ಆರೋಗ್ಯತಾಜಾ ಸುದ್ದಿದೇಶಶಿಕ್ಷಣ

ಸಹ್ಯಾದ್ರಿ ನಾರಾಯಣದಿಂದ ವಾಕಥಾನ್ ಮೂಲಕ ಪಾರ್ಶ್ವವಾಯು ಕುರಿತು ಜಾಗೃತಿ…

Share Below Link

ಶಿವಮೊಗ್ಗ : ನಗರದ ಪ್ರತಿಷ್ಠಿತ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ವಿಶ್ವ ಪಾರ್ಶ್ವವಾಯು ದಿನ ನಿಮಿತ್ತ ಹಮ್ಮಿಕೊಂಡಿದ್ದ ವಾಕಾಥಾನ್‌ಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿತು.
ನಗರದ ಸಹ್ಯಾದ್ರಿ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯಿಂದ ಪ್ರಾರಂಭವಾದ ವಾಕಾಥಾನ್, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಆಸ್ಪತ್ರೆ ಆವರಣದಲ್ಲಿ ಮುಕ್ತಾಯಗೊಂಡಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗದ ಹಿರಿಯ ನ್ಯೂರೋ ಫಿಜಿಷಿಯನ್ ಡಾ. ಶಿವರಾಮಕೃಷ್ಣ ಆರೂರು, ಭಾರತದಲ್ಲಿ ಪ್ರತಿ ನಾಲ್ಕು ಜನರಲ್ಲಿ ಒಬ್ಬರಿಗೆ ಸ್ಟ್ರೋಕ್ ಆಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಹಾಗೂ ಪಾರ್ಶ್ವ ವಾಯುವಿಗೆ ಜಡಜೀವನ ಶೈಲಿ, ಧೂಮಪಾನ, ಮದ್ಯಪಾನ, ಅತಿಯಾದ ಕೆಲಸದ ಒತ್ತಡ ಇವುಗಳು ಮುಖ್ಯ ಕಾರಣಗಳಾಗಿವೆ ಎಂದರು.


ಪ್ರತಿಯೊಬ್ಬರೂ ದುಶ್ಚಟ ಗಳಿಂದ ದೂರವಿದ್ದು, ಪ್ರತಿನಿತ್ಯ ವಾಕಿಂಗ್, ವ್ಯಾಯಾಮ, ಯೋಗ ಹಾಗೂ ಉತ್ತಮ ಆಹಾರ ಪದ್ಧತಿ ಗಳನ್ನು ರೂಡಿಸಿಕೊಂಡು ಸಕ್ರಿಯ ಜೀವನ ಶೈಲಿಯನ್ನು ಅಳವಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಇಂದಿಗೂ ಸಹ ಪಾಶ್ವ ವಾಯುವಿನ ಬಗ್ಗೆ ಮೂಢನಂಬಿಕೆ ಗಳಿದ್ದು ಸಾರ್ವಜನಿಕರು ಅಂತಹ ಮೂಢನಂಬಿಕೆಗಳಿಂದ ಹೆಚ್ಚು ತೊಂದರೆಗೆ ಒಳಗಾಗದೆ ಸೂಕ್ತ ಚಿಕಿತ್ಸೆಯನ್ನು ಸೂಕ್ತ ಸಮಯದಲ್ಲಿ ಪಡೆಯುವುದು ಅವಶ್ಯಕವಾಗಿದೆ, ಹಾಗೂ ೪೦ ವಯಸ್ಸಿನ ನಂತರ ಕನಿಷ್ಠ ವರ್ಷಕ್ಕೆ ಒಂದು ಬಾರಿ ಯಾದರೂ ಆರೋಗ್ಯ ತಪಾಸಣೆ ಮಾಡಿಸುವುದರ ಮುಖಾಂತರ ಉತ್ತಮ ಆರೋಗ್ಯದ ಕಡೆ ಗಮನಹರಿಸಬೇಕೆಂದು ತಿಳಿಸಿದರು.
ಪಾರ್ಶ್ವವಾಯುವಿನ ಲಕ್ಷಣ ಗಳಾದ ಸಮತೋಲನ ಕಳೆದು ಕೊಳ್ಳುವುದು, ದೃಷ್ಟಿ ದೋಷ ವಾಗುವುದು, ಮುಖದ ಒಂದು ಭಾಗ ಜೋತು ಬೀಳುವುದು, ದೇಹದ ಒಂದು ಭಾಗದ ಕೈಕಾಲುಗಳು ದುರ್ಬಲ ವಾಗುವುದು, ಮಾತಿನಲ್ಲಿ ತೊದಲುವಿಕೆ ಇಂತಹ ಲಕ್ಷಣಗಳು ಕಂಡುಬಂದಲ್ಲಿ ತ್ವರಿತವಾಗಿ ವೈದ್ಯ ರನ್ನು ಸಂಪರ್ಕಿಸುವುದು ಸೂಕ್ತ ಎಂದು ಸಲಹೆ ನೀಡಿದರು.


