ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಆ.೨೬: ವಿಶ್ವ ಮಹಿಳಾ ಸಮಾನತೆಯ ದಿನ…

Share Below Link

ಪ್ರತಿವರ್ಷ ಆ.೨೬ ರಂದು ವಿಶ್ವದಾದ್ಯಂತ ಮಹಿಳಾ ಸಮಾನತೆ ದಿನವನ್ನಾಗಿ ಆಚರಿಸಲಾಗುತ್ತಿದೆ. ೧೯೭೧ ರಲ್ಲಿ ಪ್ರತಿನಿಧಿ ಬೆ ಅಬ್ಜುಗ್ ಅವರ ಆeಯ ಮೇರೆಗೆ ಮತ್ತು ೧೯೭೩ ರಲ್ಲಿ ಅಂಗೀಕರಿಸಲ್ಪಟ್ಟ, ಯುನೈ ಟೆಡ್ ಸ್ಟೇಟ್ಸ್ ಕಾಂಗ್ರೆಸ್ ಆ.೨೬ ಅನ್ನು ಮಹಿಳಾ ಸಮಾನತೆ ದಿನ ಎಂದು ಗೊತ್ತು ಪಡಿಸಿತು. ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡುವ ಸಂವಿಧಾನದ ೧೯ ನೇ ತಿದ್ದುಪಡಿಯ ೧೯೨೦ರ ಪ್ರಮಾಣೀಕರ ಣದ ಸ್ಮರಣಾರ್ಥ ಈ ದಿನಾಂಕವನ್ನು ಆಯ್ಕೆ ಮಾಡಲಾಯಿತು. ಇದು ೧೮೪೮ ರಲ್ಲಿ ನ್ಯೂಯಾರ್ಕ್‌ನ ಸೆನೆಕಾ ಫಾಲ್ಸ್‌ನಲ್ಲಿ ನಡೆದ ವಿಶ್ವದ ಮೊದಲ ಮಹಿಳಾ ಹಕ್ಕು ಗಳ ಸಮಾವೇಶದಲ್ಲಿ ಔಪಚಾರಿಕವಾಗಿ ಪ್ರಾರoಭವಾದ ಮಹಿಳೆಯರ ಬೃಹತ್ ಶಾಂತಿಯುತ ನಾಗರಿಕ ಹಕ್ಕುಗಳ ಚಳುವಳಿಯ ಪರಾಕಾಷ್ಟೆಯಾಗಿತ್ತು.
ಲಿಂಗತಾರತಮ್ಯವಿಲ್ಲದೆ ಎಲ್ಲರಿಗೂ ಚುನಾವಣೆಯಲ್ಲಿ ಸಮಾನ ಅಧಿಕಾರ ನೀಡುವ ಅಮೇರಿಕದ ೧೯ನೇ ಕಾಯ್ದೆ ತಿದ್ದುಪಡಿಯ ದ್ಯೋತಕವಾಗಿ ಈ ದಿನಾ ಚರಣೆಯನ್ನು ಆಚರಿಸಲಾಗುತ್ತದೆ.


ಗರಿಕ ಸಮಾಜ ಸಂಘಟನೆಗಳಿಂದ ಸತತವಾಗಿ ೭೨ ವರ್ಷಗಳ ಕಾಲ ನಡೆದ ಹೋರಾಟದ ಫಲವಾಗಿ ೧೯೨೦ರಲ್ಲಿ ಅಮೆರಿಕದಲ್ಲಿ ಮಹಿಳೆಯರಿಗೆ ಮತ ದಾನದ ಹಕ್ಕು ದೊರಕಿತು.ಮಹಿಳೆಯರು ನೋಡಲು ಸುಂದರವಾಗಿರುತ್ತಾರಷ್ಟೇ, ಆದರೆ ಅವರು ಯಾವುದೇ ಗಂಭೀರ ಕೆಲಸಗಳನ್ನು ಮಾಡಲಾರರು ಎಂಬ ಧೋರಣೆ ಮೊದಲು ಅಮೆರಿಕದಲ್ಲಿ ಮನೆ ಮಾಡಿತ್ತು.ಕೊನೆಗೂ ಇಂಥ ದೊಂದು ತಾರತಮ್ಯವನ್ನು ಹೋಗಲಾಡಿಸಿ ಮಹಿಳೆಯರಿಗೂ ಪುರುಷರಷ್ಟೇ ಸಮಾನ ಹಕ್ಕುಗಳು ಸಿಗಲಾರಂಭಿಸಿದವು.
