ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ನಗರದ ಪ್ರತಿಷ್ಠಿತ ಪೆಸಿಟ್ ಕಾಲೇಜ್‌ನಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ…

Share Below Link

ಶಿವಮೊಗ್ಗ: ಪಿಇಎಸ್ ಕಾಲೇಜಿನ ಮುಖ್ಯ ಸೆಮಿನಾರ್ ಹಾಲ್‌ನಲ್ಲಿ ಮೇ ೧೬ರಂದು ಐಇಇಇ-೨೪ ಅಂತರ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿ ಸಲಾಗಿದೆ ಎಂದು ಪಿಇಎಸ್ ಟ್ರಸ್ಟಿನ ಮುಖ್ಯಸ್ಥ ಡಾ. ನಾಗರಾಜ್ ಆರ್. ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಇಎಸ್ ತಂತ್ರಜನ ಮತ್ತು ನಿರ್ವಹಣಾ ಸಂಸ್ಥೆಯೂ ಐಇಇಇ ಸಹಯೋಗದೊಂದಿಗೆ ಅಮೇಥಿ ೨೦೨೪ರ ಅಂತರ ರಾಷ್ಟ್ರೀಯ ಸಮ್ಮೇಳನ ವನ್ನು ಆಯೋಜಿಸಿದ್ದು ವಿದ್ಯುತ್ ಎಲೆಕ್ಟ್ರಾನಿಕ್ಸ್ ಮಾಹಿತಿ, ಕಂಪ್ಯೂಟರ್ ಸಂವಾಹನ ತಂತ್ರಜನಗಳಲ್ಲಿನ ಭೂಮಿಕೆಯನ್ನು ಕೇಂದ್ರೀಕರಿಸಿ ಆಯೋಜಿಸಲಾಗಿದೆ ಎಂದರು.
ವಿಶ್ವದಾದ್ಯಂತ ಪ್ರಖ್ಯಾತ ಸಂಸ್ಥೆ ಗಳಿಂದ ೧೨೦೦ಕ್ಕೂ ಹೆಚ್ಚು ಲೇಖನಗಳು ಬಂದಿದ್ದು ಅದರಲ್ಲಿ ಆಯ್ಕೆ ಮಾಡಿ ಕೊಂಡು ಸುಮಾರು ೨೦೦ ಪೇಪರ್‌ಗಳ ಮಂಡನೆಗೆ ಅವಕಾಶ ಮಾಡಿಕೊಡ ಲಾಗಿದೆ. ಸುಮಾರು ೧೨೦ಕ್ಕೂ ಹೆಚ್ಚು ಪ್ರಬಂಧಗಳು ಆನ್‌ಲೈನ್‌ನಲ್ಲಿಯೇ ಮಂಡಿಸಲಿದ್ದು, ಸುಮಾರು ೭೫ಕ್ಕೂ ಹೆಚ್ಚು ಪ್ರಬಂಧಗಳು ಸಮ್ಮೇಳನದಲ್ಲಿ ಮಂಡನೆಯಾಗಲಿವೆ ಎಂದರು.
ಸೌತ್ ಕೋರಿಯಾದ ಕುನ್ಸನ್ ನ್ಯಾಷನಲ್ ವಿಶ್ವವಿದ್ಯಾನಿಲಯದ ಪ್ರೊ. ಡಾ. ಇನ್-ಹೋ ರಾ, ಯು.ಕೆ.ಯ ಟೀಸ್ಸೈಡ್ ವಿಶ್ವವಿದ್ಯಾನಿಲಯದ ಡಾ.ಗಿಲ್‌ಲೇಸಿ ಗೋವಾ ವಿವಿಯ ಪ್ರೊ.ಡಾ. ರಾಜೇಂದ್ರ ಎಸ್.ಗಡ್ ಮುಂತಾದ ಗಣ್ಯರು ಈ ಸಮ್ಮೇಳನದಲ್ಲಿ ಅಂತರಾಷ್ಟ್ರೀಯ ಮಾನದಂಡಗಳು ತಾಂತ್ರಿಕ ಸಂಶೋದನೆಗಳ ಭವಿಷ್ಯ ವನ್ನು ಆಕಾರಗೊಳಿಸುವ ಪಾತ್ರವನ್ನು ಪರಿಚಯಿಸಲಿದ್ದಾರೆ ಎಂದರು.
ಈ ಸಮ್ಮೇಳನ ದಿಂದ ನಮ್ಮ ಕಾಲೇಜಿನ ಸುಮಾರು ೨೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಯೋಜ ವಾಗಲಿದೆ. ಅಲ್ಲದೇ ಸ್ಥಳೀಯ ಮತ್ತು ಪ್ರಾದೇಶಿಕ ಆರ್ಥಿಕತೆಯ ಮೇಲೆ ಪ್ರಭಾವಬೀರಲಿದೆ. ಸ್ಥಳೀಯ ಹೋಟೆಲ್‌ಗಳ ಸೇವೆಗಳಿಗೆ ಅನುಕೂಲವಾಗಲಿದೆ ಎಂದರು.
ಸಮ್ಮೇಳನದಲ್ಲಿ ಹಲವು ಗೋಷ್ಠಿಗಳ ಮೂಲಕ ತಾಂತ್ರಿಕ ವಿಚಾರಗಳು ಪರಿಸರ ಸ್ನೇಹಿ ಚರ್ಚೆಗಳು, ವೃತ್ತಿಪರ ಬೆಳವಣಿಗೆ ಕಲಿಕೆ ಮತ್ತು ಸಂಶೋಧನೆಗೆ ಆದ್ಯತೆ, ಶೈಕ್ಷಣಿಕ ಉತ್ಕೃಷ್ಟತೆ ಹೆಚ್ಚಿಸುವ ಬಗ್ಗೆ ಮತ್ತು ವೃತ್ತಿಪರ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಲಾಗುವುದು ಎಂದರು. ಪಿಇಎಸ್ ಟ್ರಸ್ಟಿನ ಸಿಓಓ ಬಿ. ಆರ್. ಸುಭಾಷ್ ಹಾಗೂ ಸಮ್ಮೇಳನದ ಮುಖ್ಯಸ್ಥ ಡಾ. ಪ್ರಸನ್ನ ಕುಮಾರ್ ಹೆಚ್.ಆರ್. ಇದ್ದರು.

This image has an empty alt attribute; its file name is Arya-coll.gif