ಮಣ್ಣು ಪರೀಕ್ಷೆ ಕುರಿತು ರೈತರಿಗೆ ಜಾಗೃತಿ….
ಶಿವಮೊಗ್ಗ : ಶಿಕಾರಿಪುರ ತಾಲೂಕಿನ ಸುರಗಿಹಳ್ಳಿ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿeನಗಳ ವಿವಿ, ಇರುವಕ್ಕಿ ಕೃಷಿ ವಿeನಗಳ ಮಹಾವಿದ್ಯಾಲಯ ಇರುವಕ್ಕಿಯ ವಿದ್ಯಾರ್ಥಿಗಳು ತಮ್ಮ ಕೃಷಿ ಗ್ರಾಮೀಣ ಕಾರ್ಯಾನುಭ ಕಾರ್ಯಕ್ರಮ ನಿಮಿತ್ತ ಮಣ್ಣು ರೈತರ ಹೊನ್ನು ಎಂಬ ಕಾರ್ಯಕ್ರಮ ವನ್ನು ಆಯೋಜಿಸಿ ಮಣ್ಣು ಪರೀಕ್ಷೆ ಬಗ್ಗೆ ಗುಂಪು ಚರ್ಚೆ ನಡೆಸಿದರು.
ಕಾರ್ಯಕ್ರಮದಲ್ಲಿ ಶ್ರೀ ಪ್ರಮಹಾಂತ ಸ್ವಾಮಿಗಳು, ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ ಸುರಗಿಹಳ್ಳಿ ತಿಪ್ಪಾಯಿಕೊಪ್ಪ ಇವರು ಕಾರ್ಯಕ್ರಮ ಉದ್ಘಾಟಿಸಿ ದರು. ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರೈತರಿಗೆ ಮಣ್ಣು ಪರೀಕ್ಷೆ ಏಕೆ ಮಾಡಿಸಬೇಕು ಅದರ ಉಪಯೋಗ, ಮಣ್ಣು ಮಾದರಿ ಸಂಗ್ರಹಣಾ ವಿಧಾನ ಮತ್ತು ಮಣ್ಣು ಪರೀಕ್ಷೆಯ ಮಹತ್ವದ ಬಗ್ಗೆ ಮಾಹಿತಿ ನೀಡಲಾಯಿತು.
ನಂತರ ರೈತರ ಮಣ್ಣು ಪರೀಕ್ಷೆ ಬಗ್ಗೆ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಸೂಚಿಸಲಾಯಿತು.
ಇಂದು ಬೆಳಿಗ್ಗೆ ಮಣ್ಣು ಮಾದರಿ ಸಂಗ್ರಹಣೆಯನ್ನು ರೈತರ ಹೊಲದಲ್ಲಿ ಪ್ರದರ್ಶನ ಮಾಡಿ ತೋರಿಸಲಾಯಿತು, ಮಣ್ಣು ಪರೀಕ್ಷೆಗಾಗಿ ರೈತರಾದ ಮುಕೇಶ್ ಗೌಡ್ರು ಹಾಗೂ ಅಜಯ್ ರವರ ಹೊಲದಲ್ಲಿ ಮಣ್ಣು ಮಾದರಿ ಸಂಗ್ರಹಿಸಲಾಯಿತು ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವು ರೈತರು ತಾವು ಮಣ್ಣು ಪರೀಕ್ಷೆಯನ್ನು ಮಾಡಿಸುವುದಾಗಿ ತಿಳಿಪಡಿಸಿದರು.