ಸಿಜೆಐ ಮೇಲೆ ಹಲ್ಲೆ ಯತ್ನ: ಸಿಡಿದೆದ್ದ ಕಾನೂನು ಕಾಲೇಜ್ ಎನ್‌ಎಸ್‌ಯುಐ ಘಟಕದಿಂದ ಬೃಹತ್ ಪ್ರತಿಭಟನೆ
ಶಿವಮೊಗ್ಗ : ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಮುಂದಾಗುವ ಮೂಲಕ ಭಾರತದ ನ್ಯಾಯಾಂಗ ಇತಿಹಾಸದಲ್ಲಿಯೇ ನಡೆಯದಂತಹ ಹೇಯ ಕೃತ್ಯ ಎಸಗಿದ ಹಿರಿಯ ವಕೀಲ ರಾಕೇಶ್ ಕಿಶೋರ್ ಅವರನ್ನು ತಕ್ಷಣ ಬಂಧಿಸಿ ಶಿಕ್ಷೆಗೊಳಪಡಿಸಲು ಒತ್ತಾಯಿಸಿ ಶಿವಮೊಗ್ಗದ ಸಿ.ಬಿ.ಆರ್. ರಾಷ್ಟ್ರೀಯ ಕಾನೂನು ಕಾಲೇಜಿನ ಎನ್.ಎಸ್.ಯು.ಐ. ಘಟಕದಿಂದ ಪ್ರತಿಭಟನೆ ನಡೆಸಿ ಜಿಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ನ್ಯಾಯಾಂಗವು ಭಾರತ ಸಂವಿಧಾನದ ಪ್ರಮುಖ ಅಂಗ ವಾಗಿದೆ. ನಮ್ಮ ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿಯುತ ಅಂಗವಾದ ನ್ಯಾಯಾಂಗದ ಮೇಲೆ ವಕೀಲರೊಬ್ಬರು ಅ. ೬ರಂದು ಹ ನಡೆಸಲು ಮುಂದಾಗುವ ಮೂಲಕ ಸಂವಿಧಾನಕ್ಕೆ ಅಪಚಾರವೆಸಗುವ ಕೃತ್ಯವೆಸಗಿದ್ದು ಖಂಡನೀಯ ಎಂದರು.
ಈ ಪ್ರತಿಭಟನೆ ಉzಶಿಸಿ ಮಾತನಾಡಿದ ಪಾಲಾಕ್ಷಿ ಅವರು, ಅಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿಯವರು ಪಿಐಎಲ್ ಪ್ರಕರಣವೊಂದರ ವಿಚಾರಣೆ ನಡೆಸುವ ಸಂದರ್ಭದಲ್ಲಿ ಹಿರಿಯ ವಕೀಲರೆಂದು ಹೇಳಿಕೊಳ್ಳುತ್ತಿರುವ ರಾಕೇಶ್ ಕಿಶೋರ್ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯಲು ಮುಂದಾಗಿದ್ದು, ಇದು ನಮ್ಮ ಅಖಂಡ ಭಾರತದ ಸಂವಿಧಾನಕ್ಕೆ ಅಪಮಾನ ಮಾಡಿದಂತಾಗಿದೆ ಎಂದರು.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳೆಂದರೆ ಸಂವಿಧಾನದ ರಕ್ಷಕರು. ಅವರ ಮೇಲಿನ ಈ ರೀತಿಯ ಹೇಯಕೃತ್ಯವನ್ನು ನಾವು ಸಹಿಸುವುದಿಲ್ಲ. ಇದು ನಮ್ಮ ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದೆ. ಇಡೀ ಭಾರತೀಯರ ಮನಸ್ಸಿಗೆ ಘಾಸಿ ಯನ್ನುಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಎಸ್‌ಎಸ್ ಸಂಚಾಲಕ ರಂಗಪ್ಪ ಅವರು ಮಾತನಾಡಿ, ಗೌರವಾನ್ವಿತ ನ್ಯಾಯಾಧೀಶರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಮನಸ್ಸಿನಿಂದ ಈ ತರಹ ಹೇಯ ಕೃತ್ಯ ಎಸಗಿರಬಹುದು ಎಂಬ ಅನುಮಾನಗಳು ಶುರು ವಾಗಿದೆ. ಇದು ನಮ್ಮ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರಿಗೆ ಮಾಡಿದ ಅವಮಾನ ವಾಗಿದೆ. ಇದನ್ನು ತೀವ್ರವಾಗಿ ಪರಿಗಣಿಸಿ ತನಿಖೆಗೆ ಒಳಪಡಿಸಬೇಕು.
ನ್ಯಾಯಾಲಯದೊಳಗೆ ನ್ಯಾಯಪೀಠದಲ್ಲಿ ಆಸೀನರಾಗಿದ್ದ ನ್ಯಾಯಮೂರ್ತಿಗಳ ಮೇಲೆ ಹಗೆ ಮುಂದಾದ ವಕೀಲರನ್ನು ವಕೀಲರ ಪರಿಷತ್ ಅಮಾನತ್ತು ಮಾಡಿದೆ. ಆದರೆ, ಸದರಿ ಆರೋಪಿಯನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕು. ಇಲ್ಲದೇ ಹೋದಲ್ಲಿ ಇಂತಹ ಘಟನೆಗಳು ಮರುಕಳಿಸುವ ಸಾಧ್ಯತೆ ಇದೆ. ಆದ್ದರಿಂದ ವಕೀಲ ರಾಕೇಶ್ ಕಿಶೋರ್ ಅವರನ್ನು ತಕ್ಷಣ ಬಂಧಿಸಿ, ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಕೀಲರಾದ ಪ್ರಸನ್ನ, ಎನ್.ಎಸ್.ಯು.ಐ. ಜಿಧ್ಯಕ್ಷ ವಿಜಯ, ಯುವ ಕಾಂಗ್ರೆಸ್ ಮುಖಂಡ ಸಿ.ಜಿ. ಮಧುಸೂದನ್, ಕಾರ್ಯಾಧ್ಯಕ್ಷ ರವಿ ಕಾಟಿಕೆರೆ, ಬಾಲಾಜಿ, ಚಂದ್ರೋಜಿ ರಾವ್, ಆದಿತ್ಯ, ಸುಭಾನ್, ವರುಣ್ ವಿ. ಪಂಡಿತ್ , ಶಬರೀಶ್, ಆಕಾಶ್, ತರುಣ್, ಹಾಲಸ್ವಾಮಿ, ಕರಣ, ಮನೋಜ್, ಎಲ್.ಎಲ್.ಬಿ. ಕಾಲೇಜು ಘಟಕದ ಅಧ್ಯಕ್ಷ ಲೋಹಿತ್ ಇನ್ನಿತರರಿದ್ದರು.
