ಆರೋಗ್ಯತಾಜಾ ಸುದ್ದಿಲೇಖನಗಳು

ಪಸರಿಸುತ್ತಿರುವ ಪಿಸಿಓಎಸ್‌ಗೆ ಆಯುರ್ವೇದ ಚಿಕಿತ್ಸೆ…

Share Below Link

ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (ಪಿಸಿಒಎಸ್) ಇದು ಹಾರ್ಮೋನ್ ಉತ್ಪಾದನೆಯ ವ್ಯತ್ಯಾಸದಿಂದ ಅಂಡಕೋಶದ (ಅಂಡಾಶಯ ಓವರಿ) ಅಂಚಿನಲ್ಲಿ ೨೦ಕ್ಕಿಂತ ಹೆಚ್ಚು ೨ರಿಂದ ೯ ಮಿಲಿ ಮೀಟರ್‌ಗಾತ್ರದ ಅಂಡಾಣುಗಳು (ಫೋಲಿಕಲ್ಸ್) ಮುತ್ತಿನ ಹಾರದಂತೆ ಹರಡಿಕೊಂಡು ಅಂಡಾಶಯವನ್ನು ಹಿಗ್ಗಿಸುವ ಮೂಲಕ ಹಲವು ಶಾರೀರಿಕ ರೋಗಗಳ ಸಮೂಹವಾಗಿದೆ.
ಇತ್ತೀಚಿನ ದಿನಗಳಲ್ಲಿ ಪಿ.ಸಿ.ಓ.ಎಸ್ ರೋಗದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ೧೮-೪೫ ವರ್ಷಗಳ ನಡುವಿನ ವಯಸ್ಕರಲ್ಲಿ ಕಂಡುಬರುತ್ತಿದೆ. ಶೇ. ೮೫ ಓದುವ ಮಕ್ಕಳು, ಶೇ.೫ ರಿಂದ ೧೦ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರು, ತಾಯಿಗೆ ಪಿಸಿಓಡಿ ಇದ್ದಲ್ಲಿ ಶೇ.೨೪ರಿಂದ ೫೨ರಷ್ಟು ಮಗಳಿಗೆ ಬರುವ ಸಾಧ್ಯತೆಯಿರುತ್ತದೆ. ಸಹೋದರಿಗೆ ಪಿ.ಸಿ.ಓ.ಡಿ ಇದ್ದಲ್ಲಿ ಶೇ.೩೨ರಿಂದ ೬೬ ಬರುವ ಸಾಧ್ಯತೆ ಇರುತ್ತದೆ. ಒಟ್ಟಾರೆ ಭಾರತದಲ್ಲಿ ಶೇ.೩.೭ ರಿಂದ ೨೨.೫ ಮಹಿಳೆಯರು ಈ ರೋಗಕ್ಕೆ ತುತ್ತಾಗುತ್ತಿzರೆ.
ಕೆಲಸದ ಒತ್ತಡದಿಂದ ಕೆಲಸಕ್ಕೆ ಹೋಗುವ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬೇಸರದ ಸಂಗತಿ ಎಂದರೆ ದಿನಕಳೆದಂತೆ ಬಿ.ಪಿ. ಮತ್ತು ಸಕ್ಕರೆ ಖಾಯಿಲೆಯು ವಯಸ್ಕರಲ್ಲಿ ಸಹಜ ಎನ್ನು ರೀತಿ, ಪಿ.ಸಿ.ಓ.ಎಸ್. ಮಹಿಳೆಯರಲ್ಲಿ ಸಹಜವೆನ್ನುವ ತಪ್ಪು ಮನೋಭಾವನೆಗೆ ಜನರು ಒಳಗಾಗುತ್ತಿzರೆ.
ಈ ರೋಗದ ಸಂಪೂರ್ಣ ನಿವಾರಣೆಯು ಸಾಧ್ಯವಾದ್ದರಿಂದ ಪಿಸಿಓಎಸ್‌ನ ಸಾಮಾನ್ಯರೋಗಕಾರಣ ಲಕ್ಷಣ ಮತ್ತು ಚಿಕಿತ್ಸೆಯನ್ನು ತಿಳಿಸಿ ಜಾಗೃತಿ ಮೂಡಿಸುವ ಪ್ರಯತ್ನವಿದು.
ಕಾರಣಗಳು: ಕಾರಣಗಳನ್ನು ಶಾರೀರಿಕ, ಮಾನಸಿಕ ಮತ್ತು ಆಹಾರದ ಕಾರಣಗಳು ಎಂದು ವಿಂಗಡಿಸ ಬಹುದು. ಶಾರೀರಿಕ ಕಾರಣಗಳೆಂದರೆ ವ್ಯಾಯಾಮದ ಕೊರತೆ, ಬೆಳಗಿನ ಸಮಯದಲ್ಲಿ ನಿದ್ರಿಸುವುದು, ಆಹಾರ ಸೇವಿಸಿದ ತಕ್ಷಣ ನಿದ್ರಿಸುವುದು, ರಾತ್ರಿಯಲ್ಲಿ ಎಚ್ಚರವಿರುವುದು, ಮಲ ಮೂತ್ರ ಇತ್ಯಾದಿ ದೇಹದ ವೇಗಗಳನ್ನು ತಡೆಯುವುದು.
ಮಾನಸಿಕ ಕಾರಣಗಳೆಂದರೆ ದುಃಖ, ಚಿಂತೆ, ಮಾನಸಿಕ ಒತ್ತಡ, ಭಯ, ಗಾಬರಿ, ಕೊರಗುವುದು ಇತ್ಯಾದಿ.


