ಜಿಲ್ಲಾ ಸುದ್ದಿತಾಜಾ ಸುದ್ದಿ

ಆ.14: ನೂತನ ದೇವಸ್ಥಾನ ಪ್ರವೇಶ…

Share Below Link

ಶಿವಮೊಗ್ಗ: ನಗರದ ಹೊರವಲಯದ ಗೋಂಧಿ ಚಟ್ನಹಳ್ಳಿನಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನ ಪ್ರವೇಶ ಹಾಗೂ ವಿಗ್ರಹ ಪ್ರತಿಷ್ಠಾಪನೆ ಕಳಸರೋಹಣ ಅಷ್ಟ ಬಂಧನ ಮಹಾ ಕುಂಭ ಅಭಿಷೇಕ ಮಹೋತ್ಸವ ನಿಮಿತ್ತ ಆ.೧೩ರ ನಾಳೆ ಬುಧವಾರ ಬೆಳಗ್ಗೆ ಪೂಜೆ ಆರಂಭಗೊಂಡು ಆ.೧೪ ಗುರುವಾರ ಬೆಳಿಗ್ಗೆ ೯ ರಿಂದ ೧೦.೩೦ ರವರೆಗೆ ನಡೆಯುವ ನೂತನ ದೇವಸ್ಥಾನ ಪ್ರವೇಶ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆ ಅಷ್ಟ ಬಂಧನ ಮತ್ತು ಮಾಹಾ ಕುಂಭಾಭಿಷೇಕ ಕಾರ್ಯಕ್ರಮ ನಡೆಯಲಿದೆ.ಅಂದು ಮಧ್ಯಾಹ್ನ ೧೨ ಗಂಟೆಗೆ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಗುತ್ತದೆ.
ಪೂಜ್ಯ ಬಸವ ಮರಳುಸಿದ್ದ ಸ್ವಾಮಿಯವರು ಕುಂಭ ಅಭಿಷೇP ನೆರವೇರಿಸಲಿzರೆ. ಈ ಪೂಜ ಕಾರ್ಯಕ್ರಮದಲ್ಲಿ ದೇವಳ ಸಮಿತಿ ಅಧ್ಯಕ್ಷ ಎಂ, ಪ್ರಕಾಶ್ (ಗಿಲ್ಲಿ), ಸಂಸದ ಬಿ.ವೈ, ರಾಘವೇಂದ್ರ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶ್ರೀಮತಿ ಶಾರದಾಪೂರ್‍ಯಾನಾಯ್ಕ, ನಗರ ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್, ಅರುಣ್, ಧನಂಜಯ್ ಸರ್ಜಿ, ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ, ಮಾಜಿ ಶಾಸಕ ಅಶೋಕ್ ನಾಯ್ಕ, ಜಿಪಂ ಮಾಜಿ ಸದಸ್ಯ ಕೆ.ಈ. ಕಾಂತೇಶ್, ಪ್ರಮುಖರಾದ ನಾಗರತ್ನ ಎಚ್. ಪ್ರೇಮ ಭಾಗವಹಿಸಲಿzರೆ.
ಭಕ್ತರು ಹಾಗೂ ಸಾರ್ವಜನಿರು ಈ ಎ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತನು, ಮನ ಧನ ಸಹಾಯ ನೀಡಿ ತೀರ್ಥ ಪ್ರಸಾದ ಸ್ವೀಕರಿಸುವ ಮೂಲಕ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವರ ಕೃಪೆಗೆ ಪಾತ್ರರಾಗಲು ದೇವಳ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.