ಜಿಲ್ಲಾ ಸುದ್ದಿತಾಜಾ ಸುದ್ದಿ

ಬಸವ ಜಯಂತಿ: ಎತ್ತುಗಳ ಮೆರವಣಿಗೆ – ಸಂಭ್ರಮ

Share Below Link

ನ್ಯಾಮತಿ : ತಾಲೂಕಿನ ಕೋಡಿಕೊಪ್ಪ ಗ್ರಾಮ ದಲ್ಲಿ ಮಹಾನ ಮಾನವತಾವಾದಿ ವಿಶ್ವಗುರು ಬಸವ ಜಯಂತೋತ್ಸವದ ಪ್ರಯುಕ್ತ ರೈತರ ತಮ್ಮ ಜೀವನಾಡಿಯಾದ ಎತ್ತುಗಳ ಮೆರವಣಿಗೆಯನ್ನು ಅದ್ಧೂರಿಯಾಗಿ ನಡೆಸಿದರು.
ಎತ್ತು ಹಾಗೂ ದನಕರುಗಳ ಮೈ ತೊಳೆದು, ಎತ್ತುಗಳ ಕೊಂಬುಗಳಿಗೆ ನಾನಾ ಬಣ್ಣ ಹಚ್ಚಿ, ಕೊಂಬೆಣಸು, ಜೂಲಗಳನ್ನು ಹಾಕಿ ಅವುಗಳನ್ನು ಶಂಗರಿಸಿ ಸಂಜೆ ಬಸವಣ್ಣನವರ ಭಾವಚಿತ್ರದೊಂದಿಗೆ ಎತ್ತುಗಳ ಮೆರವಣಿಗೆ ನಡೆಸಲಾಯಿತು.
ಇದಕ್ಕೂ ಮೊದಲು ಗ್ರಾಮದ ಅದಿದೇವತೆಯಾದ ಬಸವೇಶ್ವರ ದೇಗುಲದಲ್ಲಿ ಬಸವೇಶ್ವರ ರುದ್ರಾ ಭಿಷೇಕ ಬಿಲ್ವಾರ್ಚನೆ ಮಹಾ ಮಂಗಳಾರತಿ ವಿಶೇಷ ಪೂಜ ಕೈಂಕರ್ಯಗಳನ್ನು ನಡೆಸಲಾಯಿತು.
ಬಸವ ಜಯಂತಿಯ ಪ್ರಯುಕ್ತ ಗ್ರಾಮದ ಮನೆಗಳಲ್ಲಿ ವಿಶೇಷ ಸಿಹಿ ಭೋಜನ ಮಾಡಲಾಯಿತು. ಹೋಳಿಗೆ, ಪಾಯಸ, ಮತ್ತಿತರ ಭೋಜನಗಳನ್ನು ತಮ್ಮ ಜನುವಾರುಗಳಿಗೆ ತಿನ್ನಿಸಿದರು.
ಸಂಜೆ ರೈತರು ತಮ್ಮ ಎತ್ತುಗಳನ್ನು ವಿಶೇಷವಾಗಿ ಜುಲಾ ಬಲೂನ್ ವಿವಿಧ ಅಲಂಕಾರಗಳು ಸಾಮಗ್ರಿಗಳೊಂದಿಗೆ ವಿಶ್ವಗುರು ಬಸವಣ್ಣನ ಭಾವಚಿತ್ರದೊಂದಿಗೆ ಗ್ರಾಮದ ಬೀದಿಬೀದಿಗಳಲ್ಲಿ ಮಂಗಳವಾಧ್ಯ, ಮಹಿಳೆಯರ ಆರತಿಯೊಂದಿಗೆ ಮೆರವಣಿಗೆ ನಡೆಸಿ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಸಿದರು.
ಗ್ರಾಮದ ಬಿ.ಶಿವಪ್ಪ, ಪರಮೇಶ್ವರಪ್ಪ , ಯೋಗೀಶ್‌ಪ್ಪ , ಎಚ್. ಶಿವಪ್ಪ , ರುದ್ರೇಶ್ , ಬಸವರಾಜಪ್ಪ ಹಾಲಪ್ಪ ಸೇರಿದಂತೆ ಹಲವಾರು ಗ್ರಾಮದ ಯುವಕರು ಮುಖಂಡರು ಮೆರವಣಿಗೆಯಲ್ಲಿ ಇತರರು ಇದ್ದರು.