ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಸಾಕು ಪ್ರಾಣಿಗಳನ್ನು ಪ್ರೀತಿಸುವ ಜೊತೆಗೆ ಅವುಗಳ ಬಗ್ಗೆ ಜಾಗರೂಕರಾಗಿರಿ

Share Below Link

ಹೊನ್ನಾಳಿ: ಪ್ರಾಣಿಗಳನ್ನು ಪ್ರೀತಿಸಿ. ಆದರೆ ಅವುಗಳ ಬಗ್ಗೆ ಸದಾ ಜಾಗ್ರತೆಯಾಗಿರಿ. ಸಾಮಾನ್ಯವಾಗಿ ಹೆಚ್ಚು ಜನ ನಾಯಿ ಅಥವಾ ಬೆಕ್ಕುಗಳನ್ನು ಸಾಕುವ ಪರಿಪಾಠವಿದ್ದು ಎಷ್ಟೇ ಸಲುಗೆ ಇದ್ದರೂ ಕೂಡ ಅವುಗಳ ಬಗ್ಗೆ ಎಚ್ಚರವಾಗಿರುವುದು ಸೂಕ್ತ ಎಂದು ಪಶುಪಾಲನಾ ಮತ್ತು ಪಶುಶೈದ್ಯ ಇಲಾಖೆಯ ತಾಲೂಕು ವೈದ್ಯಾಧಿಕಾರಿ ಡಾ. ವಿಶ್ವನಟೇಶ್ ಹೇಳಿದರು.
ಯುವ ರೆಡ್ ಕ್ರಾಸ್, ಗ್ರಂಥಾಲಯ ಮತ್ತು ಮಾಹಿತಿ ವಿeನ, ರಾಷ್ಟ್ರೀಯ ಸೇವಾ ಯೋಜನೆ ಘಟಕ ೧ ಮತ್ತು ೨, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಹುಚ್ಚು ನಾಯಿ ರೋಗ (ರೇಬೀಸ್) ಲಸಿಕಾ ಮಾಸಾಚರಣೆ ಅಂಗವಾಗಿ ರೇಬೀಸ್ ರೋಗದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಗಿಡಕ್ಕೆ ನೀರೇರೆಯುವ ಮೂಲಕ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು.
ರೇಬೀಸ್ ವೈರಾಣುವಿನಿಂದ ಉಂಟಾಗುವ ಆತಿಮುಖ್ಯವಾದ ಪ್ರಾಣಿಜನ್ಯ ರೋಗವಾಗಿದ್ದು ಪ್ರತಿಶತ ಶೇ.೧೦೦ರಷ್ಟು ಮಾರಣಾಂತಿಕವಾಗಿದೆ ಎಂದರು.
ಸಾಕು ಪ್ರಾಣಿಗಳಾದ ನಾಯಿ ಬೆಕ್ಕುಗಳು ಈ ರೋಗ ಮನುಷ್ಯನಿಗೆ ಹರಡುವಿಕೆಯಲ್ಲಿ ಪ್ರಮುಖ ವಾಗಿರುತ್ತವೆ ಕೆಲವೊಮ್ಮೆ ನಮ್ಮ ಗಮನಕ್ಕೆ ಬಾರದೇ ಇವುಗಳು ಕಚ್ಚಿದರೆ ಅಥವಾ ಉಗುರಗಳಿಂದ ತರಚಿದರೆ ಕೂಡಲೇ ನಾವು ಸೋಪಿ ನಿಂದ ಗಾಯವನ್ನು ತೊಳೆಯಬೇಕು ನಂತರ ರೇಬೀಸ್ ಲಸಿಕೆ ಹಾಕಿಸಿ ಕೊಳ್ಳಬೇಕು ಜೊತೆಗೆ ನಾವುಗಳು ಸಾಕುವ ನಾಯಿ, ಬೆಕ್ಕುಗಳಿಗೂ ಕೂಡ ಕಾಲ ಕಾಲಕ್ಕೆ ಪಶು ವೈದ್ಯರ ಮಾರ್ಗದರ್ಶನದಲ್ಲಿ ರೇಬೀಸ್ ನಿರೋಧಕ ಚುಚ್ಚುಮದ್ದುಗಳನ್ನು ಕೊಡಿಸಬೇಕು ಎಂದು ಹೇಳಿದರು.
