ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

Share Below Link

ಶಿವಮೊಗ್ಗ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಶೋಭಿತ್ ಮತ್ತು ಅವರ ತಾಯಿ ನೇತ್ರಾವತಿ ಸುರೇಶ್ ಅವ ರನ್ನು ಜಿ ಗಂಗಾಮತ ನೌಕರರ ಸಂಘ ಸನ್ಮಾನಿಸಿ ಅಭಿನಂದಿಸಿದೆ.
ಶೋಭಿತ್ ಅವರು ಕಲ್ಲ ಹಳ್ಳಿಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಎಸ್‌ಎಸ್‌ಎಲ್‌ಸಿ ಯಲ್ಲಿ ೬೨೫ಕ್ಕೆ ೬೨೨ ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿzರೆ.
ಈತನ ಸಾಧನೆಗೆ ಜಿ ಗಂಗಾಮತ ಸಂಘವು ಬಾಪೂಜಿ ನಗರದಲ್ಲಿರುವ ಬೆಸ್ತರ ಸಂಘದಲ್ಲಿ ಸನ್ಮಾನಿಸಿತು.ಈ ಸಂದರ್ಭದಲ್ಲಿ ಮಾತನಾ ಡಿದ ಗಂಗಾಮತ ನೌಕರರ ಸಂಘ ದ ರಾಜ್ಯ ಪ್ರಧಾನ ಕಾರ್ಯದರ್ಶಿ ಎ. ಹಾಲೇಶಪ್ಪ ಮಾತನಾಡಿ, ನಮ್ಮ ಸಮಾಜದಲ್ಲಿ ಅನೇಕ ವಿದ್ಯಾರ್ಥಿ ಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದು ತ್ತಿರುವುದು ಅತ್ಯಂತ ಸ್ವಾಗತದ ವಿಷಯ. ಹಿಂದು ಳಿದ ವರ್ಗಗಳಿಗೆ ಶಿಕ್ಷಣವೇ ಅಡಿ ಗಲ್ಲು. ಪ್ರತಿಭೆಗ ಳನ್ನು ಗುರುತಿಸು ವುದರಿಂದ ಅವರಿಗೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಂತಾಗುತ್ತದೆ ಎಂದರು.
ನಿವೃತ್ತ ಶಿಕ್ಷಕ ಜಿ. ಕೆಂಚಪ್ಪ ಮಾತನಾಡಿ, ಶಿಕ್ಷಣ ಈಗ ಬದಲಾಗುತ್ತಿದೆ. ಅವಕಾಶಗಳು ಕೂಡ ಹೆಚ್ಚಾಗುತ್ತಿವೆ. ವಿದ್ಯಾರ್ಥಿ ಗಳು ಇದರ ಪ್ರಯೋಜನ ಪಡೆಯ ಬೇಕು. ಶೋಭಿತ್ ಮುಂದೆ ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಮಾಡಿ, ಸಮಾಜಕ್ಕೆ ಮತ್ತು ರಾಷ್ಟ್ರಕ್ಕೆ ಕೀರ್ತಿ ತರುವಂತಾಗಲಿ ಎಂದರು.
ಸೊರಬದ ಡಿಪ್ಲಮೊ ಕಾಲೇಜಿನ ಪ್ರಾಂಶುಪಾಲ ಹಾಗೂ ನೌಕರರ ಸಂಘದ ಜಿಧ್ಯಕ್ಷ ಹೆಚ್.ಎಸ್. ಚಂದ್ರಶೇಕರ್ ಮಾತನಾಡಿ, ಶಿಕ್ಷಣವೇ ರಾಷ್ಟ್ರದ ಶಕ್ತಿಯಾಗಿದೆ. ನಮ್ಮ ಸಮಾಜದ ಅನೇಕ ಮಕ್ಕಳು ಇತ್ತೀಚಿನ ವರ್ಷಗಳಲ್ಲಿ ಹೆಮ್ಮೆ ಪಡುವಂತಹ ಅಂಕ ಪಡೆಯುತ್ತಿzರೆ. ಅವರಿಗೆ ನಮ್ಮ ಸಂಘ ಎ ರೀತಿ ಪ್ರೋತ್ಸಾಹ ನೀಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಆನಂದ್, ಸಮಾಜದ ಪ್ರಮುಖರಾದ ರಂಗ ನಾಥ್, ಜಿ. ನಾಗಪ್ಪ, ನೀಲಪ್ಪ, ಹನುಮೇಶ್ ಇದ್ದರು.