾತಂತ್ರ್ಯ ಪೂರ್ವದಲ್ಲಿ ಬ್ರೀಟಿಷರ ವಿರುದ್ಧ ಸಂಘಟನೆ ಮಾಡಲು ಬಾಲಗಂಗಾಧರ ತಿಲಕ್ ರವರು ಗಣಪತಿ ಹಬ್ಬ ಆಚರಿಸುವ ಮೂಲ ಕ ಭಾರತೀಯರನ್ನು ಸಂಘಟಿಸಿದರೆ, ಇಂದು ಅದೇ ಗಣಪತಿಯ ಹಬ್ಬವನ್ನು ನಿರ್ಭೀತಿ ಯಿಂದ ಆಚರಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಹಿಂದೂ ಪರ ಸಂಘಟನೆಗಳ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದರು.
ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವುದರ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹಬ್ಬದ ನೆಪದಲ್ಲಿ ದೇಶ ದ್ರೋಹದ ಘೋಷಣೆಗಳು ಕೂಗುವ ಅವಶ್ಯಕತೆ ಏನಿತ್ತು. ಅಂತಹ ದೇಶ ದ್ರೊಹಿಗಳ ಮೇಲೆ ಸರಿಯಾದ ಕಾನೂನು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಗಳು ಕ್ರಮ ಕೈಗೊಳ್ಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಮುಸ್ಲೀಂ ಸಮಾಜದ ನೈಜ ಮುಖಂಡರುಗಳು ಇಂತಹ ಘೋಷಣೆ ಕೂಗಿದ ಕಿಡಿ ಗೇಡಿಗಳನ್ನು ಅವರೆ ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿ ಕಾನೂನು ಕ್ರಮಕ್ಕೆ ಸಹಕರಿಸಿದ್ದರೆ ಅವರ ಘನತೆ ಹೆಚ್ಚುತ್ತಿತ್ತು. ಆದರೆ ಆವರು ಯಾರೂ ಈ ಕೆಲಸ ಮಾಡುವುದಿಲ್ಲ. ಒಂದು ರೀತಿಯಲ್ಲಿ ಅವರ ಪರೋಕ್ಷವಾದ ಸಹಕಾರ ಸಹಾ ಯಿದೆ ಎಂದು ಆರೋಪಿಸಿದರು.
ಮೈಸೂರಿನಲ್ಲಿ ಚಾಮುಂಡಿ ದೇವರ ಪೂಜೆಗೆ ಹೋಗಲು ಅಲ್ಲಿ ಶಾಸಕ ಶ್ರೀವತ್ಸ ಅವರಿಗೆ ಪೊಲೀಸರು ಶಾಂತಿ ಸುವ್ಯವಸ್ಥೆ ನೆಪದಲ್ಲಿ ಬಂಧಿಸುತ್ತಾರೆ. ಆದರೆ ಭದ್ರಾವತಿಯಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ದೇದ್ರೋಹದ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗುವುದು ಅಕ್ಷಮ್ಯ ಅಪರಾಧವಾಗಿದ್ದು ಅಂತಹವರನ್ನು ಇದುವರೆಗೂ ಬಂಧಿಸದಿರುವುದು ದುರ್ದೈವದ ಸಂಗತಿ. ಇವರ ಮೇಲೆ ಕ್ರಮಕಗೈ ಗೊಳ್ಳಲು ಯಾಕೆ ಪೊಲೀಸರಿಗೆ ಹೆದರಿಕೆ. ಯಾರು ಕ್ರಮ ಕೈಗೊಳ್ಳ ಬಾರದು ಎಂದು ಒತ್ತಡ ಹಾಕಿ zರಾ ಎಂದು ಪ್ರಶ್ನಿಸಿದರು.
ನಗರದ ತುಂಬೆ ಕಟ್ಟಿರುವ ಬಂಟಿಂಗ್ಸ್, ಫ್ಲೆ?ಗಳನ್ನು ಲೈಟಿಂಗ್ಸ್ ಗಳ್ನು ಕೂಡಲೆ ತೆರವುಗೊಳಿಸಬೇಕು. ಅದಕ್ಕೆ ಕಾರಣರಾದ ನಗರಸಭೆ ಆಯುಕ್ತರು, ಮೆಸ್ಕಾಂ ಇಂಜೀನಿಯರ್ ಹಾಗು ಡಿವೈಎಸ್‌ಪಿ ರವರುಸ್ಥಳಕ್ಕೆ ಆಗಮಿಸಿ ಇದಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಪಟ್ಟು ಹಿಡಿದು ಸುಮಾರು ಮೂರು ಗಂಟೆಗಳ ಕಾಲ ಧರಣಿ ಕುಳಿತರು. ಅವರು ಬರದಿದ್ದರೆ ಕಾರ್ಯಕರ್ತರುಗಳೆ ತೆರವು ಗೊಳಿಸುತ್ತಾರೆ ಎಂದು ಬಿಜೆಪಿ ಅಧ್ಯಕ್ಷ ಜಿ.ಧರ್ಮ ಪ್ರಸಾದ್ ಘೋಷಣೆ ಮಾಡಿದರು.
