ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಸಿಂಗನಮನೆ ಗ್ರಾಪಂ ಉಪಾಧ್ಯಕ್ಷರಾಗಿ ಅಶ್ವಿನಿ ಶಶಿಕುಮಾರ್ ..

Share Below Link

ಭದ್ರಾವತಿ: ತಾಲೂಕಿನ ಸಿಂಗನಮನೆ ಗ್ರಾಪಂ ಉಪಾಧ್ಯಕ್ಷ ರಾಗಿ ಅಶ್ವಿನಿ ಶಶಿಕುಮಾರ್ ಶಂಕರ ಘಟ್ಟ ಶುಕ್ರವಾರ ನಡೆದ ಚುನಾ ವಣೆಯಲ್ಲಿ ಆಯ್ಕೆಯಾಗಿzರೆ.
ಅಶ್ವಿನಿ ಶಶಿಕುಮಾರ್ ೧೬ ಮತಗಳು ಹಾಗು ಇವರ ಪ್ರತಿಸ್ಪರ್ಧಿ ಕವಿತಾ ಪುಟ್ಟಸ್ವಾಮಿ ೪ ಮತ ಗಳನ್ನು ಪಡೆದುಕೊಂಡರು. ೨೧ ಸದಸ್ಯ ಬಲ ಹೊಂದಿರುವ ಪಂಚಾ ಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿ ತರು ಅಧಿಕಾರದ ಚುಕ್ಕಾಣಿ ಹಿಡಿ ದಿದ್ದು, ಒಪ್ಪಂದದಂತೆ ಆಂತರಿಕ ವಾಗಿ ಅಧಿಕಾರ ಹಂಚಿಕೆ ಮಾಡಿ ಕೊಂಡಿದ್ದು, ಉಪಾಧ್ಯಕ್ಷರಾಗಿದ್ದ ಕವಿತಾ ರುದ್ರೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನಲೆ ಯಲ್ಲಿ ಚುನಾವಣೆ ನಡೆಯಿತು. ಓರ್ವ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿಲ್ಲ. ಪಶುಸಂಗೋಪನಾ ಇಲಾಖೆಯ ಹಿರಿಯ ಪಶು ವೈದ್ಯಾಧಿಕಾರಿ ಡಾ. ಬಸವರಾಜ್ ಚುನಾವಣಾಧಿಕಾರಿ ಯಾಗಿ ಕರ್ತವ್ಯ ನಿರ್ವಹಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಹಿಂದುಳಿದ ವರ್ಗ ಗಳ ಗ್ರಾಮಾಂತರ ಅಧ್ಯಕ್ಷ ಎಂ. ರಮೇಶ್, ವಿಜಯ್ ಕುಮಾರ್, ಲೋಕೇಶ್, ಎಂ.ವಿ ಮುರು ಗೇಶ್, ವೀರೇಶ್, ಶ್ರೀಕಾಂತ್ ಗ್ರಾಮದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ನೂತನ ಉಪಾಧ್ಯಕ್ಷ ಅಶ್ವಿನಿ ಶಶಿ ಕುಮಾರ್‌ರವರನ್ನು ಅಭಿನಂದಿಸಿ zರೆ.