ಈ ಭೂಮಿಯ ಮೇಲೆ ಹುಟ್ಟುವ ಪ್ರತಿಯೊಂದು ಮಗು ತನ್ನ ಸಾಮರ್ಥ್ಯ ಹಾಗೂ ಪ್ರತಿಭೆಗಳಿಗೆ ತಕ್ಕಂತೆ ಮುಕ್ತವಾಗಿ ಜೀವನ ರೂಪಿಸಿಕೊಳ್ಳುವುದು ಆ ಮಗುವಿನ ಹಕ್ಕಾಗಿರುತ್ತದೆ.ಇದು ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರಿಗೂ ಅನ್ವಯವಾಗು ತ್ತದೆ. ಆದರೆ ಭಾರತದಲ್ಲಿ ಇಂದಿಗೂ ಲಿಂಗ ತಾರತಮ್ಯದ ಅನಿಷ್ಟ ಪದ್ದತಿ ಮುಂದು ವರೆದುಕೊಂಡು ಬಂದಿರುವುದು ವಿಷಾದನೀಯ. ಶತಮಾನಗಳಿಂದಲೂ ಕತ್ತಲ ಕೂಪದೊಳಗಿದ್ದ ಸ್ತ್ರೀಯರಿಗೆ ಸ್ವಾತಂತ್ರ್ಯವಿರಲಿಲ್ಲ. ನಾ ಸ್ತ್ರೀ ಸ್ವಾತಂತ್ರ್ಯಂ ಅಹರ್ತಿ ಎಂಬ ನಿಲುವಿಗೆ ಜೋತು ಬಿದ್ದ ಕಾಲಘಟ್ಟದಲ್ಲಿ, ೧೨ನೇ ಶತಮಾನದಲ್ಲಿ ಬಸವಣ್ಣನವರು ತಮ್ಮ ವಿಚಾರ ಕ್ರಾಂತಿ ಯಿಂದ ಸಮಾಜದ ಅಂಕು ಡೊಂಕು ಗಳನ್ನು ನೇರವಾಗಿ ಹೇಳಿzರೆ. ಮೊಟ್ಟ ಮೊದಲು ಸ್ತ್ರೀ ಸ್ವಾತಂತ್ರ್ಯ, ಸಮಾನತೆಯ ಬಗ್ಗೆ ಎತ್ತಿಹಿಡಿದವರು ಬಸವಣ್ಣನವರು. ತಮ್ಮ ಅನುಭವ ಮಂಟಪದಲ್ಲಿ ವಚನ ಗಾರ್ತಿಯರಿಗೆ ಅವಕಾಶ ಕಲ್ಪಿಸಿ ಸ್ತ್ರೀ ಸ್ವಾತಂತ್ರ್ಯ, ಸಮಾನತೆಯನ್ನು ಎತ್ತಿಹಿಡಿ ದರು.
