ಸಶಸ್ತ್ರ ಧ್ವಜ ದಿನಾಚರಣೆ: ಜಿಲ್ಲಾಧಿಕಾರಿಗಳಿಂದ ಧ್ವಜ ಬಿಡುಗಡೆ
ಶಿವಮೊಗ್ಗ: ದೇಶಕ್ಕೆ ನಮ್ಮ ಸೈನಿಕರ ಸೇವೆ ಅವಿಸ್ಮರಣೀಯ ವಾಗಿದ್ದು, ಮಾಜಿ ಸೈನಿಕರು ಹಾಗೂ ಹುತಾತ್ಮ ಸೈನಿಕರ ಅವಲಂಬಿತರಿಗೆ ಲಭ್ಯವಿರುವ ಸೌಲಭ್ಯಗಳನ್ನು ನೀಡಲಾಗುವುದು ಎಂದು ಡಿಸಿ ಡಾ.ಸೆಲ್ವಮಣಿ ತಿಳಿಸಿದರು.
ಜಿಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಶಸ್ತ್ರ ಧ್ವಜ ದಿನಾಚರಣೆಯಲ್ಲಿ ಧ್ವಜ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕಳೆದ ಸಾಲಿನ ಧ್ವಜ ದಿನಾಚರಣೆ ನಿಧಿ ಸಂಗ್ರಹದಲ್ಲಿ ನಿಗದಿತ ಗುರಿಗಿಂತ ಹೆಚ್ಚಿನ ಸಾಧನೆ ತೋರಿದ್ದಕ್ಕಾಗಿ ಜಿಗೆ ರಾಜ್ಯಪಾಲ ರಿಂದ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಷಯ ಎಂದು ಶ್ಲಾಸಿದ ಅವರು, ಧ್ವಜ ದಿನಾ ಚರಣೆ ಅಂಗವಾಗಿ ಸಂಗ್ರಹಿಸಲಾ ಗುವ ನಿಧಿಯು ಮಾಜಿ ಸೈನಿಕರು, ಹುತಾತ್ಮ ಸೈನಿಕರ ಅವಲಂಬಿತರ ಕಲ್ಯಾಣಕ್ಕಾಗಿ ಗೌರವ ರೂಪದಲ್ಲಿ ವಿನಿಯೋಗ ವಾಗುವುದು. ಹುತಾತ್ಮ ಸೈನಿಕರ ಅವಲಂಬಿತರು ಬೇಡಿಕೆ ಇಟ್ಟಿರುವ ನಿವೇಶನದ ಕುರಿತು ತಾವು ಪರಿಶೀಲಿಸುವು ದಾಗಿ ಇದೇ ವೇಳೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕ ಡಾ.ಸಿ.ಎ.ಹಿರೇಮಠ ಮಾತ ನಾಡಿ, ಜಿಧಿಕಾರಿಗಳ ಸಹಕಾ ರಿಂದ ನಿಧಿ ಸಂಗ್ರಹಣೆಯಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಅಭಿನಂದಿಸಿದರು.
ನಿವೃತ್ತ ಕರ್ನಲ್ ರಾಮಚಂದ್ರ, ಜಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಿ.ವಿ. ಕೃಷ್ಣಮೂರ್ತಿ, ಉಪಾಧ್ಯಕ್ಷ ವೆಂಕಟೇಶ್ ರಾವ್, ಕಾರ್ಯದರ್ಶಿ ಉಮೇಶ್ ಬಾಪಟ್, ಸೈನಿಕ ಕಲ್ಯಾಣ ಇಲಾಖೆ ಸಿಬ್ಬಂದಿಗಳಾದ ದಿನೇಶ್, ಅನಿಲ್, ಮೂರ್ತಿ, ಮಾಜಿ ಸೈನಿಕರು ಅವರ ಅವಲಂಬಿತರು ಹಾಜರಿದ್ದರು.