ಮಹಿಳೆ ಮೇಲೆ ಹಲ್ಲೆಗೈದ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಿ: ಆಗ್ರಹ
ಶಿವಮೊಗ್ಗ: ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕು ಮತ್ತು ಹಲ್ಲೆಗೊಳಗಾದ ಮಹಿಳೆಗೆ ರಕ್ಷಣೆ ನೀಡಬೇಕು ಎಂದು ಸಾಗರದ ವಕೀಲ ಎಂ. ರಮೇಶ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಸಾಗರದ ಎಫಿ ಫಣಿಯ ಡಿಸೋಜ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾ ಗಲೇ ಸಾಗರ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ಪೊಲೀಸರು ನಾಮಕಾವಸ್ತೆ ದೂರು ದಾಖಲಿಸಿ ಜಾಮೀನು ಪಡೆಯಲು ಸುಲಭ ಮಾಡಿಕೊಟ್ಟಿದ್ದಾರೆ.
ತಕ್ಷಣವೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಹಲ್ಲೆಗೊಳಗಾದ ಮಹಿಳೆಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ದರು.
ಹಲ್ಲೆಗೊಳಗಾದ ಮಹಿಳೆ ಎಫಿಫಣಿಯ ಡಿಸೋಜ ಮಾತ ನಾಡಿ, ಅಂತೋನಿ ಕುಂದಾಜ್, ಸುಮಾ ಮೇರಿ ಸೇರಿದಂತೆ ಏಳು ಮಂದಿ ನನಗೆ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾರೆ. ಕೊಲೆಯತ್ನ ಮಾಡಿದ್ದಾರೆ. ಈಗಾಗಲೇ ತಲೆಯಲ್ಲಿ ಐದು ಕಡೆ ಹೊಲಿಗೆ ಹಾಕಿದ್ದಾರೆ. ಸಾಗರ ಸರ್ಕಾರಿ ಆಸ್ಪತ್ರೆ ಮತ್ತು ಮೆಗ್ಗಾನ್ ಆಸ್ಪತ್ರೆಯಲ್ಲೂ ಕೂಡ ಸರಿಯಾದ ಚಿಕಿತ್ಸೆ ನೀಡಿಲ್ಲ. ತನಿಖೆ ಯನ್ನೂ ಕೂಡ ಸರಿಯಾಗಿ ಮಾಡಿಲ್ಲ. ಆರೋಪಿಗಳನ್ನು ಬಂಧಿಸಿಲ್ಲ. ನನಗೆ ಜೀವಭಯವಿದೆ. ನನಗೆ ರಕ್ಷಣೆ ನೀಡಬೇಕು ಎಂದರು.
ಚಂದ್ರಪ್ಪ ಉಪಸ್ಥಿತರಿದ್ದರು.