ಇತರೆಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಭ್ರಷ್ಟ ಬಿಜೆಪಿಗರಿಂದ ಭ್ರಷ್ಠಾಚಾರದ ವಿರುದ್ಧ ಪಾಠ: ಸುಂದರೇಶ್ ವ್ಯಂಗ್ಯ

Share Below Link

ಶಿವಮೊಗ್ಗ: ಬೆಂಗಳೂರಿನಲ್ಲಿ ನಡೆದ ಐಟಿ ರೇಡ್‌ಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸು ತ್ತಿzರೆ. ಸ್ವತಃ ಭ್ರಷ್ಟರಾದ ಬಿಜೆಪಿಯವರು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿರುವುದು ನಾಚಿಕೆಗೇಡಿತನ ಎಂದು ಜಿ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತ ನಾಡಿ, ಬೆಂಗಳೂರಿನಲ್ಲಿ ಕೆಲವು ಗುತ್ತಿಗೆದಾರರ ಮೇಲೆ ಐಟಿ ರೇಡ್ ಆಗಿದೆ. ಇದಕ್ಕೂ ಕಾಂಗ್ರೆಸ್ಸಿಗೂ ಯಾವ ಸಂಬಂಧವೂ ಇಲ್ಲ. ಆದರೂ ಕೂಡ ಬಿಜೆಪಿ ನಾಯಕರು ಅರ್ಥವಿಲ್ಲದಂತೆ ಬಾಯಿಗೆ ಬಂ ದಂತೆ ಕಾಂಗ್ರೆಸ್ ನಾಯಕರ ಮೇಲೆ ಆರೋಪ ಮಾಡುತ್ತಿzರೆ ಈ ಆರೋಪ ಮಾಡುವವರೆಲ್ಲರೂ ಭ್ರಷ್ಟಾಚಾರಿಗಳೇ ಆಗಿzರೆ. ಜೈಲಿಗೂ ಹೋಗಿ ಬಂದಿzರೆ ಎಂದರು.
ಬಿಜೆಪಿ ಅಧಿಕಾರದಲ್ಲಿzಗ ಭ್ರಷ್ಟಾಚಾರದ ಹಗರಣಗಳು ಸಾಲುಸಾಲಾಗಿ ಬಂದಿವೆ. ಶೇ.೪೦ರ ಕಮಿಷನ್ ಹಗರಣ, ಪಿಎಸ್‌ಐ ನೇಮಕಾತಿ ಹಗರಣ, ಬಿಟ್‌ಕಾ ಯಿನ್ ಹಗರಣ ಸೇರಿದಂತೆ ಸಾಕ ಷ್ಟು ಹಗರಣಗಳಾಗಿವೆ. ಅದರಲ್ಲು ಕೊರೋನಾ ಸಂದರ್ಭದಲ್ಲಂತೂ ಬಿಜೆಪಿಗರು ಹಂವನ್ನು ಕೊಳ್ಳೆ ಹೊಡೆದಿzರೆ. ಅಂತ ಭ್ರಷ್ಟಾಚಾರಿ ಗಳು ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಐದು ತಿಂಗ ಳಾಗಿಲ್ಲ. ಆಗಲೇ ಆರೋಪದ ಮಾತನಾಡುತ್ತಾರೆ. ಯಾರೇ ಭ್ರಷ್ಟಾಚಾರ ಮಾಡಿದರೂ ಕೂಡ ತನಿಖೆ ಮಾಡಿ ಕ್ರಮ ಕೈಗೊಳ್ಳಲಿ ಎಂದರು.
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿ, ಭ್ರಷ್ಟಾಚಾರಿಗಳೇ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸವಾಗಿದೆ. ಇದು ಸುಭದ್ರ ಸರ್ಕಾರವನ್ನು ಅಡಿ ಸುವ ವ್ಯರ್ಥ ಪ್ರಯತ್ನವಾಗಿದೆ ಎಂದರು.