ಆಹಾರದ ಕಾರಣಗಳೆಂದರೆ ಜಂಕ್ ಆಹಾರ (ಆರೋಗ್ಯಕ್ಕೆ ಹಿತವಲ್ಲದ ಅತಿಯಾದ ಕೊಬ್ಬಿನಂಶ ಪ್ರಿಸರ್ವೇಟಿವ್‌ಯುಕ್ತ ಆಹಾರಗಳು) ಸೇವನೆ, ಹಸಿವಿಲ್ಲದೆ ಪದೇಪದೇ ತಿನ್ನುವುದು, ಸರಿಯಾದ ಸಮಯದಲ್ಲಿ ತಿನ್ನದೇ ಇರುವುದು.
ವಿಶೇಷ ಕಾರಣ: ಮುಟ್ಟನ್ನು ಮುಂದೂಡಲು ಅಥವಾ ಹಿಂದೂಡಲು ಪದೇ ಪದೇ ಹಾರ್ಮೋನ್ ಮಾತ್ರೆಯನ್ನು ಬಳಸುವುದು.
ಈ ಎ ಕಾರಣಗಳಿಂದಾಗಿ ಶರೀರದ ಹಾರ್ಮೋನಿನ ಉತ್ಪಾದನೆಯಲ್ಲಿ ವ್ಯತ್ಯಾಸವಾಗುತ್ತದೆ. “ಹೈಪೋಥಲಾಮೆ- ಪಿಟ್ಯುಟರಿ- ಓವೇರಿಯನ್‌ಆಕ್ಸಿಸ್” ಎಂದರೆ ಮೆದುಳಿನಿಂದ ಅಂಡಾಶಯದಅಕ್ಷವು ಸಮತೋಲನ ಕಳೆದುಕೊಳ್ಳುತ್ತದೆ. ಇದರಿಂದಗೋನಡೋಟ್ರೋಪಿನ್ ಹಾರ್ಮೋನ್‌ಗಳ ಪ್ರಮಾಣ ಅತಿಯಾಗಿ ಹೆಚ್ಚುತ್ತದೆ. ಫಾಲಿಕಲ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್ (ಅಂಡಕೋಶವನ್ನು ಉತ್ತೇಜಿಸುವ ಹಾರ್ಮೋನ್) ಕಡಿಮೆಯಾಗುತ್ತದೆ.
ಆದ್ದರಿಂದ ಅಂಡೋತ್ಪಾದನೆ ಮತ್ತು ಅಂಡದ ಬಿಡುಗಡೆ (ಓವ್ಯುಲೇಶನ್) ಆಗುವುದಿಲ್ಲ. ಇದರಿಂದ ಈಸ್ಟ್ರೋಜೆನ್ ಉತ್ಪಾದನೆ ನಿರಂತರವಾಗಿರುತ್ತದೆ ಮತ್ತು ಪೋಸ್ಟ್ರೋಜನ್‌ಉತ್ಪತ್ತಿಯಾಗುವುದಿಲ್ಲ. ಇದರಿಂದ ತಿಂಗಳುಗಳಾದರು ಮುಟ್ಟಾಗುವುದಿಲ್ಲ, ಅಲ್ಲದೆ ಬಂಜೆತನ ತೊಂದರೆ, ಮಾನಸಿಕ ಖಿನ್ನತೆ ಉಂಟಾಗುವ ಸಾಧ್ಯತೆಇರುತ್ತದೆ.
ಮುಟ್ಟು (ಋತುಚಕ್ರದಲ್ಲಿ) ಏರುಪೇರು/ಮುಟ್ಟಾಗದಿರುವುದು (ಅಮೆನೋರಿಯ), ಅಂಡಾಣುಗಳು ಅಂಡಕೋಶದಿಂದ ಬಿಡುಗಡೆಯಾಗದೆ ಇರುವುದು( ಅನೊವ್ಯುಲೇಶನ್), ಮುಖ ಮತ್ತು ಶರೀರದಲ್ಲಿ ಹೆಚ್ಚು ಕೂದಲು ಬರುವುದು (ಹಿರ್ಸುಟಿಸಮ್), ಕುತ್ತಿಗೆ, ತೋಳು ಮತ್ತು ತೊಡೆಯ ಭಾಗಕಪ್ಪಾಗುವುದು (ಅಕ್ಯಾಂತೋಸಿಸ್ ನಿಗ್ರಿಕಾನ್ಸ್), ತೂಕ ಹೆಚ್ಚಾಗುವುದು, ತಲೆಕೂದಲು ಉದರುವುದು ಇದರ ಲಕ್ಷಣಗಳಾಗಿವೆ.


