ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ವಿಶ್ವಾಸ ದ್ರೋಹ; ಜೆಡಿಎಸ್‌ನಿಂದ ಶಿವಮೂರ್ತಿಗೌಡ ಉಚ್ಚಾಟನೆ…

Share Below Link

ಹೊನ್ನಾಳಿ: ಜೆಡಿಎಸ್‌ನಿಂದ ಮೊದಲ ಪಟ್ಟಿಯ ಹೊನ್ನಾಳಿ ತಾಲೂಕಿಗೆ ನಮ್ಮ ಅಭ್ಯರ್ಥಿ ಕೋಟೆಮಲ್ಲೂರಿನ ಬಿ.ಜಿ. ಶಿವಮೂರ್ತಿಗೌಡರಿಗೆ ಟಿಕೆಟ್ ಘೋಷಣೆ ಮಾಡಿ, ಪಕ್ಷದಿಂದ ಭೀಫಾರಂ ಕೂಡ ನೀಡಿದ್ದರು, ಆದರೆ ಜೆಡಿಎಸ್ ಅಭ್ಯರ್ಥಿ ಬಿ.ಜಿ.ಎಸ್. ಶಿವಮೂರ್ತಿಗೌಡ ಅವರು ನಾಮಪತ್ರ ಹಿಂಪಡೆಯುವ ಅಂತಿಮ ದಿನ ನಾಮಪತ್ರ ವಾಪಸ್ ಪಡೆದಿರುವುದು ಅತ್ಯಂತ ನೋವಿನ ಸಂಗತಿ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಅವಮಾನ ಮಾಡಿರುವುದು ಖಂಡನಿಯ ಎಂದು ಜಿ ಜೆಡಿಎಸ್ ರೈತ ಮೋರ್ಚಾ ಅಧ್ಯಕ್ಷ ರಮೇಶ್ ದೇವರಹೊನ್ನಾಳಿ ಸುದ್ದಿಗೋಷ್ಟಿಯಲ್ಲಿ ಆಕ್ರೋಶ ಹೊರಹಾಕಿದರು.
ಇಡೀ ರಾಜ್ಯದಲ್ಲಿ ಯಾರಿಗೂ ಟಿಕೆಟ್ ಘೋಷಣೆ ಮಾಡದೆ ಇದ್ದರೂ ಅಂದು ಹೊನ್ನಾಳಿ ತಾಲೂಕಿಗೆ ರಾಜ್ಯ ನಾಯಕರು ಟಿಕೆಟ್ ಘೋಷಣೆ ಮಾಡಿದ್ದರು. ಆದರೆ ಏಕಾಏಕಿ ಪಕ್ಷಕ್ಕೆ ದ್ರೋಹ ಮಾಡಿ ನಾಮಪತ್ರ ಹಿಂಪಡೆದಿರು ವುದು ಅಕ್ಷಮ್ಯ ಎಂದು ಜೆಡಿಎಸ್ ಅಭ್ಯರ್ಥಿ ವಿರುದ್ದ ಕಿಡಿಕಾರಿದರು.
ಜೆಡಿಎಸ್ ಪಕ್ಷಕ್ಕೆ ವಿಶ್ವಾಸ ಹಾಗೂ ನಂಬಿಕೆ ದ್ರೋಹ ಮಾಡಿರುವುದಲ್ಲದೇ, ಜೆಡಿಎಸ್ ಮುಖಂಡರಿಗೂ ತಿಳಿಸದೆ ಏಕಾಏಕಿ ನಾಮಪತ್ರವನ್ನು ಹಿಂಪಡೆದಿರುವ ಅಭ್ಯರ್ಥಿ ಬಿ.ಜಿ.ಶಿವಮೂರ್ತಿಗೌಡ ಹಾಗೂ ಅವರ ನಾಮಪತ್ರ ವಾಪಸ್ ಪಡೆಯುವದಕ್ಕೆ ಸಹಕರಿಸಿರುವ ಜೆಡಿಎಸ್ ತಾಲೂಕು ಅಧ್ಯಕ್ಷ ವೀರೇಶ್ ಹನಗವಾಡಿ ಅವರನ್ನ್ನು ಜೆಡಿಎಸ್ ಜಿಧ್ಯಕ್ಷರು ಹಾಗು ಜೆಡಿಎಸ್ ಮುಖಂಡ ಮಾಜಿ ಶಾಸಕ ಶಿವಶಂಕರ್ ಆದೇಶದಂತೆ ಈ ಇಬ್ಬರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದರು.
ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಪಾರ್ವತಿ ಮಾತನಾಡಿ, ಉಂಡ ಮನೆಗೆ ದ್ರೋಹ ಬಗೆದು ನಾಮಪತ್ರ ಹಿಂಪಡೆದಿರುವ ಅಭ್ಯರ್ಥಿ ಬಿ.ಜಿ. ಶಿವಮೂರ್ತಿಗೌಡ ಅವರ ಹಿಂದೆ ಜಿ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಶೀಲಾಕುಮಾರ್ ಅವರ ಕೈವಾಡ ಇರುವುದರಿಂದ ಅವರನ್ನೂ ಜಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ರಾಜ್ಯ ಜೆಡಿಎಸ್ ಮಹಿಳಾ ಘಟಕವನ್ನು ಆಗ್ರಹಿಸಿದರು.
ನ್ಯಾಮತಿ ತಾಲೂಕು ಜೆಡಿಎಸ್ ಅಧ್ಯಕ್ಷ ಮಹೇಂದ್ರಕರ್, ಸುಭಾಷ್ ಬಳ್ಳೇಶ್ವರ್, ಬಸಣ್ಣ, ಹಾಲಸ್ವಾಮಿ ಚಿನ್ನಿಕಟ್ಟೆ, ಹನುಮಂತಪ್ಪ ಇನ್ನಿತರರು ಸುದ್ದಿಗೋಷ್ಟಿಯಲ್ಲಿದ್ದರು.