ಜಿಲ್ಲಾ ಸುದ್ದಿತಾಜಾ ಸುದ್ದಿ

ಗ್ರಾಪಂ ಅಧ್ಯಕ್ಷರ ಅಧಿಕಾರ ಮೊಟಕು ಪ್ರಯತ್ನ: ಒಕ್ಕೂಟದ ಅಧ್ಯಕ್ಷ ಅನಿಲ್ ಖಂಡನೆ

Share Below Link

ತೀರ್ಥಹಳ್ಳಿ : ಸರ್ಕಾರ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ಅಧಿಕಾರಿಗಳು ಹಂತಹಂತವಾಗಿ ಗ್ರಾಪಂ ಅಧ್ಯಕ್ಷರುಗಳ ಅಧಿಕಾರ ವನ್ನು ಮೊಟಕುಗೊಳಿಸಲು ಪ್ರಯ ತ್ನಿಸುತ್ತಿದ್ದು, ಇದೀಗ ೧೫ನೇ ಹಣ ಕಾಸು ಕ್ರೀಯಾಯೋಜನೆಯ ಮಂಜೂರಾತಿಗೆ ಅಡ್ಡಿ ಪಡಿಸುವ ಮೂಲಕ ಕೇಂದ್ರ ಸರ್ಕಾರ ನೀಡು ತ್ತಿರುವ ಅನುದಾನದಲ್ಲಿ ಕಾಮಗಾ ರಿಗಳನ್ನು ಮಾಡಲು ಅಡಚಣೆಯ ನ್ನುಂಟು ಮಾಡುತ್ತಿರುವುದು ಖಂ ಡನೀಯ ಎಂದು ಗ್ರಾಪಂ ಒಕ್ಕೂಟ ದ ಅಧ್ಯಕ್ಷ ಅನಿಲ್ ತಿಳಿಸಿzರೆ.
ಕೇಂದ್ರ ಸರ್ಕಾರ ಗ್ರಾ. ಪಂ.ಗೆ ಬಿಡುಗಡೆ ಮಾಡುವ ಹದಿನೈದನೇ ಹಣಕಾಸಿಗೆ ಗ್ರಾ. ಪಂ.ಯಲ್ಲಿ ನಿಯ ಮಾನುಸಾರ ಕ್ರೀಯಾಯೋಜನೆ ತಯಾರಿಸಿ ಇ ಗ್ರಾಮ್ ಸ್ವರಾಜ್‌ಗೆ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವ ಮೂಲಕ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳೇ ಕಾಮಗಾರಿಗಳಿಗೆ ಅನುಮೋದನೆ ನೀಡುವಂತಹ ಅವಕಾಶವಿದೆ. ಆದರೆ ಇದೀಗ ಕ್ರೀಯಾ ಯೋಜನೆ ತಯಾರಿಸಿ ಅನುಮೋದನೆಗಾಗಿ ಜಿಪಂ ಸಿಇಓಗೆ ಕಳುಹಿಸಬೇಕೆಂದು ಶಿವಮೊಗ್ಗ ಜಿಪಂ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ ಮೌಖಿ ಕವಾಗಿ ತಿಳಿಸಿzರೆ ಎಂದು ಅಭಿ ವೃದ್ಧಿ ಅಧಿಕಾರಿಗಳು ತಾಲೂಕಿನ ಎ ಪಂಚಾಯತಿಯ ಕ್ರೀಯಾ ಯೋಜನೆ ಮಂಜೂರಾತಿಗೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಆರೋಪಿ ಸಿದ್ದಾರೆ.
ಯಾವೂದೇ ಜಿಯಲ್ಲೂ ಕಾರ್ಯರೂಪದಲ್ಲಿ ಇಲ್ಲದ ನಿಯಮನ್ನು ಜಾರಿಗೊಳಿಸಲು ಮೌಖಿಕ ಆದೇಶವನ್ನು ನೀಡಿರುವ ಸಿಇಓ ಆದನ್ನು ಹಿಂಪಡೆಯ ಬೇಕಿದೆ ಎಂದು ಆಗ್ರಹಿಸಿದ್ದಾರೆ.
ಈ ರೀತಿ ಅನುಮೋದನೆ ಜಿಪಂಗೆ ಕಳುಹಿಸಿ ಎನ್ನುವ ಮೂಲಕ ಗ್ರಾಪಂ ಅಧ್ಯಕ್ಷರುಗಳ ಅಧಿಕಾರವನ್ನು ಮೊಟಕುಗೊಳಿಸುವ ಹುನ್ನಾರವೂ ಇದಾಗಿದೆಯೆಂದು ತಿಳಿಸಿರುವ ಒಕ್ಕೂಟದ ಅಧ್ಯಕ್ಷ ಅನಿಲ್ ಅವರು, ಕೂಡಲೇ ಎ ಗ್ರಾಪಂಯ ಅಭಿವೃದ್ದಿ ಅಧಿಕಾರಿ ಗಳಿಗೆ ಹಿಂದಿನಂತೆ ಕ್ರೀಯಾಯೋ ಜನೆಯ ಮಂಜೂರಾತಿಗೆ ಅನು ಮೋದನೆ ನೀಡುವಂತೆ ಮಾಡಿ ಕಾಮಗಾರಿ ಗಳನ್ನು ನಡೆಸಲು ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿ ಸುವಂತೆ ಒತ್ತಾಯಿಸಿದ್ದಾರೆ.