ಆಯ್ನೂರ್ ಮಂಜುನಾಥ್ ಗೆಲ್ಲುವುದು ನಿಶ್ಚಿತ :ಕೆಬಿಪಿ
ಶಿವಮೊಗ್ಗ: ಶಿವಮೊಗ್ಗ ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್ ಸ್ಪರ್ಧಿಸಿದ್ದು, ಅವರು ಗೆಲ್ಲುವುದು ನಿಶ್ಚಿತ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹೇಳಿzರೆ.
ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾವುದೇ ಷರತ್ತು ಇಲ್ಲದೇ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಜೆಡಿಎಸ್ ಪಕ್ಷಕ್ಕೆ ಸೇರಿದ್ದೇನೆ. ನಗರದ ಹಿತಾಸಕ್ತಿ ಕಾಪಾಡುವುದು ನನ್ನ ಧರ್ಮವಾಗಿದೆ. ನನ್ನ ಎ ಅಭಿಮಾನಿಗಳು ಕೂಡ ಶಾಂತಿ ಬಯಸುವವರು. ಯಾರೂ ಬೆಂಕಿ ಹಚ್ಚುವವರಲ್ಲ, ಎಲ್ಲರೊಂದಿಗೆ ಚರ್ಚೆ ಮಾಡಿಯೇ ಜೆಡಿಎಸ್ ಪಕ್ಷಕ್ಕೆ ಸೇರಿದ್ದೇನೆ. ಬಹಳ ಜನ ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಬರಲಿzರೆ ಎಂದರು.
ಎಷ್ಟು ಮತದ ಅಂತರದಿಂದ ಗೆಲ್ಲಬಹುದು ಎಂಬ ಪ್ರಶ್ನೆಗೆ ಆಯ ನೂರು ಮಂಜುನಾಥ್ ಗೆಲ್ಲವುದು ನಿಶ್ಚಿತ. ಒಂದು ಮತವಾದರೂ ಗೆಲುವು ಗೆಲುವೇ. ಫಲಿತಾಂಶ ಬಂದ ಮೇಲೆ ಮತದ ಅಂತರ ಗೊತ್ತಾಗುತ್ತದೆ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಮನಸ್ಥಿತಿ ಯನ್ನು ಮತದಾರ ಅರಿತಿzನೆ. ನಗರದ ಅಭಿವೃದ್ಧಿಗೆ ಶಾಂತಿ ಕಾಪಾಡುವುದು ಅತಿ ಮುಖ್ಯ. ರೈಲು, ವಿಮಾನ ನಿಲ್ದಾಣ ಸೇರಿ ದಂತೆ ಅನೇಕ ಅಭಿವೃದ್ಧಿ ಆದರೂ ಸಹ ಯಾವುದೇ ಕೈಗಾರಿಕೋ ದ್ಯಮಿ ಶಿವಮೊಗ್ಗ ಜಿಗೆ ಬರುವು ದಿಲ್ಲ ಏಕೆ ಎಂದು ಬಿಜೆಪಿಯವರೇ ಹೇಳಬೇಕು. ಶಿವಮೊಗ್ಗದ ಜನ ಶಾಂತಿಪ್ರಿಯರು. ಹಾಗಾಗಿ ಜೆಡಿಎಸ್ ಅಭ್ಯರ್ಥಿಗೆ ಈ ಬಾರಿ ಮತ ಹಾಕಲಿzರೆ.
ಜೆಡಿಎಸ್ ಅಭ್ಯರ್ಥಿ ಆಯ ನೂರು ಮಂಜುನಾಥ್ ಮಾತ ನಾಡಿ, ಗೆಲ್ಲುವ ದಾರಿ ಹಗುರವಾ ಗಿದೆ. ನನ್ನ ಗೆಲುವಿನ ಹಾದಿಗೆ ಕೆ.ಬಿ. ಪ್ರಸನ್ನಕುಮಾರ್, ಎಂ. ಶ್ರೀಕಾಂತ್ ಅವರ ತಂಡ ಸುಲಭದ ದಾರಿ ಮಾಡಿಕೊಟ್ಟಿದೆ. ಕುರುಕ್ಷೇತ್ರ ಯುದ್ಧ ಸಮರ್ಥವಾಗಿ ಎದುರಿಸು ತ್ತೇವೆ. ಹೇಳುವುದಕ್ಕಿಂತ ಮಾಡು ವುದು ಲೇಸು ಎಂಬಂತೆ ಕೆಲಸ ಮಾ ಡುತ್ತೇವೆ. ನಾಳೆಯಿಂದ ಜೆಡಿಎಸ್ ಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ ಎಂದರು.
ಚುನಾವಣಾ ಪ್ರಚಾರಕ್ಕೆ ಮಾಜಿ ಸಿಎಂ ಹೆಚ್.ಡಿ. ಕುಮಾರ ಸ್ವಾಮಿ ಬರುತ್ತಾರೆ. ಆರೋಗ್ಯ ನೋಡಿಕೊಂಡು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಬರುವ ವರಿzರೆ. ಪ್ರಚಾರದ ಕಾವು ಏರುತ್ತಿದೆ. ನನ್ನನ್ನೂ ಸೇರಿಕೊಂ ಡಂತೆ ನನ್ನ ಜೊತೆಗಿರುವವರು ಚುನಾವಣೆಯ ನಾಡಿ ಮಿಡಿತ ಬಲ್ಲವರಾಗಿzರೆ. ಆದ್ದರಿಂದ ಯಾರ ಭಯವೂ ನಮಗಿಲ್ಲ. ನಾವು ಗೆದ್ದೇ ಗೆಲ್ಲುತ್ತೇವೆ. ಶಿವ ಮೊ ಗ್ಗಕ್ಕೆ ಶಾಂತಿ ತರುತ್ತೇವೆ ಎಂದರು.
ಜೆಡಿಎಸ್ ಜಿಧ್ಯಕ್ಷ ಎಂ. ಶ್ರೀಕಾಂತ್, ಪ್ರಮುಖರಾದ ನಿಖಿಲ್, ನಾಗರಾಜ ಕಂಕಾರಿ, ಪಾಲಾಕ್ಷಿ, ಸತ್ಯನಾರಾಯಣ್, ರಾಮಕೃಷ್ಣ, ಬೊಮ್ಮನಕಟ್ಟೆ ಮಂಜುನಾಥ್, ಕಡಿದಾಳ್ ಗೋಪಾಲ್, ಸಿದ್ದಪ್ಪ, ರಘು, ಸಂಗಯ್ಯ, ಭಾಸ್ಕರ್ ಇದ್ದರು.