ಇತರೆತಾಜಾ ಸುದ್ದಿ

ಏ.೧೦: ದುರ್ಗಾದೇವಿ- ಗಾಳಮ್ಮ ದೇವಿ ಜಾತ್ರೆ

Share Below Link

ಕೊಪ್ಪಳ: ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಹಾಗೂ ಗಾಳಮ್ಮ ದೇವಿಯ ಜತ್ರಾ ಮಹೋತ್ಸವು ಏ.೧೦ರ ನಾಳೆ ವಿಜೃಂಭಣೆಯಿಂದ ಆಚರಿಸಲಾಗುವುದು.
ಅಂದು ಬೆಳಿಗ್ಗೆ ೮.೧೫ಕ್ಕೆ ಕಂಕಣ ಕಟ್ಟುವುದು ನಂತರ ೯.೧೫ಕ್ಕೆ ದೇವಿಗೆ ಕಳಸಾರವಣ ಮಧ್ಯಾಹ್ನ ೩.೩೫ಕ್ಕೆ ಅಗ್ನಿ ಕಟ್ಟಿಗೆ ತರಲು ಶ್ರೀ ಅನ್ನದಾನೇಶ್ವರ ಮಠದ ಹತ್ತಿರ ಹೊರಡುವುದು.
ನಂತರ ಅಂದಪ್ಪ ಗೊಸಪ್ಪ ಪಾಟೀಲ್, ಎಲ್ಲಪ್ಪ ಅಡವಳ್ಳಿ ಯವರ್ ಮನೆಯಿಂದ ಶ್ರೀದೇವಿಗೆ ಮಾಲೆ ತರುವುದು. ಹೂಗಾರ ಮನೆಯಿಂದ ದಂಡಿ ಹಾಗೂ ಹಾರ ತರುವುದು. ಏ.೧೨ರ ಬುಧವಾರ ಸಂಜೆ ೫:೩೦ಕ್ಕೆ ಗ್ರಾಮದ ಸಮಸ್ತ ಗುರುಹಿರಿಯರು ಹಾಗೂ ದೈವದವರ ಮೂಲಕ ಮತ್ತು ಸಕಲವಾದ್ಯ ವೈಭವಗಳೊಂದಿಗೆ ಮೆರವಣಿಗೆ ಮೂಲಕ ಮರಿಹೋಳಿಗೆ ಹೋಗೋದು ಎಂದು ಸಂಗನಾಳ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರಾದ ದುರ್ಗಪ್ಪ ಮುದುಕಪ್ಪ ನಡವಲ ಕೇರಿಯವರು ತಿಳಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟ್ ಕಮಿಟಿ ಅಧ್ಯಕ್ಷ ಸಂಗಪ್ಪ ಹುಸೇನಪ್ಪ ಬಂಡ್ಯಾಳ, ರಾಮಪ್ಪ ಕದರಳ್ಳಿ, ಸಂಗಪ್ಪ ಜೋಗನ್ನವರ್, ಶಿವಪ್ಪ ಗದ್ದಿ, ರಾಮಪ್ಪ ನಡವಲ ಕೇರಿ, ಗಾಳಪ್ಪ ನಡವಲ ಕೇರಿ, ಶರಣಪ್ಪ ಕಟ್ಟಪ್ಪನವರ್, ಹಾಗೂ ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.