ಭದ್ರಾ ವನ್ಯಜೀವಿ ಅಭಯಾರಣ್ಯ ನಿಸರ್ಗ ಸಂಪತ್ತಿನ ತಾಣ…
ಲೇಖನ : ಯೋಗೀಶ್ .ಸಿ.ಎಸ್. , ಪತ್ರಿಕೋದ್ಯಮ ವಿದ್ಯಾರ್ಥಿ
ಪ್ರಕೃತಿಯ ಮಡಿಲಿನಲ್ಲಿರುವ ಭದ್ರಾ ವನ್ಯಜೀವಿ ಅಭಯಾ ರಣ್ಯವು ಇಂದು ಅನೇಕ ಜೀವಸಂಕುಲಗಳಿಗೆ ಆಶ್ರಯ ತಾಣ ವಾಗಿದೆ. ಈ ಭದ್ರಾ ಅಭಯಾರ ಣ್ಯವು ಚಿಕ್ಕಮಗಳೂರು ಜಿಯಿಂದ ೩೮ಕಿಮೀ ದೂರ ದಲ್ಲಿದೆ. ಇದು ಚಿಕ್ಕಮಗಳೂರು ಜಿಯ ಪ್ರಮುಖ ತಾಲೂಕು ಕೇಂದ್ರವಾದ ತರೀಕೆರೆಗೆ ಸೇರಿ zಗಿದ್ದು ತರೀಕೆರೆಯಿಂದ ೨೦ ಕಿಮೀ ಪಶ್ಚಿಮ ದಿಕ್ಕಿನಲ್ಲಿ ದುಗ್ಲಾ ಪುರ- ಲಕ್ಕವಳ್ಳಿ ಮಾರ್ಗವಾಗಿ ಸಾಗಿದರೆ ಭದ್ರಾ ವನ್ಯಜೀವಿ ಅಭ ಯಾರಣ್ಯವನ್ನು ಕಾಣಬಹುದಾಗಿದೆ.
ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಯ ನಡುವೆ ಇರುವ ವನ್ಯಜೀವಿ ಅಭಯಾ ರಣ್ಯವು ಅನೇಕ ಪಕ್ಷಿಗಳು ಮತ್ತು ಪ್ರಾಣಿಗಳನ್ನು ಮೂಲ ಅಥವಾ ತಮ್ಮ ಸ್ಥಳೀಯ ಆವಾಸಸ್ಥಾನಗಳಲ್ಲಿ ಸುರಕ್ಷಿತವಾಗಿ ಸಂರಕ್ಷಿಸಿರುವ ಪ್ರದೇಶವಾಗಿದೆ. ಈ ಅಭ ಯಾರಣ್ಯದ ಪಶ್ಚಿಮ ಗಡಿ ಭದ್ರಾ ಅಣೆಕಟ್ಟನ್ನು ಸ್ಪರ್ಶಿಸುತ್ತದೆ. ಭದ್ರಾ ವನ್ಯಜೀವಿ ಅಭಯಾರಣ್ಯವು ಭದ್ರಾ ಸಂರಕ್ಷಿತ ಪ್ರದೇಶದ ಭಾಗವಾಗಿರುವ ಹುಲಿ ಸಂರಕ್ಷಿತ ಪ್ರದೇಶವಾಗಿದೆ. ಈ ಪ್ರದೇಶ ವನ್ನು ೧೯೫೧ರಲ್ಲಿ ಜಾಗರ ಕಣಿವೆ ವನ್ಯಜೀವಿ ಅಭಯಾರಣ್ಯ ಎಂದು ಅದರ ಸುತ್ತಮುತ್ತಲಿನ ಪ್ರದೇಶ ವನ್ನು ಸರ್ಕಾರವು ಘೋಷಿಸಿತ್ತು. ೧೯೭೪ರಲ್ಲಿ ಭದ್ರಾ ವನ್ಯಜೀವಿ ಅಭಯಾರಣ್ಯ ಎಂದು ಮರುನಾಮಕರಣ ಮಾಡಲಾ ಗಿತ್ತು. ವನ್ಯಜೀವಿ ಅಭಯಾರಣ್ಯ ವನ್ನು ೧೯೯೮ರಲ್ಲಿ ಪ್ರಾಜೆಕ್ಟ್ ಟೈಗರ್ ರಿಸರ್ವ್ ಎಂದು ಘೋಷಿಸಲಾಯಿತು.