ಈಶ್ವರಪ್ಪನವರು ತಾವು ಭ್ರಷ್ಟಾಚಾರ ಮಾಡಿರುವುದಾಗಿ ಸ್ವತಃ ಒಪ್ಪಿಕೊಂಡಿzರೆ. ಅವರು ಅನೇಕ ಬಾರಿ ಮಾತನಾಡುವಾಗ ಕಾಂಗ್ರೆಸ್ಸಿಗರು ನಮಗಿಂತ ಹೆಚ್ಚು ಕಮಿಷನ್ ತೆಗೆದುಕೊಳ್ಳುತ್ತಾರೆ. ಅವರದ್ದು ಶೇ.೮೦ರಷ್ಟಾಗುತ್ತದೆ ಎಂದು ಹೇಳುತ್ತಲೇ ನಾವು ಶೇ.೪೦ರಷ್ಟು ಕಮಿಷನ್ ತಿಂದಿದ್ದು ನಿಜ ಎಂದು ಒಪ್ಪಿಕೊಂಡಿzರೆ. ಮೊದಲು ಅವರನ್ನು ಬಂಧಿಸಬೇಕು. ಬಿಜೆಪಿ ಸರ್ಕಾರ ಇz ಗಲೇ ಅವರು ಅಧಿಕಾರ ಕಳೆದು ಕೊಂಡವರು. ಐಟಿ ರೇಡ್‌ಗೆ ಸಂಬ ಂಧಿಸಿದಂತೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉತ್ತರ ಕೊಟ್ಟಿzರೆ ಎಂದರು.
ಜೆಡಿಎಸ್ ಬಿಜೆಪಿ ಮೈತ್ರಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ಕುಮಾರಸ್ವಾಮಿ, ಇಬ್ರಾಹಿಂ ಅವರ ಪ್ರೇಮ ಪ್ರಸಂಗ ವಾಗಿದೆ. ಸದ್ಯದಲ್ಲಿಯೇ ಅದರ ವಿಚ್ಛೇದನ ಗೊತ್ತಾಗುತ್ತದೆ. ಇಬ್ರಾ ಹಿಂ ಅವರು ಇಂಡಿಯಾ ಟೀಮ್ ಅನ್ನು ಬೆಂಬಲಿಸುತ್ತಿರುವುದು ಸ್ವಾಗತಾರ್ಹ ಎಂದರು.
ಬಿಜೆಪಿ ಆಡಳಿತದ ಅವಧಿಯಲ್ಲಿ ಸಾವಿರ ಕೋಟಿ ಸಾಲ ಮಾಡಿದ್ದರು. ಅದನ್ನು ಈಗ ತೀರಿಸಬೇಕಾಗಿದೆ.ಕಾಮಗಾರಿಗಳ ಟೆಂಡರ್ ಕರೆಯುವ ವೇಳೆಯಲ್ಲಿ ಬಿಜೆಪಿಯ ನಾಯಕರು ಹಣವನ್ನು ಕಬಳಿಸಿ zರೆ. ಈಗ ಅಂತಿಮ ಬಿಲ್ ಮಾಡುವಾಗ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುತ್ತಿzರೆ. ಬಿಜಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಾಡಿದ ಮಾಜಿ ಮಂತ್ರಿ ಈಗ ಕಾಂಗ್ರೆಸ್ ನಾಯಕರ ಮನೆಬಾಗಿ ಲು ತಟ್ಟುತ್ತಿzರೆ. ೫೦ ಕೋಟಿ ಕೊಡುತ್ತೇವೆ ಎಂದು ಹೇಳುತ್ತಿzರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆರ್. ಪ್ರಸನ್ನಕುಮಾರ್, ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್, ಪ್ರಮುಖರಾದ ಚಂದ್ರಶೇಖರ್, ಕಲಗೋಡು ರತ್ನಾಕರ್, ಕಾಶಿ ವಿಶ್ವನಾಥ್, ಕಲೀಂ ಪಾಶಾ ಸೇರಿದಂತೆ ಹಲವರಿದ್ದರು.