ನಾರಾಯಣ ಆಸ್ಪತ್ರೆಯ ನ್ಯೂರೋಲಜಿ ವಿಭಾಗದ ತಜ್ಞ ವೈದ್ಯರಾದ ಡಾ| ರೂಪ ಕೆಜಿ ಅವರು ಮಾತನಾಡಿ ಉತ್ತಮ ಹವ್ಯಾಸ ಗಳನ್ನು ರೂಪಿಸಿಕೊಳ್ಳುವುದರ ಮೂಲಕ ಪ್ರತಿಯೊಬ್ಬರು ಸಕ್ರಿಯ ಹಾಗೂ ಸದೃಢ ಜೀವನ ಶೈಲಿಯನ್ನು ರೂಡಿಸಿಕೊಳ್ಳಬೇಕು, ಸಾರ್ವಜನಿಕ ರಲ್ಲಿ ಹೃದ್ರೋಗದ, ಪಾರ್ಶ್ವವಾಯು, ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳು ಸರ್ವೇಸಾಮಾನ್ಯವಾಗುತ್ತಿದ್ದು ತುಂಬಾ ಬೇಸರ ಸಂಗತಿಯಾಗಿದೆ ಇದರಿಂದ ಹೊರಗೆ ಬರಲು ಪ್ರತಿಯೊಬ್ಬರೂ ಉತ್ತಮ ಆರೋಗ್ಯದ ಕಡೆ ಗಮನ ಕೊಡಬೇಕು ಎಂದು ಸಲಹೆ ನೀಡಿದರು.
ಪಾಶ್ವವಾಯುವಿನ ಲಕ್ಷಣಗಳು ಕಾಣಿಸಿದ ತಕ್ಷಣ ರೋಗಿಯನ್ನು ೪ ಗಂಟೆಯ ಒಳಗೆ ಸ್ಟ್ರೋಕ್ ರೆಡಿ ಹಾಸ್ಪಿಟಲ್‌ಗೆ ಚಿಕಿತ್ಸೆಗಾಗಿ ಕರೆದು ಕೊಂಡು ಬಂದಲ್ಲಿ ರೋಗಿಯನ್ನು ಸಂಪೂರ್ಣ ಗುಣಮುಖರನ್ನಾಗಿ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ವರ್ಗೀಸ್ ಪಿ ಜಾನ್, ಎ ವಿಭಾಗದ ವೈದ್ಯರು ಹಾಗೂ ಮುಖ್ಯಸ್ಥರುಗಳು, ಸಿಬ್ಬಂದಿಗಳು, ಮಾರ್ಕೆಟಿಂಗ್ ವಿಭಾಗದ ಶೈಲೇಶ್ ಹಾಗೂ ನಗರದ ಮೈತ್ರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕರು ಹಾಗೂ ನಗರದ ಸಾರ್ವಜನಿಕರು ಭಾಗವಹಿಸಿದ್ದರು.