ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಏ.13: ಬ್ರಾಹ್ಮಣ ಮಹಾಸಭಾ ಚುನಾವಣೆ…

Share Below Link

ಶಿವಮೊಗ್ಗ : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ) ಬೆಂಗಳೂರು, ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಜಿ ಪ್ರತಿನಿಧಿ ಸ್ಥಾನಕ್ಕೆ ಚುನಾವಣೆಯು ಏ.೧೩ ರಂದು ನಗರದ ವಾಸವಿ ವಿದ್ಯಾಲಯದಲ್ಲಿ ಬೆಳಗ್ಗೆ ೮ ರಿಂದ ಸಂಜೆ ೪ರವರೆಗೆ ಮತದಾನ ನಡೆಯಲಿದೆ ಎಂದು ಬ್ರಾಹ್ಮಣ ಸಮಾಜದ ಮುಖಂಡ ಎಸ್. ದತ್ತಾತ್ರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.೧೩ ರಂದು ಚುನಾವಣೆ ನಡೆಯಲಿದ್ದು, ಮಾ.೨೭ ರಂದು ಬೆಂಗಳೂರಿನಲ್ಲಿ ನಾಮಿನೇಷನ್ ಮಾಡಲಿzರೆ. ಎ ತಾಲ್ಲೂಕುಗಳಲ್ಲಿ ತಂಡ ರಚನೆ ಮಾಡಿದ್ದೇವೆ. ಜಿಯಲ್ಲಿ ೩೪೧೪ ಮತಗಳಿದ್ದು, ಶಿವಮೊಗ್ಗ ನಗರದಲ್ಲಿ ೧೬೮೭ ವೋಟ್‌ಗಳಿವೆ. ಸಾಗರದಲ್ಲಿ ೯೦೦ ವೋಟ್‌ಗಳಿವೆ ಎಂದರು.


ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶ ಮತ್ತು ಬಡ ಬ್ರಾಹ್ಮಣ ಮಕ್ಕಳಿಗೆ ಸ್ಕಾಲರ್ ಶಿಪ್ ನೀಡುವ ಉದ್ದೇಶವನ್ನು ಹೊಂದಿ ದ್ದೇವೆ. ೭ಇದು ಬ್ರಾಹ್ಮಣರ ನಡುವೆ ಐಕ್ಯತೆ ಮೂಡಿಸುವಲ್ಲಿ ಸಫಲ ವಾಗಿದೆ. ನಾಡಿನ ಪ್ರಖ್ಯಾತರು ಸಾರಥ್ಯವನ್ನು ವಹಿಸಿ, ಮಹಾ ಸಭಾದ ಏಳಿಗೆಗಾಗಿ ಕಾರ್ಯನಿರ್ವಹಿಸಿzರೆ ಎಂದರು.
ಕರ್ನಾಟಕ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ರಘುನಾಥ್ ಅವರು, ಪ್ರತಿಷ್ಠಿತ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸ್ಥಾನದ ಪ್ರಬಲ ಅಭ್ಯರ್ಥಿ ಎಸ್. ರಘುನಾಥ್‌ರವರು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಕೆಲಸ ಮಾಡಿ ಹೆಸರು ಮಾಡಿದವರು. ಇವರು ರಾಜಕೀಯ ಕ್ಷೇತ್ರದಲ್ಲಿ ಬೆಂಗಳೂರು ನಗರ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ಚುನಾವಣೆ ವೇಳೆ ಸಂಚಾಲಕರಾಗಿ ಪಕ್ಷದ ಗೆಲುವಿಗಾಗಿ ಶ್ರಮಿಸಿದವರು ಎಂದರಲ್ಲದೆ, ಈ ಹಿಂದೆ ನಡೆದ ಮಹಾಸಭೆಯ ಚುನಾವಣೆಯಲ್ಲಿ ಆಲ್ಪಮತದಿಂದ ಪರಾಭವ ಗೊಂಡರೂ ಸಮಾಜದ ನಡುವೆ ತಮ್ಮನ್ನು ನಿರಂತರವಾಗಿ ತೊಡಗಿಸಿ ಕೊಂಡಿzರೆ. ಪ್ರಸಕ್ತ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭೆಯ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಪ್ರತಿನಿಧಿಸಲು ಸ್ಪರ್ಧಿಸಿದ್ದು, ತಮ್ಮೆಲ್ಲರ ಸಹಕಾರ, ಆಶೀರ್ವಾz ವನ್ನು ಬಯಸಿzರೆ ಎಂದರು.
ಮಾಜಿ ಶಾಸಕರೂ ಹಾಗೂ ವಿಪ್ರ ಮುಖಂಡರೂ ಆದ ಕೆ.ಬಿ.ಪ್ರಸನ್ನ ಕುಮಾರ್ ಮಾತನಾಡಿ, ಶಿವಮೊಗ್ಗ ಜಿಗೆ ರಘುರಾಮ್, ರಾಜ್ಯಕ್ಕೆ ರಘುನಾಥ್ ಎನ್ನುವ ಘೋಷಣೆಯೊಂದಿಗೆ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಸಭೆ ನಡೆಸಲಾಗಿದೆ. ರಘುರಾಮ್ ಅವರ ಗೆಲುವು ನಿಶ್ಚಿತ ಎನ್ನಿಸುತ್ತದೆ. ಮೊದಲೆಲ್ಲ ಇಷ್ಟೊಂದು ವೋಟ್ ಗಳು ಇರಲಿಲ್ಲ. ಜಿಯಲ್ಲಿ ಸಮಾಜಕ್ಕೆ ಬೇಕಾಗಿರುವ ಶಾಲಾ ಕಾಲೇಜ್ ಪ್ರಾರಂಭಿಸುವುದು, ಆಸ್ಪತ್ರೆಗಳ ಸೌಲಭ್ಯವನ್ನು ಸಮಾಜದವರಿಗೆ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು. ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುವುದು. ಈ ಬಾರಿ ಗೆದ್ದಂತಹವರಿಗೆ ೫ ವರ್ಷ ಅವಧಿ ಇರುತ್ತದೆ ಎಂದರು.
ಅಭ್ಯರ್ಥಿ ರಘುರಾಮ್ ಮಾತನಾಡಿ, ಶಿವಮೊಗ್ಗ ಜಿ ಪ್ರತಿನಿಧಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ. ಹಿರಿಯರ ಮಾರ್ಗದರ್ಶನದ ನಿಟ್ಟಿನಲ್ಲಿ ಸ್ಫರ್ಧೆ ಮಾಡುತ್ತಿದ್ದೇನೆ. ೧೯೮೬ರಲ್ಲಿ ಕೆ.ಇ.ಬಿ.ಯಲ್ಲಿ ವೃತ್ತಿ ಜೀವನ ಆರಂಭಿಸಿ, ವಿವಿಧ ಹುzಗಳನ್ನು ಯಶಸ್ವಿಯಾಗಿ ನಿರ್ವಹಿಸಿ, ೪೦ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದೇನೆ. ಪ್ರತಿಷ್ಠಿತ ತಾಲ್ಲೂಕು ಬ್ರಾಹ್ಮಣ ಸೇವಾ ಸಂಘ, ಸರ್ ಎಂ.ವಿ. ಸೊಸೈಟಿ, ಹೊಯ್ಸಳ ಸೌಹಾರ್ದ ಸಹಕಾರಿಗಳಲ್ಲಿ ನಿರ್ದೇಶಕರು, ಖಜಂಚಿ ಹಾಗೂ ಅಧ್ಯಕ್ಷರಾಗಿ ವಿವಿಧ ಹುzಗಳಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಪ್ರಸಕ್ತ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಶಿವಮೊಗ್ಗ ಜಿ ಪ್ರತಿನಿಧಿ ಸ್ಥಾನಕ್ಕೆ ಪ್ರತಿನಿಧಿಸಲು ಸ್ಪರ್ಧಿಸಿದ್ದು, ತಮ್ಮೆಲ್ಲರ ಸಹಕಾರ, ಆಶೀರ್ವಾದ ಇರಲಿ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಂ.ಶಂಕರ್ ರಾವ್, ಕೇಶವ ಮೂರ್ತಿ, ಮಾಧವಾಚಾರ್, ಉಮಾಶಂಕರ್ ಉಪಾಧ್ಯ, ಕೃಷ್ಣಮೂರ್ತಿ, ಹೆಚ್.ಸಿ.ಸುರೇಶ್, ಆರ್.ಅಚ್ಯುತ್ ರಾವ್, ರವಿಶಂಕರ್, ಗುರುರಾಜ, ಸುಹಾಸ್ ಶಾಸ್ತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *