ಜಿಲ್ಲಾ ಸುದ್ದಿತಾಜಾ ಸುದ್ದಿ

ಆ.17:ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆ ವಿರುದ್ಧ ಬೃಹತ್ ಜನಾಗ್ರಹ ಸಭೆ..

Share Below Link

ಶಿವಮೊಗ್ಗ : ಶಿವಮೊಗ್ಗ ಮತ್ತು ಉತ್ತರ ಕನ್ನಡದ ಶರಾವತಿ ಪಂಪ್ಡ್ ಸ್ಟೋರೇಜ್ ಹೋರಾಟ ಸಮಿತಿ ಹಾಗೂ ಪರ್ಯಾವರಣ ಟ್ರಸ್ಟ್ ಶಿವಮೊಗ್ಗ, ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ನವದೆಹಲಿ ಮತ್ತು ಪರಿಸರಾಸಕ್ತರು ಇವರ ಸಂಯು ಕ್ತಾಶ್ರಯದಲ್ಲಿ ಆ.೧೭ರಂದು ಬೆಳಿಗ್ಗೆ ೯.೩೦ರಿಂದ ಸಂಜೆ ೪.೩೦ರ ವರೆಗೆ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋ ಜನೆ ವಿರುದ್ಧ ಬೃಹತ್ ಜನಾ ಗ್ರಹ ಸಭೆಯನ್ನು ಆಯೋಜಿ ಸಲಾಗಿದೆ ಎಂದು ಪರ್ಯಾವರಣ ಟ್ರಸ್ಟ್‌ನ ಅಧ್ಯಕ್ಷ ಪ್ರೋ ಕುಮಾರ ಸ್ವಾಮಿ ಇಂದು ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.
ಬೆಳಿಗ್ಗೆ ೯.೩೦ ರಿಂದ ಡಾ|| ಮಾಧವ ಗಾಡ್ಗೀಳ್‌ರವರ ಆತ್ಮಕತೆ ಯ ಕನ್ನಡ ಅವತರಣಿಕೆ ಹಾಗೂ ಪಶ್ಚಿಮಘಟ್ಟ ಅಧ್ಯಯನದ ವರದಿ ಗಳ ಸಂಕ್ಷಿಪ್ತ ಮಾಹಿತಿ ಪುಸ್ತಕ ಬಿಡು ಗಡೆಯಾಗಲಿದ್ದು, ಹೊಸನಗರ ತಾಲ್ಲೂಕಿನ ಮೂಲೆಗz ಮಠದ ಶ್ರೀ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಗಂಗಾವತಿ ಆನೆಗುಂದಿ ಆಸ್ಥಾನದ ರಾಜಶ್ರೀ ಲಲಿತಾರಾಣಿ ಸಾನಿಧ್ಯವಹಿ ಸಲಿದ್ದು, ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಅಧ್ಯಕ್ಷ ಬಸವ ರಾಜ್ ಪಾಟೀಲ್ ವೀರಾಪುರ ಅಧ್ಯಕ್ಷತೆ ವಹಿಸಲಿzರೆ ಎಂದರು.


ಧಾರಾವಾಡದ ಶಾರದಾಗೋ ಪಾಲ ಪುಸ್ತಕ ಪರಿಚಯಿಸಲಿದ್ದು, ಮುಖ್ಯ ಅತಿಥಿಯಾಗಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ದಿನಕರ ಕೆ. ಶೆಟ್ಟಿ, ಶಾರದಾ ಪೂರ್‍ಯಾನಾಯ್ಕ, ಪ್ರಕಾಶ್ ಕೋಳಿವಾಡ, ಗವಿ ಯಪ್ಪ, ಡಿ.ಎಸ್. ಅರುಣ್, ಡಾ.ಧನಂಜಯ ಸರ್ಜಿ, ಬಲ್ಕೀಶ್ ಬಾನು, ಮಾಜಿ ಶಾಸಕರಾದ ಎ.ಟಿ. ರಾಮಸ್ವಾಮಿ, ಮಹಿಮಾ ಪಟೇಲ್, ನಂದಿಹಳ್ಳಿ ಹಾಲಪ್ಪ, ಅಣ್ಣಾ ವಿನಯಚಂದ್ರ ಇನ್ನಿತರರು ಭಾಗವಹಿಸಲಿzರೆ ಎಂದರು.
೧೧ ಗಂಟೆಗೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡಲು ಆಗ್ರಹಿಸಿ ಶರಾವತಿ ಜನಾಗ್ರಹ ಸಭೆ ನಡೆಯಲಿದ್ದು, ಸಂಪನ್ಮೂಲ ವ್ಯಕ್ತಿಗ ಳಾಗಿ ಖ್ಯಾತ ಪರಿಸರ ಹೋರಾಟ ಗಾರ ಅಖಿಲೇಶ್ ಚಿಪ್ಳಿ, ಪರಿಸರ ತಜ್ಞ ಶಂಕರ ಶರ್ಮಾ, ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಆಗಮಿಸಲಿzರೆ ಎಂದರು.
ಮಧ್ಯಾಹ್ನ ೧೨ ರಿಂದ ಪರಿಸರ ಸಮಸ್ಯೆಗಳ ಕುರಿತು ಮುಕ್ತ ಸಂವಾದ ನಡೆಯಲಿದೆ. ೨ರಿಂದ ಪಶ್ಚಿಮಘಟ್ಟ ಅಧ್ಯಯನ ವರದಿಗಳ ಬಗ್ಗೆ ಚರ್ಚೆ ಯು ಮಾಜಿ ಶಾಸಕ ಅಣ್ಣಾ ವಿನಯ ಚಂದ್ರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ವಿವಿಧ ಜಿಗಳಿಂದ ಮುಖ್ಯ ಅತಿಥಿ ಗಳಾಗಿ ಡಾ.ಸಂಜೀವ್ ಕುಲಕರ್ಣಿ ನೈಲಾ ಕೊಹಿಲೊ, ಆಂಜನೇಯ ರೆಡ್ಡಿ, ರಾಘವೇಂದ್ರ ತೂನ, ದಿನೇಶ್ ಹೊಳ್ಳ, ನಾಗರಾಜ್ ಗುತ್ತೇದಾರ್, ಮಲ್ಲಿಕಾರ್ಜುನ ಮೆಟ್ರಿ ಇನ್ನಿತರರು ಆಗಮಿಸಲಿದ್ದು, ಸಂಜೆ ೪ ರಿಂದ ಸಮಾರೋಪ ಸಮಾರಂಭ ಹಾಗೂ ನಿರ್ಣಯಗಳ ಮಂಡನೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಂ. ಶಂಕರ್, ಗಿರೀಶ್ ಪಟೇಲ್, ಕಾಂತೇಶ್ ಕದರಮಂಡಲಗಿ, ಡಾ. ಎಲ್.ಕೆ. ಶ್ರೀಪತಿ, ಬಾಲಕೃಷ್ಣ ನಾಯ್ಡು, ಎಸ್.ಬಿ. ಅಶೋಕ್ ಕುಮಾರ್, ಲೋಕೇಶಪ್ಪ ಇದ್ದರು.