ಜಿಲ್ಲಾ ಸುದ್ದಿತಾಜಾ ಸುದ್ದಿ

ಮಾಸಾಶನ ಹೆಚ್ಚಿಸಲು ಸಿಎಂಗೆ ಮನವಿ…

Share Below Link

ಶಿವಮೊಗ್ಗ,: ವಿಧವಾ, ವೃದ್ಧಾಪ್ಯ, ವಿಕಲಚೇತನರ ಮಾಸಾಶನವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿ ಸಮೃದ್ಧ್ ಸ್ವಸಹಾಯ ಸಂಘಗಳ ತಾಲೂಕು ಒಕ್ಕೂಟವು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
ರಾಜ್ಯ ಸರ್ಕಾರ ವಿಧವಾ ವೇತನ ಸೇರಿದಂತೆ ಹಲವು ಮಾಸಾಶನಗಳನ್ನು ಜರಿಗೆ ತಂದಿದೆ. ಈ ಯೋಜನೆ ಅತ್ಯುತ್ತಮವಾಗಿದ್ದು, ಮಹಿಳೆಯರಿಗೆ, ವೃದ್ಧರಿಗೆ, ವಿಕಲಚೇತನರ ಬಾಳಿಗೆ ಆಶಾಕಿರಣವಾಗಿದೆ. ತಮ್ಮ ತಿಂಗಳ ಔಷಧೋಪಚಾರ ಸೇರಿದಂತೆ ಇತರ ಸಣ್ಣ ಪುಟ್ಟ ಖರ್ಚುಗಳಿಗೆ ಇದು ನೆರವಾಗುತ್ತದೆ ಎಂದು ತಿಳಿಸಿದರು.
ಆದರೆ, ಇತ್ತೀಚಿನ ದಿನಗಳಲ್ಲಿ ಔಷಧಿ ಸೇರಿದಂತೆ ಎಲ್ಲಾ ದಿನಬಳಕೆ ವಸ್ತುಗಳ ಬೆಲೆ ದುಬಾರಿಯಾಗಿದೆ. ಸರ್ಕಾರ ನೀಡುತ್ತಿರುವ ಎರಡು ಸಾವಿರ ರೂ. ಸಾಕಾಗುತ್ತಿಲ್ಲ. ಆದ್ದರಿಂದ ಈ ಮಾಸಾಶನದ ಮೊತ್ತವನ್ನು ಹೆಚ್ಚಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ತಾಲೂಕು ಒಕ್ಕೂಟದ ಅಧ್ಯಕ್ಷೆ ಪುಷ್ಪಲತಾ ಆರ್., ರೂಪಾ, ಕವಿತಾ, ಯಶೋದಮ್ಮ, ಭಾನುಪ್ರಿಯಾ, ನೂರ್ ಜಹಾನ್, ಸವಿತಾ, ಚಂದ್ರಮ್ಮ ಸೇರಿದಂತೆ ಹಲವರಿದ್ದರು.