ಜಿಲ್ಲಾ ಸುದ್ದಿತಾಜಾ ಸುದ್ದಿ

ಆ.೧೧: ಟಿ.ಸೀನಪ್ಪಶೆಟ್ಟಿ ವೃತ್ತ ನಾಮಫಲಕ ಅನಾವರಣ

Share Below Link

ಶಿವಮೊಗ್ಗ: ಶಿವಮೊಗ್ಗದ ಹೃದಯ ಭಾಗದಲ್ಲಿರುವ ಗೋಪಿ ವೃತ್ತ ಎಂದೇ ಕರೆಯಲ್ಪಡುವ ವೃತ್ತಕ್ಕೆ ಟಿ.ಸೀನಪ್ಪ ಶೆಟ್ಟಿ ವೃತ್ತ ಎಂಬ ನಾಮಫಲಕ ಅನಾವರಣಗೊಳಿ ಸುವ ಕಾರ್ಯಕ್ರಮ ಆ.೧೧ರ ನಾಳೆ ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ ಎಂದು ಟಿ. ಸೀನಪ್ಪ ಶೆಟ್ಟಿ ಕುಟುಂಬದ ಸದಸ್ಯರು ಇಂದು ಹೋಟೆಲ್ ಮಥುರಾ ಪ್ಯಾರಾಡೈಸ್‌ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದರು.
ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ ಅವರು ಮಾತನಾಡಿ, ೧೯೫೮ ರಲ್ಲಿಯೇ ಅಂದಿನ ಪುರಸಭೆ ಅನುಮತಿಯೊಂದಿಗೆ ಟಿ. ಸೀನಪ್ಪ ಶೆಟ್ಟಿ ವೃತ್ತವನ್ನು ಸ್ಥಾಪಿಸಲಾಗಿತ್ತು. ಆಗಿನ ಕಾಲದಲ್ಲಿ ಟಿ. ಸೀನಪ್ಪ ಶೆಟ್ಟರು ಸುಮಾರು ೨೫ ಸಾವಿರಕ್ಕೂ ಹೆಚ್ಚು ಖರ್ಚು ಮಾಡಿ ಈ ವೃತ್ತ ನಿರ್ಮಿಸಿದ್ದರು. ಸುತ್ತಲೂ ಕಲ್ಲನ್ನು ವೃತ್ತಾಕಾರದಲ್ಲಿ ಬೆಳೆಸಿ ಆಕರ್ಷಕ ವಾಗಿ ನಿರ್ಮಿಸಲಾಗಿತ್ತು. ೧೯೫೯ ರಲ್ಲಿ ಮತ್ತೆ ಈ ವೃತ್ತದಲ್ಲಿ ಮೊದಲ ಬಾರಿಗೆ ಸುಮಾರು ೨೦ಸಾವಿರ ರೂ. ವೆಚ್ಚದಲ್ಲಿ ನೀರಿನ ಆಕರ್ಷಕ ಕಾರಂಜಿ ನಿರ್ಮಿಸಲಾಗಿತ್ತು. ಈ ವೃತ್ತದಲ್ಲಿ ಹಾದುಹೋಗುವುದೇ ಒಂದು ರೋಮಾಂಚಕಾರಿ ಅನುಭವವಾಗಿತ್ತು ಎಂದರು.
ಆದರೆ ಕಾಲಕ್ರಮೇಣ ಸಂಚಾರ ದಟ್ಟಣೆ ಹೆಚ್ಚಾದಾಗ ಸಿಗ್ನಲ್ ಲೈಟ್ ಅಳವಡಿಕೆಗೆ ವೃತ್ತವನ್ನು ಕೆಡವಲಾ ಯಿತು. ಆಗಲೂ ಸಹ ಶ್ರೀನಿಧಿ ಕುಟುಂಬ ಲೈಟ್ ಅಳವಡಿಕೆಗೆ ೧೫ ಸಾವಿರ ರೂ. ವಂತಿಗೆ ನೀಡಿತ್ತು. ನಂತರ ಇಲ್ಲಿದ್ದ ಕಾರಂಜಿಯನ್ನು ಆಗಿನ ನಗರಸಭೆ ಆವರಣಕ್ಕೆ ಸ್ಥಳಾಂತರಿಸಲಾಗಿತ್ತು. ಪ್ರಸ್ತುತ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಯ ಹಿನ್ನೆಲೆಯಲ್ಲಿ ಕಾರಂಜಿ ಕೂಡ ತೆರವಾಗಿದೆ ಎಂದರು.
ಇಂತಹ ಇತಿಹಾಸ ಇರುವ ಈ ವೃತ್ತಕ್ಕೆ ಈ ಹಿಂದೆ ಇಲ್ಲಿ ಗೋಪಿ ಹೋಟೆಲ್ ಇದ್ದ ಕಾರಣ ಗೋಪಿ ವೃತ್ತ ಎಂದೇ ಜನರು ಗುರುತಿಸಿದರು. ಅದು ಹಾಗೆಯೇ ಮುಂದುವರೆಯಿತು. ಅಂದಿನ ಪುರಸಭೆಯಿಂದ ಹಿಡಿದು ಇಂದಿನ ಮಹಾನಗರ ಪಾಲಿಕೆವರೆಗೆ ಸೀನಪ್ಪ ಶೆಟ್ಟಿ ವೃತ್ತ ಎಂದೇ ಅಧಿಕೃತವಾಗಿ ನಮೂದಾಗಿದ್ದರೂ ಕೂಡ ಸಾರ್ವಜನಿಕೆ ಬಳಕೆಯಲ್ಲಿ ಗೋಪಿವೃತ್ತ ಎಂದು ಗುರುತಿಸಿರು ವುದು ವಿಪರ್ಯಾಸದ ಸಂಗತಿ ಯಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ವೃತ್ತ ಟಿ. ಸೀನಪ್ಪ ಶೆಟ್ಟಿ ಎಂದೇ ಕರೆಯಲ್ಪಡಬೇಕು ಎಂದರು.
ಆದ್ದರಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ಕಲ್ಲು ಕೆತ್ತನೆ ಮಾಡಿಸಿ ಈ ವೃತ್ತಕ್ಕೆ ಟಿ.ಸೀನಪ್ಪ ಶೆಟ್ಟಿ ವೃತ್ತ ಎಂದು ನಾಮಫಲಕವನ್ನು ಅಳವಡಿಸಲಾಗಿದೆ. ಇದರ ಉದ್ಘಾಟನೆಯನ್ನು ನಾಳೆ ಬೆಳಿಗ್ಗೆ ೧೧ ಗಂಟೆಗೆ ಶಾಸಕ ಎಸ್. ಎನ್. ಚನ್ನಬಸಪ್ಪ, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡರು ನೆರವೇರಿಸಲಿzರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಟಿ. ಸೀನಪ್ಪ ಶೆಟ್ಟಿ ಕುಟುಂಬದ ಪ್ರಮುಖ ರಾದ ವೆಂಕಟೇಶ ಮೂರ್ತಿ, ಟಿ.ಎಸ್. ಸಂದೀಪ್, ವಿಶ್ವನಾಥ್, ಗುರುಚರಣ್, ರಘು ನಂದನ್, ಚೇತನ್ ಮುಂತಾದವರಿದ್ದರು.