ಗ್ರಾಮ ಸ್ಥಳಾಂತರ ಯಶಸ್ವಿ ಕಾರ್ಯ ಕ್ರಮವನ್ನು ಪೂರ್ಣಗೊಳಿಸಿದ ದೇಶದ ಮೊದಲ ಹುಲಿ ಸಂರಕ್ಷಿತ ಪ್ರದೇಶ ಭದ್ರಾ. ಭದ್ರಾ ಅಭ ಯಾರಣ್ಯವೂ ಎರಡು ವಿಭಾಗ ಗಳನ್ನು ಒಳಗೊಂಡಿದೆ ಅವೆಂದರೆ ಅರಣ್ಯದ ಪಶ್ಚಿಮ ದಿಕ್ಕಿನಲ್ಲಿ ಲಕ್ಕವಳ್ಳಿ ಮತ್ತು ಮುತ್ತೋಡಿ ವಿಭಾಗ ಹಾಗೂ ಪೂರ್ವ ದಿಕ್ಕಿನಲ್ಲಿಯೇ ಬಾಬಾಬುಡನ್ಗಿರಿ ವಿಭಾಗದಲ್ಲಿ ಅಭಯಾರಣ್ಯವೂ ಮುಳ್ಳಯ್ಯನ ಗಿರಿ, ಹೆಬ್ಬೆಗಿರಿ, ಗಂಗೆಗಿರಿ, ಮತ್ತು ಬಾಬಾ ಬುಡನ್ಗಿರಿ ಬೆಟ್ಟಗಳು ಮತ್ತು ಕಡಿದಾದ ಇಳಿಜರುಗಳಿಂದ ಆವೃತವಾಗಿದೆ.
ಭದ್ರಾ ಅರಣ್ಯದ ವ್ಯಾಪ್ತಿಯ ಲ್ಲಿರುವ ಅನೇಕ ಗ್ರಾಮಗಳು ಮತ್ತು ಭದ್ರಾವತಿ ತರೀಕೆರೆ ಹತ್ತಿರದ ನಗರಗಳಾಗಿವೆ, ಭದ್ರಾ ಅಣೆಕಟ್ಟು ಮತ್ತು ಭದ್ರಾವನ್ಯ ಜೀವಿ ಧಾಮ ಗಳಿಗೆ ಉತ್ತಮವಾದ ಸ್ಥಳೀಯ ಬಸ್ಸು ಸೌಲಭ್ಯಗಳಿವೆ. ಕೆಂಪು ಎಲೆನ್ ಮತ್ತು ನೀಲಿ ಮಾರ್ಮನ್ ನಂತಹ ಭಾರತದ ಅತ್ಯಂತ ಸುಂದರವಾದ ಮತ್ತು ದೊಡ್ಡ ಚಿಟ್ಟೆಗಳು ಇಲ್ಲಿ ಕಂಡು ಬರುವುದು. ವಿಶಿಷ್ಟವಾದ ಸರೀಸ್ಕೃಪಗಳು ಇಲ್ಲಿನ ಬೃಹತ್ ಮರ ಗಳ ನಡುವೆ ಕಂಡುಬರುತ್ತವೆ. ಮಲಬಾರ್ ಪಿಟ್ ಫೈಪರ್ ಗಳು ಮತ್ತು ಅಪರೂಪದ ಅವಳದ ಹಾವುಗಳು ಇಲ್ಲಿರುವುದು ನೋಡುಗರಿಗೆ ವಿಶೇಷವಾಗಿದೆ.
