ಭದ್ರಾವತಿ: ಜನಸ್ಪಂದನ ಸೇವಾ ಟ್ರಸ್ಟ್ನಿಂದ ಪೌರಾಯುಕ್ತರಿಗೆ ಮನವಿ
ಭದ್ರಾವತಿ : ಜನ್ನಾಪುರ ಶ್ರೀ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಛೇರ್ಮನ್ ಹಾಗೂ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಹೋರಾಟ ಪ್ರಾರಂಭಿಸಿದ ೫೦ನೇ ವರ್ಷದ ನೆನಪಿಗಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಗರಸಭೆ ಪೌರಾಯುಕ್ತ ಕೆ.ಎನ್ ಹೇಮಂತ್ರಿಗೆ ಮನವಿ ಸಲ್ಲಿಸಿ ಒತ್ತಾಯಿಸಿzರೆ.
ನಗರಸಭೆ ನ್ಯೂಟೌನ್ ಶಾಖಾ ಕಛೇರಿ ಆವರಣಕ್ಕೆ ಒಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಆವರಣದಲ್ಲಿ `ಮೆಸ್ಕಾಂ ಕೌಂಟರ್, ಆಧಾರ್ ಕೌಂಟರ್ ಮತ್ತು ಅಂಚೆ ಕಛೇರಿ ಕಾರ್ಯಾರಂಭ ಮಾಡಲು ಸ್ಥಳಾವಕಾಶ ಕಲ್ಪಿಸಿಕೊಡುವುದು. ನಗರಸಭೆ ವತಿಯಿಂದ ಹಸಿಕಸ- ಒಣಕಸ ಸಂಗ್ರಹಣೆ ಮಾಡುವ ಸಂಬಂಧ ಮನೆ ಮನೆಗಳಿಗೆ ಸಮರ್ಪಕವಾಗಿ ಕಸದ ಡಬ್ಬಿಗಳನ್ನು ವಿತರಣೆ ಮಾಡದೇ ಇರುವುದ ರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಿ ಕಸದ ಡಬ್ಬಿಗಳನ್ನು ವಿತರಣೆ ಮಾಡದೆ ಇರುವ ಮನೆಗಳಿಗೆ ಕಸದ ಡಬ್ಬಿಗಳನ್ನು ವಿತರಿಸಲು ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಯಿತು.
ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬಿ.ವಿ. ಗಿರಿ, ಸಂಚಾಲಕ ಎಂ.ವಿ ಚಂದ್ರಶೇಖರ್, ನಗರಸಭೆ ಹಿರಿಯ ಸದಸ್ಯ ವಿ. ಕದಿರೇಶ್, ಮಾಜಿ ಸದಸ್ಯ ಶಶಿಧರಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