ಕೊನೆಗೆ ನಿರ್ವಾಯವಿಲ್ಲದೆ ನಗರಸಭೆ ಆಯುಕ್ತ ಹೇಮಂತ್, ಮೆಸ್ಕಾಂ ಎಇಇ ಇಂಜೀನೀಯರ್ ಬೀರಪ್ಪ ಹಾಗು ಡಿವೈಎಸ್‌ಪಿ ಕೆ.ಆರ್.ನಾಗರಾಜು ರವರುಗಳು ರವರುಗಳು ಸ್ಥಳಕ್ಕೆ ಆಗಮಿಸಿದರು.


ಆಯುಕ್ತರು ಇಂದು ರಾತ್ರಿ ಎ ಬಂಟಿಂಗ್ಸ್‌ಗಳ್ನು ತೆರವು ಮಾಡಲಾಗುವುದು. ಮೆಸ್ಕಾಂ ಇಂಜೀನೀಯರ್ ಲೈಟಿಂಗ್ಸ್‌ಗಳನ್ನು ತೆರವು ಮಾಡುವುದು ಹಾಗೂ ಡಿವೈಎಸ್‌ಪಿ ಘೋಷಣೆ ಕೂಗಿದ ದೇಶ ದ್ರೊಹಿಗಳ ಮೇಲೆ ಕೇಸ್ ದಾಖಲಿಸುವುದಾಗಿ ತಿಳಿಸಿದರು. ಆದರೆ ಅದಕ್ಕೆ ಒಪ್ಪದ ಪ್ರತಿಭಟನಾಕಾರರು ಸರಿಯಾದ ಕ್ರಮ ಕೈಗೊಳ್ಳಬೇಕು ಹಾಗು ದೇಶ ದ್ರೋಹದ ಕಲಂ ಅನ್ವಯ ಕೇಸನ್ನು ದಾಖಲಿಸಬೇಕು ಎಂದು ಪಟ್ಟುಹಿಡಿದಾಗ ಅವರನ್ನು ಪತ್ತೆ ಮಾಡಲು ಮೂರು ತಂಡಗಳನ್ನು ರಚಿಸಿದ್ದು ಅವರನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನಾಕಾ ರರು ಶಾಂತರಾದರು.
ನಂತರ ತರೀಕೆರೆ ರಸ್ತೆ ಹಾಗು ಗಾಂಧಿ ವೃತ್ತದಲ್ಲಿ ಪಾಕಿಸ್ತಾನ ಘೋಷಣೆ ಕೂಗಿದ್ದ ಪರಿಣಾಮ ಪ್ರತಿಭಟನಾಕಾರರು ಮಾಧವಾ ಚಾರ್ ವೃತ್ತದಿಂದ ತರೀಕೆರೆ ರಸ್ತೆ ಹಾಗು ಗಾಂಧಿ ವೃತ್ತದವರೆಗೂ ರಾಷ್ಟ್ರ ಧ್ವಜದೊಂದಿಗೆ ಮೆರವಣಿಗೆಯಲ್ಲಿ ಸಾಗಿ ಅಲ್ಲಿ ಬಾರತ ದೇಶದ ಪರ ಘೋಷ ಣೆಗಳನ್ನು ಕೂಗಿ ಟೈರ್‌ಗಳನ್ನು ಸುಟ್ಟು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ನಂತರ ರಾಷ್ಟ್ರ ಗೀತೆಯೊಂದಿಗೆ ಪ್ರತಿಭಟನೆಯನ್ನು ಮುಕ್ತಾಯ ಗೊಳಿಸಿದರು.
ಬಿಜೆಪಿ ಜಿಧ್ಯಕ್ಷ ಕೆ.ಎನ್. ಜಗದೀಶ್, ಚನ್ನೇಶ್, ಕೂಡ್ಲಿಗೆರೆ ಹಾಲೇಶ್, ಕೆ.ಹೆಚ್.ತೀಥಯ್ಯ, ಸಿಮೆಂಟ್ ಮಂಜುನಾಥ್, ಜಿ.ಆನಂದ, ದುಗ್ಗೇಶ್, ವಿಶ್ವನಾಥ್ ರಾವ್, ಹನುಮಂತ ನಾಯ್ಕ್, ಡಿ.ಆರ್. ಶಿವಕುಮಾರ್, ಹಾ. ರಾಮಪ್ಪ, ಆರ್.ಕರುಣಾ ಮೂರ್ತಿ, ಬಿ.ಜಿ. ರಾಮಲಿಂಗಯ್ಯ, ಧನುಷ್, ಕಾ.ರಾ. ನಾಗರಾಜ್, ರಾಜಶೇಖರ್, ಆಶಾ. ಲತಾ, ಸುಲೋಚನಾ, ಪ್ರೇಮ, ಕವಿತಾ, ಇತರರು ಹಾಗು ವಿವಿಧ ಹಿಂದೂ ಸಂಘನೆಗಳ ಪದಾಧಿಕಾರಿಗಳು ಕಾರ್‍ಯ ಕರ್ತರುಗಳು ಭಾಗವಹಿಸಿದ್ದರು.