ಆ.30: ಹರಿಹರ ಆರೋಗ್ಯ ಮಾತೆಯ ಮಹೋತ್ಸವ ನಿಮಿತ್ತ ಧ್ವಜಾರೋಹಣ…
ಹರಿಹರ (ಹೊಸನಾವಿಕ): ಇಲ್ಲಿನ ಐತಿಹಾಸಿಕ ಪ್ರಸಿದ್ಧ ಹರಿಹರ ಆರೋಗ್ಯ ಮಾತೆಯ ಬಸಿಲಿಕದಲ್ಲಿ ಮಾತೆಯ ಮಹೋತ್ಸವ ನಿಮಿತ್ತ ಆ.೩೦ರ ನಾಳೆಯಿಂದ ಸೆ.೯ರವರೆಗೆ ವಿವಿಧ ಧಾರ್ಮಿಕ ಕಾರ್ಯಗಳು ಜರುಗಲಿವೆ.
ಆ.೩೦ರ ನಾಳೆ ಶನಿವಾರ ಸಂಜೆ ೫.೩೦ಕ್ಕೆ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಪರಮಪೂಜ್ಯ ಡಾ| ಫ್ರಾನ್ಸಿಸ್ ಸೆರಾವೋ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ.
ನಂತರ ಸೆ.೭ರವರೆಗೆ ಪ್ರತಿದಿನ ಸಂಜೆ ೫.೩೦ರಿಂದ ದೇವಮಾತೆಯ ಅಲಂಕೃತ ತೇರಿನ ಮೆರವಣಿಗೆ, ಪುಷ್ಪಾರ್ಚನೆ, ಬಲಿಪೂಜೆ, ಪರಮ ಪ್ರಸಾದದ ಆರಾಧನೆ, ರೋಗ ಸೌಖ್ಯಕ್ಕಾಗಿ ವಿಶೇಷ ಪ್ರಾರ್ಥನೆ ಮತ್ತು ಅನ್ನ ಪ್ರಸಾದ ವಿತರಣೆ ಇರುವುದು.
ಭಕ್ತರು ತಮ್ಮ ಹರಕೆ ಮತ್ತು ಕೋರಿಗಳನ್ನು ಧರ್ಮಕೇಂದ್ರದ ಗುರುಗಳು, ಹರಿಹರ ಆರೋಗ್ಯಮಾತೆಯ ಬಸಿಲಿಕ, ಅಂಚೆ ಪೆಟ್ಟೆಗೆ ಸಂಖ್ಯೆ ೧೯, ಹರಿಹರ ೫೭೭೬೦೧, ದಾವಣಗೆರೆ ಜಿಲ್ಲೆ, ಮೊ: ೭೩೪೯೨೪೬೭೫೧ ಅಥವಾ ಧರ್ಮ ಕೇಂದ್ರದ ಕಛೇರಿಯನ್ನು ಸಂಪರ್ಕಿಸಲು ಬಸಿಲಿಕದ ಪ್ರಧಾನ ಗುರುಗಳಾದ ರೆ|ಫಾ| ಜಾಜ್. ಕೆ.ಎ. ಅವರು ಕೋರಿದ್ದಾರೆ.


