ಜಿಲ್ಲಾ ಸುದ್ದಿತಾಜಾ ಸುದ್ದಿದೇಶ

ಬಾಪೂಜಿ ಅವರ ಸಾವು ಇಡೀ ಭಾರತಕ್ಕೆ ಅಳಿಸಲಾಗದೇ ಅಂಟಿಕೊಂಡ ರಕ್ತದ ಕಲೆ…

Share Below Link

ಶಿವಮೊಗ್ಗ : ಮಹಾತ್ಮಾ ಗಾಂಧೀಜಿ ಹುಟ್ಟಿದ್ದು ಯಾವಾಗ ? ಸತ್ತಿದ್ದು ಯಾವಾಗ ? ಹೇಗೆ ಸತ್ತರು ಎಂಬುದು ಈಗಿನ ಭಾರತದ ಯುವಜನತೆಗೆ ಗೊತ್ತಿಲ್ಲದಿರುವುದು ವಿಷಾದದ ಸಂಗತಿ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ರಾಜ್ಯ ಸಂಯೋಜಕಿ ಡಾ. ಅಬೀದಾ ಬೇಗಂ ಹೇಳಿzರೆ.
ನಗರದ ಸರ್ಕಾರ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸರ್ವೋದಯ ದಿನಾಚರಣೆ ಕಾರ್ಯಕ್ರಮದಲ್ಲಿ ಗಾಂಧೀಜಿಯ ಪ್ರಸ್ತುತತೆ ವಿಷಯದ ಕುರಿತು ಉಪನ್ಯಾಸ ನೀಡಿದರು.
ಗಾಂಧೀಜಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ವಿಶ್ವದ ಶ್ರೇಷ್ಠ ಮಾನವತಾವಾದಿ, ಅಹಿಂಸೆಯ ಮಹಾ ನಾಯಕ ಸತ್ಯ ಮತ್ತು ಪ್ರಾಮಾಣಿಕತೆಯ ಪ್ರತಿರೂಪ ವಾಗಿದ್ದು, ದ್ವೇಷಿಸುವವರನ್ನೂ ಕೂಡ ಪ್ರೀತಿಸು. ಕೆಟ್ಟವರ ಕೆಟ್ಟ ಗುಣ ಗಳನ್ನು ನೋಡದೆ ಆತನಲ್ಲಿರುವ ಒಳ್ಳೆಯ ಗುಣವನ್ನು ಮಾತ್ರ ನೋಡು. ಆತನನ್ನು ಸರಿದಾರಿಗೆ ತರುವ ಪ್ರಯತ್ನಮಾಡು ಎಂದವರು ಗಾಂಧೀಜಿ. ಇತ್ತೀಚಿನ ದಿನಗಳಲ್ಲಿ ನಾವು ನಮ್ಮತನವನ್ನು ಕಳೆದು ಕೊಂಡಿzವೆ. ಗಾಂಧೀಜಿ ಯಾರು ಎಂದು ಗೊತ್ತಿಲ್ಲದ ನಾವು ಇನ್ನಾದರೂ ಈ ದೇಶದ ಇತಿಹಾಸ ಮತ್ತು ಗಾಂಧೀಜಿಯನ್ನು ಅರಿಯಲೇಬೇಕಾಗಿದೆ ಎಂದರು.


