ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೀದಿಬದಿ ವ್ಯಾಪಾರಸ್ಥರ ಒಕ್ಕೂಟದಿಂದ ಮನವಿ…

Share Below Link

ಶಿವಮೊಗ್ಗ : ಬೀದಿಬದಿ ವ್ಯಾಪಾರಿಗಳ ಪ್ರಮುಖ ಬೇಡಿಕೆ ಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಶಿವಮೊಗ್ಗ ಜಿ ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟದಿಂದ ಇಂದು ಜಿಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಬೀದಿಬದಿ ವ್ಯಾಪಾರಸ್ಥರು ಜಿಡಳಿತದ ಸೂಚನೆ ಮೇರೆಗೆ ೨ವರ್ಷಗಳ ಹಿಂದೆಯೇ ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಮನವಿ ಸಲ್ಲಿಸಿತ್ತು. ಅದರಲ್ಲಿ ಪ್ರಮುಖವಾಗಿ ವೆಂಡಿಂಗ್‌ಝೋನ್ ಮತ್ತು ನಾನ್ ವೆಂಡಿಂಗ್‌ಝೋನ್ ಇದೂವರೆಗೂ ಮಾಡಿಲ್ಲ. ಈ ಹಿಂದೆ ಬೀದಿಬದಿ ವ್ಯಾಪಾರಿಗಳಿಗೆ ೧೪ ಕನ್ಸರ್‌ವೆನ್ಸಿಗಳಲ್ಲಿ ಜಗ ಗುರುತಿಸಿದ್ದು, ಅದನ್ನು ವಾಹನ ನಿಲ್ದಾಣಗಳಿಗೆ ಕೊಟ್ಟಿರು ತ್ತಾರೆ. ಕೂಡಲೇ ಅವುಗಳನ್ನು ತೆರೆವುಗೊಳಿಸಿ, ಬೀದಿಬದಿ ವ್ಯಾಪಾರಿ ಗಳಿಗೆ ಅನುವು ಮಾಡಿಕೊಡಬೇಕು.
ವಿನೋಬನಗರದ ಶಿವಾಲಯದ ಬಳಿ ೫ ಕೋಟಿ ರೂ. ವೆಚ್ಚದಲ್ಲಿ ೭೨ ಮಳಿಗೆಗಳನ್ನು ಕಟ್ಟಿಸಿ ಹಲವು ವರ್ಷಗಳಾಗಿದೆ. ಅದು ಈಗ ನಿರುಪಯುಕ್ತವಾಗಿ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು ಅಲ್ಲಿ ಯಾರೂ ವ್ಯಾಪಾರ ಮಾಡುತ್ತಿಲ್ಲ ಕೂಡಲೇ ಪಾಲಿಕೆ ಆಯುಕ್ತ ರೊಂದಿಗೆ ಚರ್ಚಿಸಿ ಬೀದಿಬದಿ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಬೇಕು. ಸ್ಮಾರ್ಟ್‌ಸಿಟಿ ವತಿಯಿಂದ ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿದ್ದು, ಅದನ್ನು ಸಹ ಕೂಡಲೇ ಬೀದಿಬದಿ ವ್ಯಾಪಾರಸ್ಥರಿಗೆ ಹಂಚಿಕೆ ಮಾಡ ಬೇಕು ಹಾಗೂ ದುರ್ಗಿಗುಡಿಯ ಮಲ್ಲಿಕಾರ್ಜುನ ಟಾಕೀಸ್ ಎದುರು ಭಾಗದಲ್ಲಿ ಹಲವರು ಮಂಡಕ್ಕಿ ಗಾಡಿಗಳ ಮೂಲಕ ವ್ಯಾಪಾರ ಮಾಡುತ್ತಿದ್ದು ಅವರುಗಳಿಗೆ ಐಸಿಐಸಿಐ ಸಮೀಪದಲ್ಲಿ ಜಗ ಗುರುತಿಸಿದ್ದು, ಅನುಮೋದನೆ ಕೂಡ ದೊರೆತ್ತಿದ್ದು ಆ ಜಗವನ್ನು ಅಭಿವೃದ್ಧಿಪಡಿಸಿ ಅವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒಕ್ಕೂಟ ಆಗ್ರಹಿಸಿದೆ.
ಬೀದಿಬದಿ ವ್ಯಾಪಾರಸ್ಥರ ಎ ಸಮಸ್ಯೆಗಳನ್ನು ಹಿಂದಿನ ಡಿಸಿ ಮತ್ತು ಪಾಲಿಕೆ ಆಯುಕ್ತರು ಒಕ್ಕೂಟದ ಸದಸ್ಯರೊಂದಿಗೆ ಈಗಾಗಲೇ ಸಭೆ ಮಾಡಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಜಿಧಿಕಾರಿಗಳು ಮತ್ತೊಮ್ಮೆ ಒಕ್ಕೂಟದ ಸದಸ್ಯರು ಹಾಗೂ ಆಯುಕ್ತರೊಂದಿಗೆ ಸಭೆ ಏರ್ಪಡಿಸಿ ಬಹಳ ವರ್ಷದಿಂದ ಸಮಸ್ಯೆ ಯಾಗಿರುವ ಈ ಅಂಶಗಳನ್ನು ಗಮನಿಸಿ ಪರಿಹರಿಸಿಕೊಡಬೇ ಕೆಂದು ಒಕ್ಕೂಟ ಮನವಿಯಲ್ಲಿ ತಿಳಿಸಿದೆ.
ಒಕ್ಕೂಟದ ಅಧ್ಯಕ್ಷ ಮಣಿಗೌಂಡರ್, ಕಾರ್ಯಾಧ್ಯಕ್ಷ ಅಶೋಕ್ ಗಾಂಧಿಬಸಪ್ಪ, ಪ್ರಧಾನ ಕಾರ್ಯದರ್ಶಿ ಎಂ. ದಿನೇಶ್, ಸದಸ್ಯರಾದ ನಾಗರಾಜ್, ಶೀಲಾಮೂರ್ತಿ, ಬಿ.ಎನ್. ಕುಮಾರ್ ಮೊದಲಾದವರಿದ್ದರು.