ಜಿಲ್ಲಾ ಸುದ್ದಿತಾಜಾ ಸುದ್ದಿ

ಬಂಗಾರಪ್ಪ ೯೦ನೇ ಜನ್ಮದಿನ ನಿಮಿತ್ತ ಸೊರಬ ಬಿಜೆಪಿಯಿಂದ ಸಂಭ್ರಮಾಚರಣೆ

Share Below Link

ಸೊರಬ: ರಾಜ್ಯದ ಮಾಜಿ ಸಿಎಂ ದಿ. ಎಸ್ ಬಂಗಾರಪ್ಪ ಅವರ ೯೦ನೇ ಜನ್ಮದಿನ ನಿಮಿತ್ತ ಬಿಜೆಪಿ ಮುಖಂಡರು ಹಾಗೂ ಬಂಗಾರಪ್ಪ ನವರ ಅಭಿಮಾನಿಗಳು ಪಟ್ಟಣದ ಖಾಸಗಿ ಬಸ್ ನಿಲ್ದಾಣ ಎದುರು ಬಂಗಾರಪ್ಪನವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲ ಕ ಸಂಭ್ರಮಾಚರಣೆ ಮಾಡಿದರು.
ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಎಂ.ಡಿ ಉಮೇಶ್ ಮಾತನಾಡಿ ಬಂಗಾರಪ್ಪನವರು ರಾಜ್ಯದಲ್ಲಿ ಹಿಂದುಳಿದ ವರ್ಗಗಳ, ಬಡವರ, ಶೋಷಿತರ, ರೈತರ ಬಗ್ಗೆ ಅಪಾರವಾದ ಕಾಳಜಿ ಹೊಂದಿದ ನಾಯಕರಾಗಿದ್ದರು, ವರ್ಣ ರಂಜಿತ ರಾಜಕಾರಣಿ ಯಾಗಿ ರಾಜ್ಯದ ಅಭಿವೃದ್ದಿಗಾಗಿ ಅನೇಕ ಜನಪರ ಯೋಜನೆಗಳನ್ನು ಜರಿಗೆ ತಂದಿದ್ದರು. ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ಮೂಲಕ ರೈತರ ಬದುಕಿಗೆ ಆಶ್ರಯದಾತರಾಗಿದ್ದರು ಎಂದರು.
ವಕೀಲ ಸೋಮಶೇಖರ್ ಬರದವಳ್ಳಿ ಮಾತನಾಡಿ, ಬಂಗಾರಪ್ಪನವರ ಆದರ್ಶವಾದ ಚಿಂತನೆಯ ತತ್ವಾದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಕ್ಷಯ, ಆಶ್ರಯ, ವಿಶ್ವ, ಆರಾಧನಾ, ಗ್ರಾಮೀಣ ಕೃಪಾಂಕ ದಂತಹ ಕಾರ್ಯಕ್ರಮಗಳನ್ನು ಜಾರಿಗೆ ತಂದು ನಿರುದ್ಯೋಗಿಗಳಿಗೆ ಉದ್ಯೋಗದ ಆಸರೆ ನೀಡಿದ ಮಹಾನ್ ನಾಯಕರಾಗಿದ್ದರು ಎಂದರು.
ರಾಜಕಾರಣದಲ್ಲಿ ತಮ್ಮದೆ ಆದ ವೈಶಿಷ್ಟ್ಯವನ್ನು ಮೆರೆದಿದ್ದ ಬಂಗಾರಪ್ಪನವರು ತಮ್ಮ ಅಧಿಕಾರದ ಅವಧಿಯಲ್ಲಿ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದರು ಎಂದರು.
ಪ್ರಮುಖರಾದ ಮಂಜು ನಾಥ್ ಸಿ.ಹೆಚ್, ಗುಡವಿ, ವೀರೇಶ್ ಮೇಸ್ತ್ರಿ,ಮಧು ರಾಯ್.ಜಿ.ಶೇಟ್, ಗುರು ಹಿರೇಶಕುನ, ಕೆ.ಜಿ. ಬಸವರಾಜ್, ಟೇಕಪ್ಪ, ಶಿವಕುಮಾರ್ ದೂಗೂರು, ರಘು ಭಂಡಾರಿ, ದೇವೇಂದ್ರಪ್ಪ ಚನ್ನಾಪುರ, ಕೃಷ್ಣಮೂರ್ತಿ, ಯೂಸೂಫ್ ಸಾಬ್, ಕಿರಣ್ ಕುಮಾರ್,ಪ್ರಭು ಮೇಸ್ತ್ರಿ, ಜಯಲಕ್ಷ್ಮಿ, ನಟರಾಜ್, ಜಾನಕಪ್ಪ, ರಂಗನಾಥ ಮೊಗವೀರ, ಪರಶುರಾಮ್, ಚಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.