ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಕೇಂದ್ರದ ಅಭಿವೃದ್ಧಿ ಮೆಚ್ಚಿ ಮೋದಿ ಬೆಂಬಲಕ್ಕೆ ನಿಂತ ಮಾಜಿ ಪ್ರಧಾನಿ ದೇವೇಗೌಡ…

Share Below Link

ಶಿವಮೊಗ್ಗ :ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದ ಅಭಿವೃದ್ಧಿ ಮೆಚ್ಚಿ ಈಗಾಗಲೇ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕೈ ಜೋಡಿಸಿದ್ದು ದೇಶದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗ ಲಿzರೆ ಎಂದು ಬಿಜೆಪಿ ರಾಜಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿzರೆ.
ಅವರು ಇಂದು ಕುಂಸಿಯಲ್ಲಿ ಬಿಜೆಪಿ ರೈತ ಮೋರ್ಚಾ ಕರ್ನಾಟಕ ಶಿವಮೊಗ್ಗ ಜಿ ಘಟಕದ ವತಿಯಿಂದ ರೈತರ ಉತ್ಪಾದಕರ ಸಂಸ್ಥೆಗಳ ಪ್ರಮುಖರು ಮತ್ತು ಪ್ರಗತಿಪರ ರೈತರ ಸಭೆ ಉದ್ಘಾಟಿಸಿ ಮಾತನಾಡಿದರು.
ರೈತರ ಬೆಳೆಗೆ ವೈeನಿಕ ಬೆಲೆ ನೀಡಬೇಕು. ರೈತರ ಬಾಳು ಹಸನಾಗಬೇಕು ಎಂಬುದು ಪ್ರಧಾನಿ ಯವರ ಇಚ್ಛೆಯಾಗಿದೆ. ಭಾರತದ ಮೂಲ ಬೆನ್ನೆಲುಬು ರೈತನಾಗಿzನೆ. ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿzಗ ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿ ದೇಶದ ಪ್ರಥಮ ರೈತ ಬಜೆಟ್ ಮಂಡಿಸಿ ಅನೇಕ ಕಾರ್ಯಕ್ರಮ ಗಳನ್ನು ನೀಡಿದ್ದರು. ಕಿಸಾನ್ ಸಮ್ಮಾನ್ ಯೋಜನೆಗೆ ಕೇಂದ್ರದ ೬ ಸಾವಿರ ಮತ್ತು ರಾಜ್ಯದ ೪ ಸಾವಿರ ರೂ. ಹಣ ನೀಡಿದ್ದರು. ಕಾಂಗ್ರೆಸ್ ಈಗ ಅದನ್ನು ರದ್ದುಗೊಳಿಸಿದೆ ಎಂದು ದೂರಿದರು.
ಬಿ.ವೈ. ರಾಘವೇಂದ್ರ ೪ನೇ ಬಾರಿಗೆ ಸ್ಪರ್ಧೆ ಮಾಡುತ್ತಿzರೆ. ಅಭಿವೃದ್ಧಿ ಎಂದರೆ ಯಡಿಯೂರಪ್ಪ ಎಂಬ ಮಾತು ಇತ್ತು. ರಾಘವೇಂದ್ರ ಅವರನ್ನೂ ಮೀರಿಸಿ ಅಭಿವೃದ್ಧಿ ಮಾಡಿzರೆ. ಕ್ಷೇತ್ರದ ಜನತೆಗೆ ಅದರ ಅರಿವಿದೆ. ಈ ದೇಶದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಲು ಸಂಸದರಾಗಿ ಬಿ.ವೈ. ರಾಘವೇಂದ್ರ ಮತ್ತೊಮ್ಮೆ ಗೆಲ್ಲುತ್ತಾರೆ. ರಾಜ್ಯದಲ್ಲಿ ಇದುವರೆಗೆ ಕಾಣದ ಉತ್ತಮ ವಾತಾವರಣ ಇದೆ.
ತುತ್ತು ಅನ್ನ ಕೊಡುವ ರೈತರಿಗೆ ಬರಗಾಲದಲ್ಲಿ ಮತ್ತು ನೆರೆ ಬಂದಾಗ ಯಡಿಯೂರಪ್ಪ ಸರ್ಕಾರವಿzಗ ಕೇಂದ್ರದ ಪರಿಹಾರಕ್ಕೆ ಕಾಯದೇ ಹೆಕ್ಟೇರ್ ಗೆ ೧೪ ಸಾವಿರ ರೂ.ಗಳನ್ನು ನೀಡಿದ್ದರು. ನೆರೆ ಬಂದಾಗ ೨೪ ಸಾವಿರ ರೂ. ನೀಡಿದ್ದರು. ಎನ್.ಡಿ.ಆರ್.ಎಫ್, ಮಾರ್ಗ ಸೂಚಿ ಪ್ರಕಾರ ೧ ಲಕ್ಷ ಪರಿಹಾರ ಇದ್ದರೆ ಆ ಸಂದರ್ಭದಲ್ಲಿ ೪ ಲಕ್ಷ ರೂ. ನೀಡಿದ್ದರು. ಅದನ್ನು ರೈತರು ಮರೆತಿಲ್ಲ ಎಂದರು.
ದೇಶದಲ್ಲಿ ಮೋದಿ ಸರ್ಕಾರ ೧೦ ಸಾವಿರ ಎಫ್.ಪಿ.ಒ.(ಆಹಾರ ಸಂಸ್ಕರಣಾ ಘಟಕ)ಗಳನ್ನು ಗುರುತಿಸಿದ್ದು, ೬೧೦೦ ಕೋಟಿ ರೂ. ಅನುದಾನ ನೀಡಿ ಕೃಷಿ ಉತ್ಪಾದಕ ಸಂಸ್ಥೆಗಳಿಗೆ ಬಲ ತುಂಬಿದೆ. ನ್ಯಾಯಸಮ್ಮತ ಬೆಲೆ ಸಿಗಬೇಕು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೈತ ಬೆಳೆದ ಬೆಳೆಗೆ ಮಾರಾಟಕ್ಕೆ ಅವಕಾಶ ಸಿಗಬೇಕು. ಮಧ್ಯವರ್ತಿ ಗಳ ಹಾವಳಿ ತಪ್ಪಿಸಿ ರೈತರೇ ನ್ಯಾಯಯುತ ಬೆಲೆಗೆ ಮಾರುವ ಅವಕಾಶ ಸಿಗಬೇಕು. ರೈತ ಸ್ವಾಭಿಮಾನದ ಬಾಳು ಬದುಕಬೇಕು. ರೈತರ ಆದಾಯ ದ್ವಿಗುಣಗೊಳ್ಳಬೇಕು ಎಂಬುದು ಬಿಜೆಪಿಯ ಗುರಿಯಾಗಿದೆ ಎಂದರು.
ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ, ಕೇಂದ್ರ ರೈತ ಮೋ ರ್ಚಾದ ಮುಖಡರಾದ ಜಯ ಸೂರ್ಯ, ಶಂಭುಕುಮಾರ್, ಆನಂದ್, ಡಾ. ನವೀನ್ ಇದ್ದರು.