ಜಿಲ್ಲಾ ಸುದ್ದಿತಾಜಾ ಸುದ್ದಿ

ಸಾಂಸ್ಕೃತಿಕ ಶ್ರೇಷ್ಠತೆಯ ಅರಿವು ಮೂಡಿಸುವುದು ಇಂದಿನ ಅಗತ್ಯ

Share Below Link

ಶಿವಮೊಗ್ಗ: ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಂಸ್ಕೃತಿ ಪರಂಪರೆಯ ಅನಾವರಣ ಹೆಚ್ಚು ಸಾಧ್ಯವಾಗಲಿದ್ದು, ಮುಂದಿನ ಪೀಳಿಗೆಗೆ ಸಾಂಸ್ಕೃತಿಕ ಶ್ರೇಷ್ಠತೆಯ ಅರಿವು ಮೂಡಿಸುವುದು ಮುಖ್ಯ ಎಂದು ರೋಟರಿ ಜಿ ಗವರ್ನರ್ ಬಿ.ಸಿ.ಗೀತಾ ಹೇಳಿದರು.


ಕುವೆಂಪು ರಂಗಮಂದಿರದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ರಮ್ಯದೋಳ್ ಕಾವ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೀತಿ ವಿಶ್ವಾಸ ಹೆಚ್ಚಿಸಿರುವುದರ ಜತೆಯಲ್ಲಿ ಮಾನಸಿಕವಾಗಿ ಸದೃಢ ವಾಗಿರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ರೋಟರಿ ಸಂಸ್ಥೆ ಸ್ನೇಹ ಪ್ರೀತಿ ಸೇವೆಯ ಜೊತೆಗೆ ಸದಸ್ಯರ ಮನೋರಂಜನೆಯು ಅತಿ ಮುಖ್ಯ. ರೋಟರಿ ಸದಸ್ಯರನ್ನು ಸಾಕಷ್ಟು ಪ್ರತಿಭೆ ಇದ್ದು, ಕೆಲವರು ಕಿರುತೆರೆ ಚಲನಚಿತ್ರದಲ್ಲಿ ಅಭಿನಯಿಸಿದಂತ ಉದಾರಣೆಗಳಿವೆ. ರೋಟರಿ ಸದಸ್ಯರು ಇಂತಹ ವೇದಿಕೆಗಳನ್ನ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.
ಭಜರಂಗಿ ೨ ಚಲನಚಿತ್ರ ನಟರಾದ ಚೆಲುವರಾಜ್ ಸಿಎಸ್ ಮಾತನಾಡಿ, ಪ್ರತಿಭೆ ಪ್ರತಿಯೊಬ್ಬರ ಸ್ವತ್ತು. ಅದನ್ನು ಅನಾವರಣ ಮಾಡಲು ಬೇಕಾಗುವ ಛಲ ಪರಿಶ್ರಮ ಮುಖ್ಯವಾಗುತ್ತದೆ. ಇಂತಹ ವೇದಿಕೆಯಿಂದ ಸಾಕಷ್ಟು ಪ್ರತಿಭೆಗಳು ಹೊರಬರಲು ಸಾಧ್ಯ ವಾಗುತ್ತದೆ ಎಂದು ಹೇಳಿದರು.
ತಂತ್ರeನ ಸಾಕಷ್ಟು ಮುಂದುವರೆದಿದ್ದು, ಎಲ್ಲರಿಗೂ ಇಂತಹ ಕ್ಷೇತ್ರಗಳಲ್ಲಿ ತೊಡಗಿಸಿ ಕೊಳ್ಳಲು ಅವಕಾಶಗಳಿವೆ. ರೋಟರಿ ಸೇವಾ ಕಾರ್ಯಗಳನ್ನು ಪ್ರಪಂಚಾದ್ಯಂತ ನೋಡುತ್ತಿದ್ದೇವೆ. ಮನುಕುಲದ ಸೇವೆಯಲ್ಲಿ ರೋಟರಿಯ ಪಾತ್ರ ತುಂಬಾ ಮುಖ್ಯವಾಗಿದೆ. ಈ ದಿನ ನಡೆಯುವ ವಲಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಜನರಲ್ಲೂ ಚೈತನ್ಯ ಮೂಡಿಸಿದೆ. ಜಿ ಮಟ್ಟದ ಸಂಸ್ಕೃತಿಯ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳ ಬೇಕು ಎಂದು ತಿಳಿಸಿದರು.
ಶಿವಮೊಗ್ಗ ರಿವರ್‌ಸೈಡ್ ಕ್ಲಬ್ಬಿನ ಸಾರಥ್ಯದಲ್ಲಿ ಆಯೋಜಿಸಿದ್ದ ವಲಯ ಮಟ್ಟದ ವಲಯ ೧೦ ಮತ್ತು ೧೧ರ ಕ್ಲಬ್‌ಗಳ ಸಹಕಾರ ದಿಂದ ಕಾರ್ಯಕ್ರಮ ನಡೆಯುತ್ತಿದೆ. ಶಿವಮೊಗ್ಗ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಿವರ್ ಸೈಡ್ ಕ್ಲಬ್ ಅಧ್ಯಕ್ಷ ಎಸ್ ಮಂಜುನಾಥ್ ಮಾತನಾಡಿದರು. ವಲಯ ೧೦ರ ಸಹಾಯಕ ಗವರ್ನರ್ ರಾಜೇಂದ್ರ ಪ್ರಸಾದ್, ವಲಯ ೧೧ರ ಸಹಾಯಕ ಗವರ್ನರ್ ರವಿ ಕೊಟೋಜಿ, ರೋಟರಿ ರಿವರ್ ಸೈಡ್ ಕಾರ್ಯದರ್ಶಿ ಮಂಜು ನಾಥ್, ಜಿ ಸಾಂಸ್ಕೃತಿಕ ಸಮಿತಿಯ ಉಪಾಧ್ಯಕ್ಷ ಕೆಪಿ ಶೆಟ್ಟಿ, ಕಾರ್ಯಕ್ರಮ ಸಂಚಾಲಕ ಎಂ ಜಗನ್ನಾಥ್, ವಲಯ ಸೇನಾನಿಗಳು ಮೋಹನ್, ಮಶ್, ಧರ್ಮೇ ಂದ್ರ ಸಿಂಗ್, ಕೆ ಟಿ ಚಂದ್ರಪ್ಪ, ಮಹೇಶ್ ಎ ಹಾಗೂ ಮಾಜಿ ಸಹಾಯಕ ಗವರ್ನರ್ ಜಿ ವಿಜಯ ಕುಮಾರ್, ವಲಯ ಸಂಯೋಜಕ ಎಸ್ ಪಿ ಶಂಕರ್, ವಲಯ ತರಬೇತುದಾರ ಆನಂದಮೂರ್ತಿ, ಡಾ. ಕಸಬಿ, ಮಂಜುನಾಥ್ ರಾವ್ ಕದಂ, ಧನರಾಜ್, ವಲಯ ೧೦ /೧೧ರ ಎ ಕ್ಲಬ್ಬಿನ ಅಧ್ಯಕ್ಷರು ಕಾರ್ಯದರ್ಶಿಗಳು ಕುಟುಂಬದವರು ಉಪಸ್ಥಿತರಿದ್ದರು.