ಭದ್ರಾ ನದಿಯ ಉಪನದಿ ಸೋಮವಾಹಿನಿಯು ಪ್ರಾಣಿ ಪಕ್ಷಿಗಳಿಗೆ ನೀರುಣಿಸುತ್ತಿದೆ. ಒಟ್ಟಾರೆ ಯಾಗಿ ಭದ್ರಾ ವನ್ಯಜೀವಿ ಧಾಮ ವಿವಿಧ ಋತುಗಳಲ್ಲಿ ತನ್ನದೇ ಆದಂತಹ ಸೌಂದರ್ಯದ ರಾಶಿಯನ್ನು ಒಳಗೊಂಡಿದೆ. ಭದ್ರಾ ಅಭಯಾರಣ್ಯವು ಇಡೀ ವರ್ಷ ತೆರೆದಿರುವುದು ವಿಶೇಷ ಆದರೆ ಪ್ರತಿ ಋತುವಿನಲ್ಲಿ ತನ್ನದೇ ಆದ ಸೊಬಗುನ್ನು ಹೊಂದಿದೆ. ಆದರೆ ಅಭಯಾರಣ್ಯದಲ್ಲಿ ಮತ್ತು ನೀರಿನ ಮೇಲಿನ ಬೋಟ್ ಸಫಾರಿಗಳಲ್ಲಿ ಅನೇಕ ಪ್ರಾಣಿಗಳನ್ನು ಕಾಣಬಹುದು.
ಭದ್ರಾ ವನ್ಯ ಜೀವಿಗಳನ್ನು ನೋಡಲು ಬರುವವರಿಗೆ ರಿವರ್ ಟರ್ನ್ ಲಾಡ್ಜ್ ನಲ್ಲಿ ತಂಗಲು ಮತ್ತು ಭದ್ರಾ ಹಿನ್ನೀರಿನ ವನ್ಯಜೀವಿ ಅಭಯಾರಣ್ಯದ ಸೌಂದರ್ಯ ಸವಿಯಲು ಅತ್ಯುತ್ತಮ ಋತು ಆಗಿದೆ. ಈ ಭದ್ರಾ ವನ್ಯಜೀವಿ ಅಭಯಾರಣ್ಯದಲ್ಲಿ ಅಂದಾಜು ೩೩ ಹುಲಿಗಳು ಭದ್ರಾದಲ್ಲಿ ಕಂಡು ಬರುತ್ತವೆ. ಭದ್ರಾ ಅಭಯಾರಣ್ಯವು ೩೦೦ಕ್ಕೂ ಹೆಚ್ಚು ಜಾತಿಯ ಪಕ್ಷಿ ಗಳನ್ನು ಹೊಂದಿದೆ. ಹಾಗೆ ಜೀಪ್ ಸಫಾರಿ ಭದ್ರಾ ಸಂರಕ್ಷಿತ ಪ್ರದೇಶ ದಲ್ಲಿ ಅರಣ್ಯ ಇಲಾಖೆ , ಜೀಪ್ ಸಫಾರಿ ಯನ್ನು ಬೇಸಿಗೆ ಮತ್ತು ಚಳಿಗಾಲದಲ್ಲಿ ಆಯೋಜಿಸುತ್ತದೆ. ಬೆಳ್ಳಿಗೆ ೮ ರಿಂದ ಸಂಜೆ ೪ ಗಂಟೆಯ ವರೆಗೆ ಅವಕಾಶ ಮಾಡಿಕೊಡ ಲಾಗಿದೆ. ತಲಾ ಒಬ್ಬರಿಗೆ ೬೫೦ ರೂ ಗಳನ್ನು ತೆಗೆದುಕೊಳುತ್ತಾರೆ. ಭದ್ರಾ ವನ್ಯಜೀವಿ ಅಭಯಾರಣ್ಯವು ೩೦ಕ್ಕೂ ಹೆಚ್ಚು ಹುಲಿಗಳು ಮತ್ತು ೨೦ಕ್ಕೂ ಹೆಚ್ಚು ಚಿರತೆಗಳನ್ನು ನೆಲೆಗೊಂಡಿವೆ. ಸಫಾರಿಯಲ್ಲಿ ಸಂಜೆ ವೇಳೆ ಸೂರ್ಯಾಸ್ತದ ನೋಟವಂತು ಕಣ್ಣಿಗೆ ಹಬ್ಬದ್ದಂತೆ ಇರುತ್ತದೆ. ೧೨೦ಕ್ಕೂ ಹೆಚ್ಚು ವಿವಿಧ ಸಸ್ಯ ಮತ್ತು ಮರ ಪ್ರಭೇದಗಳು ಈ ದಟ್ಟ ಅರಣ್ಯದಲ್ಲಿ ಇರುವು ದನ್ನು ವೀಕ್ಷಿಸಬಹುದು.

