ಜಿಲ್ಲಾ ಸುದ್ದಿತಾಜಾ ಸುದ್ದಿ

ಉಪಕಾರದ ನೆಪದಲ್ಲಿ ಧರ್ಮದ ಮೇಲೆ ದಾಳಿ…

Share Below Link

ಹೊಳೆಹೊನ್ನೂರು: ಅಪಕಾರ ಮಾಡು ವುದಕ್ಕೆ ಬರುವವರು ಉಪಕಾರ ಮಾಡುವ ವರಂತೆ ಸೋಗು ಹಾಕಿ ಬರುತ್ತಾರೆ. ಆಮೇಲೆ ಅಪಕಾರ ಮಾಡುತ್ತಾರೆ. ಈ ಬಗ್ಗೆ ಎಚ್ಚರಿಕೆ ಇರಬೇಕು ಎಂದು ಉತ್ತರಾದಿ ಮಠಾಧೀಶ ರಾದ ಶ್ರೀ ಸತ್ಯಾತ್ಮ ತೀರ್ಥರು ಹೇಳಿದರು.
ತಮ್ಮ ೨೮ನೇ ಚಾತುರ್ಮಾಸ್ಯದ ಅಂಗ ವಾಗಿ ನಡೆಯುತ್ತಿರುವ ಶ್ರೀ ಸತ್ಯಧರ್ಮ ತೀರ್ಥ ಶ್ರೀಪಾದಂಗಳವರ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡುತ್ತಿರುವ ಸಂದರ್ಭದಲ್ಲಿ ಶ್ರೀಗಳು ಈ ಸಂಬಂಧ ವಿಶೇಷ ಸಂದೇಶ ನೀಡಿದರು.
ನಮ್ಮ ಭಾರತ ದೇಶಕ್ಕೆ ಆಕ್ರಮಣಕಾರಿ ಗಳಾಗಿ ಬರುವವರು ಎಲ್ಲವನ್ನೂ ಕೊಡುತ್ತೇವೆ ಅಂದುಕೊಂಡೇ ಬಂದರು. ಬೇರೆ ಬೇರೆ ರೀತಿಯಿಂದ ಉಪಕಾರ ಮಾಡು ವುದಾಗಿ ಹೇಳಿ ಬಂದಿzರೆ. ಆನಂತರ ನಮ್ಮ ಸಂಸ್ಕೃತಿಯನ್ನು, ಧರ್ಮವನ್ನು ನಾಶ ಮಾಡುವ ಪ್ರಯತ್ನ ಮಾಡಿzರೆ. ನಿಜವಾಗಿ ಉಪಕಾರ ಮಾಡುವುದಕ್ಕೆ ಬಂದಿzರೋ ಅಥವಾ ಬೇರಾವುದೋ ಹಿನ್ನೆಲೆಯಲ್ಲಿ ಉಪಕಾರ ಮಾಡುತ್ತಿzರೆಯೋ ಎಂಬ ಬಗ್ಗೆ ಸೂಕ್ಷ್ಮವಾಗಿ ಗಮನಿಸಬೇಕು ಎಂದರು.


ಕೃಷ್ಣಾವತಾರದಿಂದ ಕೇವಲ ದ್ವಾಪರ ಯುಗದ ಜನರಿಗೆ ಮಾತ್ರ ಉಪಕಾರ ಆಯಿತು ಅಂದುಕೊಳ್ಳಬೇಡಿ. ದೇವರ ಅವತಾರ ಆಗದಿದ್ದರೆ ನಾವು ದುಃಖ ಪಡಬೇಕಿತ್ತು. ಇದೇ ಸಂದರ್ಭದಲ್ಲಿ ದೇವರ ಸರ್ವೋತ್ತಮತ್ವವನ್ನು ಮತ್ತು ಮಹಿಮೆ ಯನ್ನು ತಿಳಿದುಕೊಳ್ಳಬೇಕು ಎಂದರು.
ಪಂಡಿತ ರಾಜಕಿರಣಾಚಾರ್ಯ ಭೂಪಾಲ ಹರಿಭಕ್ತಪ್ರವಚನ ನೀಡಿದರು. ಬೆಂಗಳೂರಿನ ಶ್ರೀ ಜಯತೀರ್ಥ ವಿದ್ಯಾ ಪೀಠದ ಕುಲಪತಿಗಳಾದ ಗುತ್ತಲ ರಂಗಾಚಾರ್ಯ, ಶ್ರೀಮಠದ ದಿವಾನರಾದ ಶಶಿ ಆಚಾರ್ಯ, ಸಿಇಓ ವಿದ್ಯಾಧೀಶಾ ಚಾರ್ಯ ಗುತ್ತಲ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತ ಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಜಿ ಮಠಾ ಕಾರಿ ಬಾಳಗಾರು ಜಯತೀರ್ಥಾಚಾರ್ಯ ಮೊದಲಾದವರಿದ್ದರು.
ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಕಾರ್ಯಕ್ರಮ:
ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರ ೨೮ನೇ ಚಾತುರ್ಮಾಸ್ಯದ ನಿಮಿತ್ತ ಉತ್ತರಾದಿ ಮಠದ ಬೆಂಗಳೂರಿನ ಶ್ರೀ ಜಯತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಆ.೨೯ ರ ನಾಳೆಯಿಂದ ಆ. ೩೧ರವರೆಗೆ ಪ್ರತಿದಿನ ಹೊಳೆಹೊನ್ನೂರಿನ ಜಯವರ್ಯ ಸಭಾ ಮಂಟಪದಲ್ಲಿ ಸಂಜೆ ೫.೩೦ರಿಂದ ೭.೩೦ ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಆ.೨೯ರ ನಾಳೆ ಧರ್ಮಾತ್ಮತಾರಕ ನಾಟಕ, ಆ.೩೦ರಂದು ಭಾವಬೋಧ ಎಂಬ ವಿದ್ಯಾರ್ಥಿಯಿಂದ ಅಷ್ಟಾವಧಾನ ಹಾಗೂ ಆ.೩೧ರಂದು ಸಂಸ್ಕೃತ ದಿನಾಚರಣೆ ನಿಮಿತ್ತ ಸಂಸ್ಕೃತೋತ್ಸವ ಆಯೋಜಿಸಲಾಗಿದೆ.