ಭದ್ರಾವತಿ ದಸರಾ: ಇಂಧನ ರಹಿತ ಅಡುಗೆ ಸ್ಪರ್ಧೆ ವಿಜೇತ ತಂಡಗಳಿಗೆ ಬಹುಮಾನ ವಿತರಣೆ

ಭದ್ರಾವತಿ : ನಗರಸಭೆ ವತಿಯಿಂದ ದಸರಾ ಹಬ್ಬದ ನಿಮಿತ್ತ ಇಂಧನ ರಹಿತ ಅಡುಗೆ ಸ್ಪರ್ಧೆಯನ್ನು ಬಿ.ಹೆಚ್. ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿತ್ತು.
ಆರ್ಟ್ ಆಫ್ ಲಿವಿಂಗ್ ನ ಯೋಗ ಶಿಕ್ಷಕಿ ಭಾಗ್ಯ ಮೂರ್ತಿ ಸ್ಪರ್ಧೆಯನ್ನು ಉದ್ಘಾಟಿಸಿದರು. ಶಾಸಕ ಬಿ.ಕೆ.ಸಂಗಮೇಶ್ವರ ಅವರು ಸ್ಪರ್ಧೆಯಲ್ಲಿ ವಿಜೇತರಾದ ಮಹಿಳಾ ತಂಡದವರಿಗೆ ಬಹುಮಾನಗಳನ್ನು ವಿತರಿಸಿದರು.
ಈ ಸ್ಪರ್ಧೆಯಲ್ಲಿ ಸಿzರೂಢ ನಗರದ ಶಾಶ್ವತಿ ಮಹಿಳಾ ತಂಡ ಪ್ರಥಮ, ಕೆಎಸ್‌ಬಿ ಮಹಿಳಾ ವೇದಿಕೆ ದ್ವೀತಿಯ, ಕೆಂಚಮ್ಮ ಮಹಿಳಾ ತಂಡ ತೃತಿಯ ಬಹುಮಾಗಳನ್ನು ಪಡೆದರು. ಮಹಿಳಾ ತಂಡಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಶಾಸಕ ಬಿ.ಕೆ.ಸಂಗಮೇಶ್ವರ ಹಾಗು ಸರ್ವಮಂಗಳ ಭೈರಪ್ಪ ತಲಾ ೫೦೦ ರೂಗಳಂತೆ ಒಟ್ಟು ಒಂದು ಸಾವಿರ ರೂಗಳನ್ನು ಭಾಗವಹಿಸಿದ ಎ ೨೫ ತಂಡಗಳಿಗೆ ವಿತರಿಸಿದರು.
ವೇದಿಕೆಯಲ್ಲಿ ಅಧ್ಯಕ್ಷೆ ಜೆ.ಸಿ.ಗೀತಾ ರಾಜ್‌ಕುಮಾರ್, ಸರ್ವಮಂಗಳ ಭೈರಪ್ಪ, ಸಮುದಾಯ ಸಂಘಟನಾಧಿಕಾರಿ ಸುಹಾಸಿನಿ, ನಗರಸಭಾ ಸದಸ್ಯರುಗಳಾದ ಅನುಸುಧಾ ಮೋಹನ್ ಪಳನಿ, ಲತಾ, ಶಶಿಕಲಾ, ಅನುಪಮಾ, ಪಲ್ಲವಿ, ಪ್ರೇಮಾ, ಮಂಜುಳಾ ಹಾಗು ಮಹಳಾ ದಸರಾ ಸಮಿತಿ ಸದಸ್ಯರುಗಳು ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