ಪ್ರಸ್ತುತ ನಮ್ಮ ಭಾರತದಲ್ಲಿ ಮಹಿಳೆ ಯರು ಶೈಕ್ಷಣಿಕ, ಆರೋಗ್ಯ, ಸಾಮಾಜಿಕ, ಆರ್ಥಿಕ, ವಿeನ, ತಂತ್ರeನ, ಕ್ರೀಡೆ, ರಾಜಕೀಯ, ಸೇವೆ, ಬಾಹ್ಯಾಕಾಶ, ರಕ್ಷಣಾ, ಎ ಕ್ಷೇತ್ರಗಳಲ್ಲೂ ತಮ್ಮ ಹೆಜ್ಜೆ ಗುರುತನ್ನು ಮೂಡಿಸಿzರೆ . ಆದರೂ ಶೇ.೫೦ ರಷ್ಟು ಈ ಎ ಕ್ಷೇತ್ರಗಳಲ್ಲಿ ಸ್ವಾತಂತ್ರ್ಯ, ಸಮಾನತೆಯನ್ನು ಸಾಧಿಸಲಾಗಲಿಲ್ಲ. ಪೂಜನೀಯ ಸ್ಥಾನವನ್ನು ಮಹಿಳೆಯರಿಗೆ ಅನಾದಿ ಕಾಲದಿಂದಲೂ ನೀಡಿದ್ದರೂ, ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯಲಾಗುತ್ತಿಲ್ಲ.ಇಂದಿಗೂ ಹೆಣ್ಣು ಪುರುಷ ಪ್ರಧಾನ ವ್ಯವಸ್ಥೆಯಲ್ಲಿಯೇ ಸಾಗುತ್ತಿzಳೆ. ಹಿಂದಿನ ಕಾಲಘಟ್ಟ ಕ್ಕಿಂತಲೂ ಪ್ರಸ್ತುತ ಮಹಿಳೆಯರ ಸ್ಥಿತಿಗತಿಗಳು ಸುಧಾರಣೆಗೊಂಡಿವೆಯಾ ದರೂ, ಬಹಳಷ್ಟು ಮಹಿಳೆಯರು ಸ್ವಾತಂತ್ರ್ಯ, ಸಮಾನತೆಯ ಹಕ್ಕಿನಿಂದ ವಂಚಿತರಾಗಿzರೆ.
ಬಹುತೇಕ ಹಳ್ಳಿಗಳಿಂದ ಕೂಡಿರುವ ನಮ್ಮ ದೇಶದಲ್ಲಿ, ಹಳ್ಳಿಯಲ್ಲಿರುವ ಮಹಿಳೆಯರು ಸಮಾನತೆ , ಸ್ವಾತಂತ್ರ್ಯ ದಿಂದ ವಂಚಿತರಾಗಿzರೆ. ನಾಲ್ಕು ಗೋಡೆಗಳ ಮಧ್ಯೆ ತಮ್ಮ ಜೀವನ ಕಟ್ಟಿಕೊಂಡವರು ಇzರೆ. ತಮಗೆ ಪ್ರತಿಭೆ, ಸಾಮರ್ಥ್ಯ ಗಳಿದ್ದರೂ ಕುಟುಂಬಕ್ಕೋಸ್ಕರ ತ್ಯಾಗ ಮಾಡಿಕೊಂಡು ಜೀವನ ಸಾಗಿಸುತ್ತಿರು ವವರು ನಮ್ಮ ದೇಶದಲ್ಲಿ ಇzರೆ.
ಪ್ರತಿಯೊಬ್ಬರಿಗೂ ಮತದಾನದ ಹಕ್ಕಿದೆ, ಆದರೆ ಬಹುತೇಕ ಮಹಿಳೆಯರು ಇಂದಿ ಗೂ ಆ ಹಕ್ಕನ್ನು ಸ್ವತಂತ್ರವಾಗಿ ಬಳಸುತ್ತಿಲ್ಲ. ಇಲ್ಲಿ ಪತಿಯ ಅಥವಾ ತಂದೆಯ ಒಪ್ಪಿಗೆಯಂತೆ ಮತ ಚಲಾವಣೆಯಾಗು ತ್ತದೆ. ನಮ್ಮ ದೇಶದಲ್ಲಿ ಶೇ.೩೩ ರಷ್ಟು ಮಹಿಳಾ ಮೀಸಲಾತಿ ಕಲ್ಪಿಸಿದ್ದರೂ, ಅದನ್ನು ಪೂರ್ಣ ಪ್ರಮಾಣದಲ್ಲಿ ಸಾಧಿಸಲಾಗುತ್ತಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ಗೆದ್ದು ಸ್ಥಾನ ಪಡೆದಿದ್ದರೂ ಇಲ್ಲಿ ಬೆನ್ನ ಹಿಂದೆ ಪುರುಷರ ಹಸ್ತಕ್ಷೇಪ, ಅಧಿಕಾರ ಚಲಾವಣೆ ಇz ಇರುತ್ತದೆ. ಉದ್ಯೋಗಸ್ಥ ಮಹಿಳೆಯರು ಹಲವು ಒತ್ತಡಗಳಲ್ಲಿ ಕಾರ್ಯ ನಿರ್ವಹಿ ಸುತ್ತಿzರೆ. ನಮ್ಮ ದೇಶದಲ್ಲಿ ಮಹಿಳಾ ಸಮಾನತೆಯನ್ನು ಸಾಧಿಸಬೇಕಾದರೆ ಹೆಣ್ಣು ಮಕ್ಕಳು ವಿದ್ಯಾವಂತರಾಗಬೇಕು, ಆರ್ಥಿಕ ಸ್ವಾವಲಂಬನೆ ಹೊಂದಬೇಕು, ಸ್ವತಂತ್ರ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹೊಂದಬೇಕು ಆಗ ಮಾತ್ರ ಮಹಿಳಾ ಸಮಾನತೆಯನ್ನು ಸಾಧಿಸಲು ಸಾಧ್ಯ.
