ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಜ್ಞಾನದ ಅರಿವು – ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಪುಸ್ತಕಗಳ ಓದುವಿಕೆ ಸಹಕಾರಿ…

Share Below Link

ಶಿವಮೊಗ್ಗ : ಓದು eನದ ಅರಿವನ್ನು ವಿಸ್ತರಿಸು ತ್ತದೆ ಮತ್ತು ಆತ್ಮ ವಿಶ್ವಾಸವನ್ನು ಬೆಳೆಸುತ್ತದೆ ಎಂದು ಕುವೆಂಪು ವಿವಿ ಕನ್ನಡ ಅಧ್ಯಾಪಕರ ವೇದಿಕೆಯ ಕಾರ್ಯದರ್ಶಿ ಡಾ.ಎಸ್.ಎಂ. ಮುತ್ತಯ್ಯ ಹೇಳಿದರು.
ಅವರು ಇಂದು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜ್ ಕನ್ನಡ ವಿಭಾಗ ಕುವೆಂಪು ವಿವಿ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ವೇದಿಕೆ ಆಶ್ರಯದಲ್ಲಿ ಆಯೋಜಿಸಿದ್ದ ನನ್ನ ಮೆಚ್ಚಿನ ಪುಸ್ತಕ ವಿಚಾರ ಸಂಕಿರಣ ಹಾಗೂ ಪ್ರಬಂಧ ಮಂಡನೆ ಕಾರ್ಯಕ್ರಮವನ್ನು ಕುವೆಂಪು ಅವರ ಕವಿತೆ ವಾಚನ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯ ಓದುವುದರಿಂದ ಮನುಷ್ಯರಾಗಬೇಕು. ಆದರೆ, ಆಯ್ಕೆ ಮಾಡಿ ಪುಸ್ತಕಗಳನ್ನು ಓದಬೇಕು. ಕುವೆಂಪು ಅವರು ಹೇಳುವ ರೀತಿಯಲ್ಲಿಯೇ ಡಾಕ್ಟರ್, ಇಂಜಿನಿಯರ್, ವಿeನಿ ಆಗಬಹುದು. ಆದರೆ, ಅದರ ಹಿಂದೆ ಮನುಷ್ಯತ್ವ ಬೇಕಾಗುತ್ತದೆ. ಸಾಹಿತ್ಯ ಓದುವುದರಿಂದ ಇದು ಸಿಗುತ್ತದೆ ಎಂದರು.


ಅಂಬೇಡ್ಕರ್, ಗಾಂಧಿ ಮುಂತಾದವರು ಅದ್ಭುತ ಓದುಗರು. ಅವರು ಓದಿದ್ದರಿಂದಲೇ ಈ ನಾಡಿಗೆ ಬೆಳಕು ನೀಡಿzರೆ. ಅಂಬೇಡ್ಕರ್ ಅಂತೂ ತನ್ನ ಓದಿನ ಮೂಲಕ ಅವಮಾನಗಳನ್ನು ದೂರ ಮಾಡಿzರೆ. ಸಂವಿಧಾನವೇ ಇದಕ್ಕೆ ಉದಾಹರಣೆಯಾಗಿದೆ ಎಂದ ಅವರು, ಸಮಾಜದ ನೋವಿಗೆ ಭಾಷಾ ಕೌಶಲ್ಯಕ್ಕೆ ಬದುಕನ್ನು ಕಟ್ಟಿಕೊಳ್ಳಲು, ಸ್ವಾರ್ಥದಿಂದ ದೂರವಿರಲು eನ ಬೇಕು. ಈ eನ ಓದುವುದರಿಂದ ಬರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಟಿ. ಅವಿನಾಶ್, ಅಕ್ಷರ ಓದುವುದು ಒಂದು ಸಂಭ್ರಮ ಮತ್ತು ಬಿಡುಗಡೆಯೂ ಓದು. ಲೇಖಕ ಮತ್ತು ಓದುಗನ ನಡುವೆ ಪುಸ್ತಕ ಒಂದು ಅನುಸಂಧಾನವನ್ನು ಏರ್ಪಡಿಸು ತ್ತದೆ. ಓದು ರಾಜಕೀಯ ಚಟುವಟಿಕೆ ಕೂಡ ಆಗುತ್ತದೆ. ಆದರೆ ಅದು ಅಧಿಕಾರ ರಾಜಕೀಯ ವಲ್ಲ. ಓದು ನಮ್ಮನ್ನು ಪನರ್ ವಿಮರ್ಶೆಗೆ ಒಳಪಡಿಸಿಕೊಳ್ಳಬೇಕು. ಅದು ನಮ್ಮಲ್ಲಿ ರೋಮಾಂಚನ ವನ್ನು, ಕೌತುಕವನ್ನು ಮತ್ತು ನಮ್ಮ ನೋವುಗಳ ಬಿಡುಗಡೆಗೆ ಸಾಕಾರಾವಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ್ ಮರ್ಗನಳ್ಳಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಮತ್ತು ಪುಸ್ತಕಗಳ ಅಭಿಪ್ರಾಯಗಳನ್ನು ಸ್ವತಃ ವಿಮರ್ಶೆ ಮಾಡಲು, ಅವರ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯ ಕ್ರಮ ಆಯೋಜಿಸಲಾಗಿದೆ. ಸುಮಾರು ೪೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಪ್ರಬಂಧ ಮಂಡಿಸುತ್ತಿzರೆ. ಇವರೆಲ್ಲರ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ತರುವ ಯೋಚನೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಕೊಪ್ಪ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಡಾ.ಜಿ.ಎನ್. ಧನಂಜಯ ಮೂರ್ತಿ, ಉಪನ್ಯಾಸಕರಾದ ಡಾ. ಲವ ಜಿ.ಆರ್., ಡಾ. ದೊಡ್ಡ ನಾಯ್ಕ್ ಹೆಚ್., ಡಾ.ರಾಜೀವ್ ನಾಯ್ಕ್ ಎಸ್., ಮಮತಾ, ಸೇರಿದಂತೆ ಹಲವರಿದ್ದರು. ಸುಮಾರು ೨೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಕೃತಿಗಳ ಕುರಿತು ಪ್ರಬಂಧ ಮಂಡಿಸಿದರು.
ಸುಷ್ಮಿತಾ ನಿರೂಪಿಸಿದರು. ಅನುಷಾ ಪ್ರಾರ್ಥಿಸಿದರು. ಮನೋಜ್ ವಂದಿಸಿದರು.