ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಬ್ಯಾಂಕ್ ವ್ಯವಹಾರ ಕುರಿತು ಜಾಗೃತಿ ಅಗತ್ಯ…

Share Below Link

ಹೊನ್ನಾಳಿ: ಹಣಕಾಸು ಎಲ್ಲರಿಗೂ ಅತೀ ಅವಶ್ಯಕವಾಗಿದ್ದು ಅದನ್ನು ಸರಿಯಾಗಿ ಬಳಸುವುದು ಪ್ರತಿಯೊಬ್ಬರಿಗೂ ಅತೀ ಅವಶ್ಯ ವಾಗಿದೆ ಎಂದು ಶಾಲೆಯ ಮುಖ್ಯೋಪಾದ್ಯಾಯ ಕೆ ಹೆಚ್ ಮಂಜಾನಾಯ್ಕ ಹೇಳಿದರು.
ನಗರದ ಶ್ರೀ ಹಳದಮ್ಮದೇವಿ ಬಾಲಕಿಯರ ಪ್ರೌಢಶಾಲೆಯಲ್ಲಿ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಏರ್ಪಡಿಸಿದ್ದ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಂಕ್ ವ್ಯವಹಾರದ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾಸ್ತಾವಿಕ ಮಾತನಾಡಿದ ಬ್ಯಾಂಕಿನ ಸಿಬ್ಬಂದಿ ಈಶ್ವರಯ್ಯ ಬೆಳದರಿ ಮಠ್ ಅವರು, ಆಧಾರ್ ಕಾರ್ಡ್, ಪಾನ್ ಕಾರ್ಡ್, ನಿಮ್ಮ ಮೊಬೈಲ್ ಓ ಟಿ ಫಿ ಇವುಗಳನ್ನು ಯಾರಿಗೂ ಹಂಚಿಕೊಳ್ಳಬಾರದು ದೇಶದ ಯಾವುದೇ ಬ್ಯಾಂಕ್ ನಿಮ್ಮ ಯಾವುದೇ ದಾಖಲೆಯನ್ನು ಕೇಳುವುದಿಲ್ಲ ಮುಂದಿನ ದಿನಗಳಲ್ಲಿ ನಿಮ್ಮ ಎ ಹಣದ ವ್ಯವಹಾರಗಳು ನಿಮ್ಮ ಕೈಯಿಂದಲೇ ನಡೆಯುತ್ತಿರು ವುದರಿಂದ ಮೋಸ ಹೋಗಿ ಹಣವನ್ನು ಕಳೆದುಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರೆಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಎಂಪಿಎಂ ಷಣ್ಮುಖಯ್ಯ, ಐಡಿಎಫ್‌ಸಿ ಬ್ಯಾಂಕ್ ಸಿಬ್ಬ್ಂದಿಗಳಾದ ಅಕ್ಬರ್, ಮಂಜುನಾಥ, ನಾಗರಾಜ್ ಕೆ ಮತ್ತು ನಾಗರಾಜ್ ಶಾಲೆಯ ಹತ್ತನೆಯ ತರಗತಿ ವಿದ್ಯಾರ್ಥಿ ನಿಯರು ಇದ್ದರು. ಕೊನೆಯಲ್ಲಿ ಭಾಗವ್ಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಬ್ಯಾಂಕಿನ ವತಿಯಿಂದ ಪ್ರಮಾಣ ಪ್ರಶಸ್ತಿ ಪತ್ರ ವಿತರಿಸಲಾಯಿತು.