ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧದ ಉಲ್ಲೇಖ ಖಂಡನೀಯ: ಗೌಡ
ಶಿವಮೊಗ್ಗ: ರಾಜ್ಯದಲ್ಲಿ ಬಜ ರಂಗದಳ ನಿಷೇಧಿಸುವ ಕಾಂಗ್ರೆಸ್ ಹುನ್ನಾರ ಅತ್ಯಂತ ಖಂಡನೀಯ ಎಂದು ಬಜರಂಗದಳದ ವಿಭಾಗ ಸಂಯೋಜಕ ರಾಜೇಶ್ ಗೌಡ ಹೇಳಿzರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾ ವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಪ್ರಣಾಳಿಕೆ ಯಲ್ಲಿ ಬಜರಂಗದಳ ನಿಷೇಧಿಸುವ ಉಖ ಇದ್ದಿದ್ದು ಮತ್ತು ಪಿಎಫ್‌ಐ ನಂತಹ ದೇಶದ್ರೋಹಿ ಸಂಘಟನೆ ಜೊತೆಗೆ ಹೋಲಿಸಿದ್ದು, ಅತ್ಯಂತ ಖಂಡನೀಯ ಎಂದರು.
ಜಿಹಾದಿ ಸಂಘಟನೆಯ ಭಯೋತ್ಪಾದಕರ ಜೊತೆ ಸಂಪರ್ಕ ವಿಟ್ಟುಕೊಂಡ ಕಾಂಗ್ರೆಸ್ ಪಕ್ಷ ಹಿಂದೂಗಳ ಮತ್ತು ಗೋಮಾ ತೆಯ ರಕ್ಷಣೆ ಮಾಡುವ, ಸೇವೆ, ಸುರಕ್ಷೆ, ಸಂಸ್ಕಾರ ದೇಶಪ್ರೇಮ ದೊಂದಿಗೆ ಕೆಲಸ ಮಾಡುವ ರಾಷ್ಟ್ರೀ ಯವಾದಿ ಸಂಸ್ಥೆ ಬಜರಂಗದ ಳವನ್ನು ಹೋಲಿಸಿ ನಿಷೇದಿಸಲು ಹೊರಟು ಜೇನುಗೂಡಿಗೆ ಕಾಂಗ್ರೆಸ್ ಕೈಹಾಕಿದೆ ಎಂದರು.
ಇಂದಿನಿಂದಲೇ ಬಜರಂಗದ ಳದ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಅಭಿಯಾನ ಕೈಗೊಳ್ಳಲಿ zರೆ. ದೇಶದ ಮಾತೆಯರು ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸುತ್ತಾರೆ. ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಸದಾ ಕಾಮಾಲೆ ಕಣ್ಣಿನಿಂದ ಬಜರಂಗದಳನ್ನು ಟೀಕಿಸುತ್ತಾರೆ. ತಮ್ಮ ರಾಜಕೀಯ ಲಾಭಕ್ಕಾಗಿ ಇವರು ಯಾವ ಮಟ್ಟ ಕ್ಕೂ ಇಳಿಯಲು ಸಿದ್ಧರಿzರೆ. ತಾಕತ್ತಿದ್ದರೆ ಬಜರಂಗದಳ ನಿಷೇಧಕ್ಕೆ ಕೈಹಾಕಲಿ ಎಂದರು.
ರಾಮನ ಅಸ್ಮಿತೆಗಾಗಿ ಆಂಜ ನೇಯ ಇದ್ದಂತೆ ದೇಶದ ಹಿತರಕ್ಷ ಣೆಗೆ ಬಜರಂಗದಳ ಕೆಲಸ ಮಾಡಿ ದೆ. ಕೋವಿಡ್ ಸಂದರ್ಭದಲ್ಲಿ ಸಂಬಂಧಿಕರೇ ಶವ ಸಂಸ್ಕಾರಕ್ಕೆ ಬಾರದೇ ಇzಗ ಸಾವಿರಾರು ಶವ ಸಂಸ್ಕಾರ ಮಾಡಿದ್ದಲ್ಲದೇ ಕೋವಿ ಡ್ ಸಂತ್ರಸ್ಥರ ಮನೆಗೆ ಔಷಧಿ ಆಹಾರ ಪೂರೈಸಿದೆ. ರಾಮ ಮಂ ದಿರ ಹೋರಾಟದಲ್ಲಿ ಭಾಗವಹಿಸಿ ರಾಷ್ಟ್ರ ಭಕ್ತಿಯನ್ನು ಮತ್ತು ಹಿಂದು ತ್ವದ ಜಗೃತಿ ಮೂಡಿಸಿದೆ. ಬಜ ರಂಗದಳದ ಇತಿಹಾಸ ಗೊತ್ತಿಲ್ಲದ ಸ್ವಾರ್ಥ ರಾಜಕಾರಣಿಗಳು ಟೀಕೆ ಮಾಡುತ್ತಿzರೆ. ಭಯೋತ್ಪಾದಕ ಸಂಘಟನೆಯೊಂದಿಗೆ ಹೋಲಿ ಸುತ್ತಿzರೆ ಎಂದರು.
೫೬ ದೇಶಗಳಲ್ಲಿ ಹಿಂದೂಗಳ ರಕ್ಷಣೆಗೆ ಬಜರಂಗದಳ ಕೆಲಸ ಮಾಡುತ್ತಿದೆ. ನಾವು ಯಾವುದೇ ರಾಜಕೀಯ ಉದ್ದೇಶದಿಂದ ಕೆಲಸ ಮಾಡುತ್ತಿಲ್ಲ. ಹಿಂದುತ್ವದ ಪರವಾ ಗಿರುವ ರಾಷ್ಟ್ರೀಯವಾದಿ ಪಕ್ಷ ಬಿಜೆಪಿ ಬೆಂಬಲಿಸಲು ವಿನಂತಿಸುತ್ತೇ ವೆ. ಯಾವತ್ತೂ ನಾವು ಯಾವುದೇ ರಾಜಕೀಯ ಪಕ್ಷದ ಪರವಾಗಿ ಕೆಲಸ ಮಾಡಿಲ್ಲ. ಆದರೆ, ಹಿಂದು ತ್ವದ ಪರವಾಗಿರುವ ಪಕ್ಷಗಳಿಗೆ ಬೆಂಬಲಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಾಗೇಶ್, ಅಂಕುಶ್, ವೇಣು, ಅರ್ಜುನ್, ಲಿಖಿತ್, ಆನಂದ್ ಮೊದಲಾದವರಿದ್ದರು.