ಇಂದು ಉದ್ಯೋಗಸ್ಥ ಮಹಿಳೆಯರಾಗಿದ್ದರೂ ಹಲವು ನಿರ್ಬಂಧಕ್ಕೊಳ್ಳ ಪಡುತ್ತಿzರೆ. ಮಹಿಳೆಯರನ್ನು ಎರಡನೇ ದರ್ಜೆಯ ನಾಗರೀಕಳಾಗಿ ನೋಡುವ ದೃಷ್ಟಿಕೋನ ಬದಲಾಗಬೇಕಿದೆ. ಆದರಿಂದ ಹೆಣ್ಣುಮಕ್ಕಳು ವಿದ್ಯಾವಂತರಾಗಿ, ಆರ್ಥಿಕ ಸಬಲತೆ ಸಾಧಿಸಬೇಕು. ಹಲವು ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿ ಸುತ್ತಾ ಮುನ್ನಡೆಯಬೇಕಿದೆ. ಆಗಲಾದರೂ ಮಹಿಳಾ ಸಮಾನತೆಯನ್ನು ಸಾಧಿಸಬಹುದು. ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬಹುದು.
ಸಾಧಿಸಿದವರು ಬೆರಳೆಣಿಕೆಯ ಮಹಿಳೆ ಯರಿzರಷ್ಟೇ… ಆದರೆ ಸಮಾನತೆ ಸ್ವಾತಂತ್ರ್ಯ ದಿಂದ ವಂಚಿತರು ಅನೇಕ ಹೆಣ್ಣುಮಕ್ಕಳಿzರೆ. ಸಮಾನತೆಯ ವಂಚಿತ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿ, ಅವರು ಸ್ವಾವಲಂಬನೆ ಬದುಕನ್ನು ಕಟ್ಟಿಕೊಳ್ಳಲು ಸಹಕರಿ ಸೋಣ. ನಮಗೆ ಸಿಕ್ಕ ಸ್ವಾತಂತ್ರ್ಯ ಸ್ವೇಚ್ಚಾಚಾರವಾಗಿ ಬಳಸಿಕೊಳ್ಳದೆ, ಉತ್ತಮ ಸಮಾಜದ ನಿರ್ಮಾಣ ದಲ್ಲಿ ಕೈಜೋಡಿಸೋಣ.ನಮ್ಮ ನಾಗರಿಕ ಸಮಾಜದ ಪ್ರತಿಯೊ ಬ್ಬರೂ ಹೆಣ್ಣನ್ನು ಮಾತೃ, ಸಹೋದರಿ ಯ ಸ್ಥಾನದಲ್ಲಿ ಗೌರವಿಸುವಂತಾಗಲಿ. ಪುರುಷರಂತೆ ಮಹಿಳೆಯ ರಿಗೂ ಸರ್ವಸಮಾನತೆ ದೊರೆತಾಗ ಮಾತ್ರ ಒಂದು ಅದ್ಭುತ, ಸದೃಢ ಸಮಾಜ, ದೇಶ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ.
ಅನಿತಸೂರ್ಯ, ಶಿಕ್ಷಕಿ. ಶಿವಮೊಗ್ಗ