ಜಿಲ್ಲಾ ಸುದ್ದಿತಾಜಾ ಸುದ್ದಿ

ಉಳ್ಳಿ ಫೌಂಡೇಷನ್‌ನಿಂದ ಬಂಗಾರಪ್ಪರ ಜನ್ಮದಿನ ಆಚರಣೆ…

Share Below Link

ಶಿಕಾರಿಪುರ: ಬಡ ಜನರ ಕಷ್ಟದ ಬಗ್ಗೆ ಅಪಾರ ಸಹಾನುಭೂತಿಯನ್ನು ಹೊಂದಿದ್ದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಸಮಾಜದಲ್ಲಿನ ಕಟ್ಟಕಡೆಯ ಬಡ ಮಕ್ಕಳು ಉನ್ನತ ಶಿಕ್ಷಣದ ಮೂಲಕ ಸಮುದಾಯದ ಮುಖ್ಯವಾಹಿನಿಯಲ್ಲಿ ಗುರುತಿಸಿ ಕೊಳ್ಳುವಂತಾಗಬೇಕು ಎಂಬ ಮಹದಾಸೆಯನ್ನು ಹೊಂದಿದ್ದರು ಈ ದಿಸೆಯಲ್ಲಿ ಬಂಗಾರಪ್ಪನವರ ಅಭಿಲಾಷೆಗೆ ಪೂರಕವಾಗಿ ಉಳ್ಳಿ ಫೌಂಡೇಶನ್ ಕಾರ್ಯ ನಿರ್ವಹಿಸುತ್ತಿದೆ ಎಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೆಮ್ಮೆ ವ್ಯಕ್ತಪಡಿಸಿದರು.


ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ ೯೦ನೇ ಹುಟ್ಟುಹಬ್ಬದ ಅಂಗವಾಗಿ ಉಳ್ಳಿ ಫೌಂಡೇಶನ್ ವತಿಯಿಂದ ತಾಲೂಕಿನ ಎಂಸಿಆರ್‌ಪಿ ಕಾಲೋನಿಯ ಹಕ್ಕಿಪಿಕ್ಕಿ ಕ್ಯಾಂಪ್ನಲ್ಲಿನ ಅಲೆಮಾರಿ ಜನಾಂಗದ ಮಕ್ಕಳಿಗೆ ಸ್ಕೂಲ್ ಬ್ಯಾಗ್, ಪುಸ್ತಕ ಹಾಗೂ ನೀರಿನ ಬಾಟಲ್‌ಗಳನ್ನು ವಿತರಿಸುವ ಜತೆಗೆ ಶಾಲಾ ಮಕ್ಕಳಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿ ಅವರು ಮಾತನಾಡಿದರು.
ಉಳ್ಳಿ ಫೌಂಡೇಶನ್‌ನಿಂದ ಬಂಗಾರಪ್ಪನವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಬಂಗಾರಪ್ಪ ನವರು ತಮ್ಮ ಜೀವಿತಾವಧಿಯಲ್ಲಿ ಬಡವರ ಕಷ್ಟಕ್ಕೆ ಸ್ಪಂದಿಸುವ ಬಹು ದೊಡ್ಡ ಗುಣವನ್ನು ಹೊಂದಿದ್ದರು ಎಂತಹ ಸಂದರ್ಭದಲ್ಲಿಯೂ ಕಷ್ಟ ಎಂದು ಬಂಗಾರಪ್ಪನವರ ಬಳಿ ಬಂದ ಜನತೆಗೆ ನಿರಾಸೆ ಉಂಟು ಮಾಡದೆ ಮಾನವೀಯತೆಯ ನೆಲೆಗಟ್ಟಿನಲ್ಲಿ ಕೂಡಲೇ ಸ್ಪಂದಿಸುವ ಔದಾರ್ಯತೆಯನ್ನು ಬೆಳೆಸಿಕೊಂಡಿ ದ್ದರು ಎಂದು ತಿಳಿಸಿದ ಅವರು ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ಬಹು ವಿಶಿಷ್ಟ ಗುಣದಿಂದ ಅವರ ಹೃದಯದಲ್ಲಿ ಶಾಶ್ವತವಾದ ಸ್ಥಾನ ಪಡೆದಿzರೆ ಎಂದ ಬಣ್ಣಿಸಿದರು.
ಇಲ್ಲಿನ ಅಲೆಮಾರಿ ಜನಾಂಗದವರ ಕಷ್ಟ-ಸುಖ ಆಲಿಸಿದ್ದೇನೆ ಹಾಗೂ ಮೂಲಭೂತ ಸೌಕರ್ಯಗಳಿಂದ ಅವರು ವಂಚಿತರಾಗಿದ್ದು, ಇವರ ಸಮಸ್ಯೆಗೆ ಶೀಘ್ರದಲ್ಲಿ ಸರ್ಕಾರದ ಹಂತದಲ್ಲಿ ದೊರೆಯಬೇಕಾದ ಸೌಲಭ್ಯಗಳನ್ನು ಹಾಗು ಶಾಶ್ವತ ಶಾಲೆಯನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಉಳ್ಳಿ ಫೌಂಡೇಶನ್ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಉಳ್ಳಿ ದರ್ಶನ್ ಮಾತನಾಡಿ, ರಾಜ್ಯ ಕಂಡ ವರ್ಣರಂಜಿತ ರಾಜಕಾರಣಿ ಎಸ್ ಬಂಗಾರಪ್ಪನವರ ಹುಟ್ಟು ಹಬ್ಬವನ್ನು ಅವರ ಆಶಯದಂತೆ ಬಡ ಮಕ್ಕಳಿಗೆ ಪುಸ್ತಕ ಸ್ಕೂಲ್ ಬ್ಯಾಗ್ ವಿತರಿಸುವ ಮೂಲಕ ಅರ್ಥ ಪೂರ್ಣವಾಗಿ ಆಚರಿಸಿದ ಹೆಮ್ಮೆ ಹೊಂದಿರುವು ದಾಗಿ ತಿಳಿಸಿ ಸೌಲಭ್ಯವಂಚಿತ ಹಕ್ಕಿಪಿಕ್ಕಿ ಜನಾಂಗದವರಿಗೆ ಅಗತ್ಯವಿರುವ ಶಾಶ್ವತ ಶಾಲೆ, ರಸ್ತೆ ಒದಗಿಸುವಂತೆ ಹಾಗೂ ವಾಸ ಸ್ಥಳದ ಹಕ್ಕು ಪತ್ರ ನೀಡುವಂತೆ ಸಚಿವರಲ್ಲಿ ಮನವಿ ಮಾಡಿದ ಅವರು ಕೂಡಲೇ ಸ್ಪಂದಿಸುವ ಭರವಸೆ ನೀಡಿದ ಸಚಿವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಮಹೇಶ್ ಹುಲ್ಮಾರ್ ಮುಖಂಡ ಎಸ್.ಪಿ ನಾಗರಾಜ್ ಗೌಡ, ದಯಾನಂದ ಗಾಮ, ಸ.ನ.ಮಂಜಪ್ಪ,ಸುರೇಶ್ ಗುಡ್ಡಳ್ಳಿ, ರಾಜು ಉಡುಗಣೆ, ಸಂತೋಷ. ಎಂ, ಗಿರೀಶ್. ಎಂ.ಸಿ, ನಾಗರಾಜ್ ನಾಯಕ್, ಶರತ್, ಪರಶುರಾಮ್, ರೂಪೇಶ್, ನಾಗರಾಜ್ ಬನ್ನೂರು, ದೇವೆಂದ್ರಪ್ಪ, ದೇವರಾಜ್ ಸಹಿತ ಹಲವರು ಹಾಜರಿದ್ದರು.