ಒಂದು ವೇಳೆ ನಾಯಿ ಅಥವಾ ಬೆಕ್ಕು ಕಚ್ಚಿದಾಗ ಕೂಡಲೇ ರಭಸವಾಗಿ ಬೀಳುವ ನೀರಿಲ್ಲಿ ಸೋಪಿನಿಂದ ಗಾಯಗಳನ್ನು ತೊಳೆಯಬೇಕು ಮುಂಜಾಗ್ರತಾ ಕ್ರಮವಾಗಿ ಕ್ರಿಮಿನಾಶಕ ಅಂದರೆ ಡೆಟಾಲ್ ಹ್ಯಾಂಡ್ ವಾಸ್ ಮುಂತಾದವುಗಳಿಂದ ತೊಳೆದು ನಂತರ ವೈದ್ಯರನ್ನು ಕಾಣಬೇಕು ಸಕಾಲದಲ್ಲಿ ಲಸಿಕೆ ತೆಗೆದು ಕೊಳ್ಳದಿದ್ದರೆ ಮುಂದೆ ಇದಕ್ಕೆ ಯಾವುದೇ ಚಿಕಿತ್ಸೆ ಫಲಕಾರಿಯಾಗದೇ ಮನುಷ್ಯ ಅಥವಾ ಪ್ರಾಣಿ ಮರಣ ಹೊಂದುವ ಸಂದರ್ಭಗಳು ಇರುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ|ಬಿ.ಜಿ. ಧನಂಜಯ ಮಾತನಾಡಿ, ಮನುಷ್ಯರೊಂದಿಗೆ ಹೆಚ್ಚು ಪ್ರೀತಿಯಿಂದ ಹೊಂದಿ ಕೊಳ್ಳುವ ಪ್ರಾಣಿಗಳು ಎಂದರೆ ನಾಯಿ ಮತ್ತು ಬೆಕ್ಕುಗಳು, ಇವುಗಳ ಪಾಲಕರು ಇವುಗಳೊಂದಿಗೆ ಒಡನಾಟ ಇಟ್ಟುಕೊಳ್ಳುವ ಪೂರ್ವ ದಲ್ಲಿ ಇವುಗಳಿಗೂ ಕೂಡ ಲಸಿಕೆ ಹಾಕಿಸಿರಬೇಕು ಹಾಗೂ ಎಚ್ಚರಿಕೆ ವಹಿಸುವುದು ಮುಖ್ಯವಾಗಿರುತ್ತದೆ, ರೇಬೀಸ್ ಬಗ್ಗೆ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಸರಿಯಾದ ತಿಳುವಕೆ ನೀಡುವ ಈ ಕಾರ್ಯ ಕ್ರಮ ಹೆಚ್ಚು ಪರಿಣಾಮಕಾರಿ ಯಾಗಿದೆ ಎಂದು ಹೇಳಿದರು.
ಗ್ರಂಥಪಾಲಕ ಪ್ರೊ| ನಾಗರಾಜ ನಾಯ್ಕ, ಪ್ರೊ| ಡಿ.ಸಿ. ಪಾಟೀಲ್, ಉಪನ್ಯಾಸಕ ಧಂಜನಯ ಮೂರ್ತಿ ಪಶುವೈದ್ಯ ಇಲಾಖೆಯ ಡಾ| ಮೇಘನಾ, ಡಾ| ಯಲ್ಲಪ್ಪ, ಪ್ರೊ| ಗೀತಾ ಎಚ್.ವಿ. ಹರಾಳು ಮಹಾಬಲೇಶ್ವರ, ಡಾ| ಮಂಜುನಾಥ ಗುರು, ವೈಷ್ಣವಿ ಹಾಗೂ ಉಪನ್ಯಾಸಕ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.