ಹಿರೇಮಠ್‌ರಿಗೆ ಅನನ್ಯಶಿಕ್ಷಕ ರತ್ನ ಪ್ರಶಸ್ತಿ…
ಭದ್ರಾವತಿ: ನಗರದ ಅಪ್ಪರ್ ಹುತ್ತಾದಲ್ಲಿರುವ ಅನನ್ಯ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಅನನ್ಯ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ. ಕೆ ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಸುಮಾರು ೩೩ ವರ್ಷಗಳ ಕಾಲ ಪ್ರೌಢಶಾಲೆ ಶಿಕ್ಷಕರಾಗಿ, ಪ್ರಸ್ತುತ ೧೨ ವರ್ಷಗಳಿಂದ ಕನ್ನಡ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಕನ್ನಡ ಶಿಕ್ಷಕ ಎಸ್.ಬಿ. ಹಿರೇಮಠ್ ಇವರ ಸುದೀರ್ಘ ಸೇವೆಯನ್ನು ಗುರುತಿಸಿ ಅನನ್ಯ ಶಿಕ್ಷಣ ಸಂಸ್ಥೆ ವತಿಯಿಂದ ಅನನ್ಯ ಶಿಕ್ಷಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೆ ಪಿ ಹರೀಶ್ ಕುಮಾರ್, ಗಿರಜ್ ಕೆ ವಿ, ಅನಿಲ್ ಕುಮಾರ್ , ಭರತ್ ಕುಮಾರ್, ಗುರುಪ್ರಸಾದ್ ತಂತ್ರಿ, eನ ಪ್ರಕಾಶ್ ಇವರುಗಳು ಉಪಸ್ಥಿತರಿದ್ದರು. ಶಾಲೆಯ ಆಡಳಿತಾಧಿಕಾರಿಗಳು, ಮುಖ್ಯಶಿಕ್ಷಕರು, ಬೋಧಕ ವರ್ಗ ಹಾಗೂ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.
ಕುಮಾರಿ. ಶ್ರೇಯಾ ಸಿ.ಎನ್, ಕಾರ್ಯಕ್ರಮದ ನಿರೂಪಣೆ ಮಾಡಿದರು ಕವನ.ಬಿ.ಎಚ್ ಸ್ವಾಗತ ಮಾಡಿದರು. ಐಶ್ವರ್ಯ .ಎಂ ವಂದನಾರ್ಪಣೆ ಮಾಡಿಸದರು.