೧೯೪೮ ಜನವರಿ ೩೦ರ ಸಂಜೆ ೫.೧೭ಕ್ಕೆ ದೆಹಲಿಯ ಬಿರ್ಲಾ ಭವನದಲ್ಲಿ ಅವರು ಪ್ರಾರ್ಥನಾ ನಿರತರಾಗಿzಗ, ಅವರ ಮೇಲೆ ಗುಂಡಿನ ದಾಳಿಯಾಗುತ್ತದೆ. ಹೇ ರಾಮ್ ಎಂದು ಹೇಳಿ ಅವರು ಪ್ರಾಣ ಬಿಡುತ್ತಾರೆ. ಅಹಿಂಸಾ ವಾದದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತನನ್ನು ಒಂದೇ ವರ್ಷದಲ್ಲಿ ದೇಶದ ಪ್ರಜೆ ಯಿಂದಲೇ ಕೊಲೆಯಾದಾಗ ಇಡೀ ವಿಶ್ವವೇ ಆತಂಕಕ್ಕೀಡಾಗಿತ್ತು. ಎಲ್ಲರನ್ನೂ ಆತ್ಮೀಯತೆಯಿಂದ ಅಪ್ಪಿಕೊಳ್ಳುವ ಗಾಂಧೀಜಿ ನನಗೆ ಯಾರೂ ಶತ್ರುಗಳಿಲ್ಲ ಎನ್ನುತ್ತಿದ್ದರು. ಬಾಪೂಜಿಯನ್ನು ಅರ್ಥ ಮಾಡಿಕೊಳ್ಳದ ವ್ಯಕ್ತಿಯೊಬ್ಬ ಅವರನ್ನು ಗುಂಡಿಕ್ಕಿದ. ಬಾಪೂಜಿ ತನ್ನ ಮೇಲೆ ತಾನು ಪ್ರಯೋಗ ಗಳನ್ನು ಮಾಡುತ್ತಾ, ಸ್ವದೇಶಿ ಪ್ರೇಮ ವನ್ನು ಬಿತ್ತುತ್ತಾ ಸ್ವಾವಲಂಬನೆಯ ಮಂತ್ರವನ್ನು ಜಪಿಸುತ್ತಾ ನಮ್ಮ ದೇಶದ ಯಶಸ್ಸಿಗೆ ನಮ್ಮದೇ ಸ್ವದೇಶಿಗರ ಪಾಲು ಇರಬೇಕು ಎನ್ನುವುದು ಅವರ ಇಚ್ಛೆಯಾಗಿತ್ತು. ನಾವೆಲ್ಲರೂ ಇಂದು ವಾಟ್ಸ್ ಅಪ್ ಯೂನಿರ್ವಸಿಟಿಯಲ್ಲಿ ನೋಡಿz ನಿಜ ಎನ್ನುವ ಭ್ರಮೆಯಲ್ಲಿzವೆ. ಬಾಪೂಜಿಯವರ ಸಾವು ಇಡೀ ಭಾರತಕ್ಕೆ ಅಳಿಸಲಾಗದೇ ಅಂಟಿಕೊಂಡ ರಕ್ತದ ಕಲೆಯಾಗಿದೆ ಎಂದರು.
ಗಾಂಧೀಜಿಯ ಹತ್ಯೆಯೊಂದಿಗೆ ಮಾನವೀಯತೆ ಸತ್ತುಹೋಯಿತು. ದೇಹಕ್ಕೆ ಸಾವು ಬರುವುದು ಸಹಜ. ಆದರೆ ವಿಚಾರಗಳಿಗೆ ಸಾವು ಬರುವುದಿಲ್ಲ. ನಾವು ಬದುಕಿzಗ ಸಮಾಜಕ್ಕೆ ಏನು ಕೊಟಿzವೆ ಎಂಬುದು ಮುಖ್ಯವಾಗುತ್ತದೆ. ಕನಿಷ್ಠಪಕ್ಷ ಈ ದೇಶಕ್ಕಾಗಿ ಗಾಂಧೀ ಜಿಯ ತ್ಯಾಗ, ಅವರ ಜೀವನ, ಅವರ ವಿಚಾರಧಾರೆಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸುವ ಪ್ರಯತ್ನವನ್ನಾದರೂ ಮಾಡೋಣ ಎಂದರು.


