ಬಂಜರ, ಭೋವಿ, ಕೊರಚ, ಕೊರಮ ಸಮಾಜಕ್ಕೆ ನಿರೀಕ್ಷೆಗೂ ಮೀರಿ ಮೀಸಲಾತಿ ಸಿಕ್ಕಿದೆ: ಶಾಸಕ ಅಶೋಕ ನಾಯ್ಕ
ಶಿವಮೊಗ್ಗ: ಬಂಜರ, ಭೋವಿ, ಕೊರಚ, ಕೊರಮ ಸಮಾಜಕ್ಕೆ ನಿರೀಕ್ಷೆಗೂ ಮೀರಿ ಮೀಸಲಾತಿ ಸಿಕ್ಕಿದ್ದು, ಆದರೆ ಕೆಲವರ ಚಿತಾವಣೆಯಿಂದ ಕಾಣದ `ಕೈ ವಾಡದಿಂದ ಪ್ರತಿಭಟನೆ ನಡೆಯುತ್ತಿದ್ದು, ಇಲ್ಲಿಗೆ ಈ ವಿಷಯವನ್ನು ಕೈಬಿಡಬೇಕು ಎಂದು ಶಾಸಕ ಹಾಗೂ ಜಿ ಬಂಜರ ಸಂಘದ ಅಧ್ಯಕ್ಷ ಕೆ.ಬಿ. ಅಶೋಕ ನಾಯ್ಕ ಮನವಿ ಮಾಡಿದರು.
ಅವರು ಇಂದು ತಮ್ಮ ಕಚೇರಿ ಯಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಬಿಜೆಪಿ ಎ ವರ್ಗದವರ ಹಿತವನ್ನು ಕಾಪಾಡು ತ್ತಿದೆ. ಹಲವು ವರ್ಷಗಳಿಂದ ನೆನೆ ಗುದಿಗೆ ಬಿದ್ದಿದ್ದ ಒಳಮೀಸಲಾ ತಿಯ ಗೊಂದಲಗಳನ್ನು ಸರಿಪಡಿ ಸಿದೆ. ತುಳಿತಕ್ಕೆ ಒಳಗಾದ ಎ ಪರಿಶಿಷ್ಟರಿಗೆ ನ್ಯಾಯವಾದ ಮೀಸ ಲಾತಿ ಸಿಕ್ಕಿದೆ. ಆದರೆ ಬಂಜರ ಸಮುದಾಯದವರು ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಕೆಲವರ ಕುಮ್ಮಕ್ಕಿನಿಂದ ಪ್ರತಿಭಟನೆ ಮಾಡಲು ಹೊರಟಿzರೆ. ಇದು ಸರಿಯಲ್ಲ. ನಮ್ಮ ಸಮುದಾಯದ ವರು ಎಚ್ಚರಗೊಳ್ಳಬೇಕು. ಮೀಸ ಲಾತಿ ಪ್ರಮಾಣವನ್ನು ಬಿಜೆಪಿ ಸರ್ಕಾರ ಹೆಚ್ಚಿಸಿದೆ. ಇದನ್ನು ಸ್ವಾಗತಿಸಬೇಕು ಎಂದರು.
ಈ ಹಿಂದೆ ಬಂಜರ ಮತ್ತ ಇತರ ಜತಿಯವರಿಗೆ ಕೇವಲ ಶೇ.೨ರಷ್ಟು ಮೀಸಲಾತಿ ಇತ್ತು. ನಾವು ಶೇ.೩ರಷ್ಟು ಹೆಚ್ಚಿಸಬಹುದು ಎಂದುಕೊಂಡಿzವು. ಆದರೆ ಶೇ.೪.೫ರಷ್ಟು ಹೆಚ್ಚಿಸಲಾಗಿದೆ. ಇದು ನಮ್ಮ ನಿರೀಕ್ಷೆ ಮೀರಿ ನಮಗೆ ಮೀಸಲಾತಿ ಸಿಕ್ಕಿದೆ. ಆದ್ದರಿಂದ ಸರ್ಕಾರಕ್ಕೆ ನಾನು ಸಮಾಜದ ಪರವಾಗಿ ಅಭಿನಂದಿಸುತ್ತೇನೆ. ಮತ್ತು ನಮ್ಮ ಸಮಾಜದವರು ಇದನ್ನು ಅರ್ಥ ಮಾಡಿಕೊಂಡು ಯಾವುದೇ ರೀತಿಯ ಪ್ರತಿಭಟನೆಗೆ ಮುಂದಾಗಬಾರದು. ಈ ವಿಷಯ ವನ್ನು ಇಲ್ಲಿಗೇ ಕೈಬಿಡಬೇಕು ಎಂದರು.
ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ನಿವಾಸದ ಮೇಲೆ ಕಲ್ಲು ತೂರಾಟ ಮಾಡಿದ್ದು ನಮಗೆ ಬೇಸರ ತಂದಿದೆ. ಇದೊಂದು ಕಹಿ ಘಟನೆ. ಈ ರೀತಿಯ ಘಟನೆಗಳು ಸಂವಿ ಧಾನ ಬಾಹಿರ ವಾಗಿದೆ. ಬಿಜೆಪಿ ಸರ್ಕಾರ ಅಧ್ಯಯನ ವರದಿಯನ್ನು ನೋಡಿಯೇ ಮೀಸಲಾತಿ ಪ್ರಕಟಿ ಸಿದೆ. ಶೇ.೧೫ರಷ್ಟು ಮೀಸಲಾತಿ ಯಲ್ಲಿ ಎಡಗೈನವರಿಗೆ ಶೇ.೬, ಬಲಗೈನವರಿಗೆ ಶೇ.೫.೫, ಬಂಜರ ಸೇರಿದಂತೆ ನಾಲ್ಕು ಜತಿಗಳಿಗೆ ಶೇ.೪.೫ ಹಾಗೂ ಇತರರಿಗೆ ಶೇ.೧ರಷ್ಟು ಮೀಸಲಾತಿ ನೀಡಿದೆ. ಇದು ವೈeನಿಕವೂ ಆಗಿದೆ. ಶೇ.೧ರಲ್ಲಿಯೂ ಕೂಡ ಬಂಜರ ಸಮುದಾಯದ ಅಲೆ ಮಾರಿಗಳು ಸೇರಿಕೊಳ್ಳುತ್ತಾರೆ. ಹಾಗಾಗಿ ಬಿಜೆಪಿ ಸರ್ಕಾರದಲ್ಲಿ ನಮಗೆ ನ್ಯಾಯ ಸಿಕ್ಕಿದೆ ಎಂದರು.
ಬಿ.ಎಸ್ ಯಡಿಯೂರಪ್ಪನ ವರು ಲಂಬಾಣಿ ಸಮುದಾಯಕ್ಕೆ ಅನೇಕ ರೀತಿಯ ನೆರವು ನೀಡಿ zರೆ. ತಾಂಡಾಗಳ ಅಭಿವೃದ್ಧಿಪಡಿ ಸಿzರೆ. ಬಂಜರ ಧಾರ್ಮಿಕ ಕೇಂದ್ರವಾದ ಸೂರಗೊಂಡನಕೊ ಪ್ಪವನ್ನು ಅಭಿವೃದ್ಧಿಪಡಿಸಲಾಗಿದೆ. ಬಂಜರ ಸಮುದಾಯ ಅವರನ್ನು ಸ್ಮರಿಸಬೇಕು. ಆದರೆ ಕೆಲವರು ಇದನ್ನು ಅರಿಯದೆ ಅವರ ವಿರುದ್ಧ ಪ್ರತಿಭಟನೆ ಮಾಡಿರುವುದು ತರವಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮು ಖರಾದ ರಾಧಾಕೃಷ್ಣ, ಕುಮಾರ ನಾಯ್ಕ, ಭೋಜ ನಾಯ್ಕ, ಲೋಕೇಶ್ ನಾಯ್ಕ ಮುಂತಾದವ ರಿದ್ದರು.