ಎಸ್‌ಟಿ ಜಾತಿ ಪ್ರಮಾಣಪತ್ರ ನೀಡಿ ಜೇನು ಕುರುಬರಿಂದ ಡಿಸಿಗೆ ಮನವಿ
ಶಿವಮೊಗ್ಗ: ಜಿಯಲ್ಲಿ ವಾಸ ಮಾಡುತ್ತಿರುವ ಜೇನು ಕುರುಬರಿಗೆ ಎಸ್.ಟಿ. ಜತಿ ಪ್ರಮಾಣಪತ್ರ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ ಇಂದು ಡಿಸಿಗೆ ಮನವಿ ಸಲ್ಲಿಸಿದೆ.
ಶಿವಮೊಗ್ಗ ಜಿಯಲ್ಲಿ ತಲೆಮಾರುಗಳಿಂದ ಜೇನು ಕುರುಬರು ವಾಸ ಮಾಡುತ್ತಿzರೆ. ವಿಶೇಷವಾಗಿ ಸಕ್ರೆಬೈಲ್‌ನಲ್ಲಿ ಆನೆಗಳ ಪಳಗಿಸುವುದು, ಅವುಗಳ ನಿರ್ವಹಣೆಯ ಕಾರ್ಯವನ್ನು ಜೇನು ಕುರುಬ ಜನಾಂಗದವರು ಮಾಡುತ್ತಾ ಬಂದಿzರೆ. ಇವರಿಗೆ ಎಸ್.ಟಿ. ಜತಿ ಪ್ರಮಾಣ ಪತ್ರ ನೀಡಬೇಕು. ಅಟಲ್ ಜೀ ಜನಸ್ನೇಹಿ ಕೇಂದ್ರಕ್ಕೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಮೈಸೂರು ಜಿಯಲ್ಲಿ ಜೇನು ಕುರುಬ ಜನಾಂಗಕ್ಕೆ ಎಸ್.ಟಿ. ಎಂದು ಪ್ರಮಾಣ ಪತ್ರ ನೀಡಲಾ ಗುತ್ತಿದೆ. ಹಾಗೆಯೇ ಚಿಕ್ಕಮಗಳೂರು ಕಲಬುರಗಿ, ಬೀದರ್, ಯಾದಗಿರಿ ಮತ್ತು ಕೊಡಗು ಜಿಗಳಲ್ಲಿ ಪ್ರಮಾಣಪತ್ರ ನೀಡಲು ಸೂಚನೆ ನೀಡಿದೆ. ಆದರೆ, ಶಿವಮೊಗ್ಗ ಜಿಯಲ್ಲಿರುವ ನಾವುಗಳು ಮಾತ್ರ ಇದರಿಂದ ವಂಚಿತರಾಗಿzವೆ. ಸರ್ಕಾರ ಕೂಡಲೇ ನಮ್ಮ ಜನಾಂಗಕ್ಕೆ ಎಸ್‌ಟಿ ಜತಿ ಪ್ರಮಾಣ ಪತ್ರ ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಂಘದ ಗೌರವಾಧ್ಯಕ್ಷ ಕುಪೇಂದ್ರ ಆಯನೂರು, ಪ್ರಮುಖರಾದ ಪ್ರದೀಪ್ ಹೊನ್ನಪ್ಪ, ನಾಗಭೂಷಣ್, ಲತಾ, ಶಾಂತಾ, ಸುಮಿತ್ರ, ಸುಪ್ರಿಯಾ, ರಾಜೇಶ್, ರತ್ನಮ್ಮ ಇನ್ನಿತರರಿದ್ದರು.