೧೯೧೫ರಲ್ಲಿ ದಕ್ಷಿಣಾ ಆಫ್ರಿಕಾ ದಿಂದ ಭಾರತಕ್ಕೆ ಬಂದಾಗ ಅವರ ಗುರು ಗೋಪಾಲಕೃಷ್ಣ ಗೋಖಲೆ ಅವರು ಗಾಂಧೀಜಿಗೆ ನೀನು ಮೊದಲು ದೇಶ ಸುತ್ತು-ಮತ್ತೆ ಕೋಶ ಓದು ಎಂದು ಹೇಳಿದ್ದರು. ಅದರಂತೆ ಅವರು ಭಾರತದಾದ್ಯಂತ ಪರ್ಯಟನೆ ಮಾಡಿದಾಗ ದೇಶದ ಜನರ ಬಡತನ, ಸಾಮಾಜಿಕ ವೈರುಧ್ಯ, ಆರ್ಥಿಕ ಅಸಮಾನತೆ, ಜತಿಯತೆಯ ಕಠೋರ ಸತ್ಯವನ್ನು ಅವರು ಅರಿತು ದೇಶದ ಮಹಿಳೆ ಯರಿಗೆ ಇಲ್ಲಿ ಯಾವುದೇ ಜಗವಿಲ್ಲ. ಪುರುಷ ಪ್ರಧಾನವಾದ ಸಮಾಜ ಎಂಬುದನ್ನು ಅರಿತು ತನ್ನ ಪತ್ನಿ ಕಸ್ತೂರ ಬಾ ಅವರೊಂದಿಗೆ ಗ್ರಾಮಗಳಿಗೆ ತೆರಳಿ, ಅಲ್ಲಿನ ಪಂಚಾಯ್ತಿಯಲ್ಲಿ ಮಹಿಳೆ ಯರಿಗೂ ಸ್ಥಾನಮಾನ ದೊರೆಯು ವಂತೆ ಪ್ರಯತ್ನಿಸಿದರು. ಒಂದು ಮನೆಗೆ ತೆರಳಿದಾಗ ಮೂರು ಮಹಿಳೆಯರು ಇದ್ದ ಮನೆಯಲ್ಲಿ ಒಂದೇ ಸೀರೆ ಇದ್ದು ಅವರು ಇವರನ್ನು ನೋಡಿ ಮನೆಯೊಳಗೆ ಹೋದಾಗ ಇವರಿಗೆ ದೇಶದ ಮಹಿಳೆಯರ ಸ್ಥಿತಿಯ ಅರಿವಾಗಿ ತಾನೂ ಕೂಡ ತನ್ನ ಪೋಷಾಕನ್ನು ತ್ಯಾಗಮಾಡಿ ದೇಶದ ಎ ಜನರಿಗೂ ಮೈತುಂಬಾ ಬಟ್ಟೆ ಸಿಗುವವರೆಗೂ ತಾನೂ ಕೂಡ ಪೂರ್ತಿಯಾಗಿ ಬಟ್ಟೆ ಧರಿಸುವುದಿಲ್ಲ ಎಂದು ಶಪತ ಮಾಡಿದರು.
ಖಾದಿ ಉತ್ಪನ್ನಗಳ ಬಳಕೆಗೆ ಪ್ರೋತ್ಸಾಹ ನೀಡಿದರು. ಹಲವಾರು ಸತ್ಯಾಗ್ರಹಗಳ ಮೂಲಕ ಭಾರತದ ಜನತೆಯಲ್ಲಿ ಜಗೃತಿ ಮೂಡಿಸುವ ಕೆಲಸ ಮಾಡಿದರು. ಗಾಂಧೀಜಿಯ ಬಗ್ಗೆ ಯುವಜನತೆ ತಿಳಿದುಕೊಳ್ಳುವ ಅವಶ್ಯಕತೆ ಮತ್ತು ಅನಿವಾರ್‍ಯತೆ ಇದೆ. ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಹಲವಾರು ಶಕ್ತಿಗಳು ನಮ್ಮಲ್ಲಿದೆ. ಆದರೆ ಗಾಂಧೀಜಿಯನ್ನು ಅರಿತು ಕೊಳ್ಳಲೇಬೇಕು. ಅವರ ನಡೆ- ನುಡಿ ಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡಾಗ ಮಾತ್ರ ನಮ್ಮ ಭಾರತ ಉಳಿಯಲು ಸಾಧ್ಯ ಎಂದರು.
ಎಸ್.ಬಿ. ಅಶೋಕ್ ಕುಮಾರ್, ಸತೀಶ್ , ಶ್ರೀನಿವಾಸ್, ಡಾ. ರಂಗನಾಥ್‌ರಾವ್ ಹೆಚ್. ಕರಾಡ್, ಉಮಾಶಂಕರ್, ಡಾ. ಜಗದೀಶ್, ಡಾ. ವರದರಾಜ್ ಎಸ್. ಮತ್ತಿತರರಿದ್ದರು.