ಆಯುರ್ವೇದಚಿಕಿತ್ಸೆ:
ರೋಗದ ಮೂಲ ಕಾರಣವನ್ನು ಅರಿತು ಅದನ್ನು ನಿಲ್ಲಿಸುವುದು, ದೇಹದಲ್ಲಿ ಉಂಟಾದ ಅಸಮತೋಲನವನ್ನು ಪಂಚಕರ್ಮ ಚಿಕಿತ್ಸೆಯ ಮೂಲಕ ಸರಿಪಡಿಸಿ ನಂತರ ಔಷಧಿ ನೀಡುವುದು, ವಿಶೇಷ ಔಷಧ, ಆಹಾರ ವಿಧಿ ವಿಧಾನಗಳ ಪಾಲನೆ ಮಾಡುವುದು, ವ್ಯಾಯಾಮ ಮತ್ತು ಯೋಗಗಳನ್ನು ಮಾಡುವುದು. ದೇಹಕ್ಕೆ ಹಿತವಾದ ಆಹಾರ ಮತ್ತು ವಿಹಾರದ ಅನುಸರಣೆಯಿಂದ ಹಾಗೂ ಆಯುರ್ವೇದ ಚಿಕಿತ್ಸಾ ಪದ್ಧತಿಯಿಂದ ಪಿ.ಸಿ.ಒ.ಎಸ್. ರೋಗವನ್ನು ತಡೆಯಬಹುದು.
ಹೆಣ್ಣು ಮಕ್ಕಳಲ್ಲಿ ಕಾಡುವ ಪಿ.ಸಿ.ಒ.ಎಸ್. ಬಂಜೆತನ ಹಾಗೂ ಮುಟ್ಟಿನ ತೊಂದರೆಗಳಿಗೆ ಶಿವಮೊಗ್ಗದ ಗೋಪಾಳದಲ್ಲಿನ ಪ್ರೆಸ್ ಕಾಲೋನಿಯಲ್ಲಿರುವ ಟಿ.ಎಂ.ಎ.ಇ. ಅಂಗ ಸಂಸ್ಥೆಯಾದ ಶ್ರೀಚಂದ್ರಮಳೀಶ್ವರ ಪಂಚಕರ್ಮ ಮತ್ತು ಕ್ಷಾರಸೂತ್ರ ಚಿಕಿತ್ಸಾ ಕೇಂದ್ರದಲ್ಲಿ ಏ.೯ ರಿಂದ ೧೬ ರವರೆಗೆ ಉಚಿತ ಆಯುರ್ವೇದ ಪಿ.ಸಿ.ಒ.ಎಸ್. ಸಂಬಂಧಿತ ಪ್ರಸೂತಿ ಮತ್ತು ಸ್ತ್ರೀರೋಗ ಚಿಕಿತ್ಸಾ ಸಪ್ತಾಹ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ತಪಾಸಣೆ ನಡೆಸಲಾಗುತ್ತದೆ. ಆರೋಗ್ಯಾಸಕ್ತರು ಶಿಬಿರದ ಸದುಪಯೋಗ ಪಡೆದು ಕೊಳ್ಳಬಹುದು. ಮುಂಚಿತ ನೋಂದಣಿಗಾಗಿ ಮೊ: ೯೬೩೨೧೨೧೧೧೦ಗೆ ಸಂಪರ್ಕಿಸಬಹುದು.

ಲೇಖನ: ಡಾ.ಕೆ.ಸ್ನೇಹ,
ಪ್ರಸೂತಿ -ಸ್ತ್ರೀರೋಗ ಚಿಕಿತ್ಸಾ ತಜ್ಞರು,
ಶಿವಮೊಗ್ಗ.