ಜಿಲ್ಲಾ ಸುದ್ದಿತಾಜಾ ಸುದ್ದಿ

ಉತ್ತಮ ಸಾಧನೆಯೊಂದಿಗೆ ಜನಗತ್ತಿನ ಮುಂದು ಮತ್ತಷ್ಟು ಬಲಿಷ್ಠವಾದ ಭಾರತ: ಡಾ| ಜ್ಞಾನೇಶ್

Share Below Link

ಸೊರಬ: ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ವೆಂಬ ಹೆಗ್ಗಳಿಕೆ ಪಾತ್ರವಾಗಿರುವ ಭಾರತ ಜಗತ್ತಿಗೆ ಮತ್ತಷ್ಟು ಸಾಧನೆ ಯನ್ನು ಎತ್ತಿ ತೋರಿಸಿದೆ ಎಂದು ಸೊರಬ ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಡಾ| eನೇಶ ಹೆಚ್.ಈ ಹೇಳಿದರು.
ಪಟ್ಟಣದ ದಾನಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಯುವಾ ಬಿಗ್ರೇಡ್ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಶಿವಮೊಗ್ಗ ಜಿ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಚಂದ್ರನ ಮೇಲೆ ಭವ್ಯ ಭಾರತ ಚಂದ್ರಯಾನ -೩ರ ಸಂಭ್ರಮಾಚರಣೆ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದಿನ ಚಂದ್ರಯಾನ-೨ ಯಶಸ್ವಿಯಾಗದಿ ದ್ದರೂ ಅದರ ಜೊತೆಗಿದ್ದ ಆರ್‍ಬಿಟ್ ನೌಕೆ ಇಂದಿಗೂ ಸಹ ಕಾರ್ಯ ನಿರ್ವಹಿಸುತ್ತಿದ್ದು ಚಂದ್ರಯಾನ -೩ರ ಲ್ಯಾಂಡಿಂಗ್‌ಗೆ ಚಂದ್ರನ ದಕ್ಚಿಣ ಧ್ರುವದಲ್ಲಿ ಸುರಕ್ಷಿತ ಸ್ಥಳವನ್ನು ಗುರುತಿಸಿ ೩ರ ಯಾನ ಯಶಸಿ ಗೊಳ್ಳಲು ಕಾರಣಿಭೂತ ವಾಗಿದೆ. ಇದಕ್ಕೆ ಕಾರಕರ್ತರಾದ ಎಲ್ಲಾ ವಿeನಿಗಳು, ಇಂಜಿನಿಯರ್‌ಗಳು ಅಭಿನಂದನಾರ್ಹರಾಗಿzರೆ.


ಜಗತಿಕ ಮಟ್ಟದಲ್ಲಿ ನಮ್ಮ ದೇಶ ಮತ್ತಷ್ಟು ಪ್ರಬಲಬಾಗಿದೆ ಎಂದು ತೋರಿಸಿದಾಗ ರಾಷ್ಟ್ರ ಸರ್ವತೋಮುಖ ಅಭಿವೃದ್ದಿ ಮತ್ತು ಪ್ರಗತಿಯಾಗಲು ಕಾರಣಿಕರ್ತ ವಾಗುತ್ತದೆ. ಬಹು ಹಿಂದೆಯೇ ಆರ್ಯಭಟ, ಬಾಸ್ಕರಾಚಾರ್ಯ ಕಾಲದಲ್ಲಿಯೇ ನಭೋ ಮಂಡಲದ ಬಗ್ಗೆ ಸೂರ್ಯ, ಚಂದ್ರ, ನಕ್ಷತ್ರ, ಧೂಮಕೇತು ಇತ್ಯಾದಿ ಖಗೋಳ ಶಾಸ್ತ್ರದ ಬಗ್ಗೆ ಪ್ರಸ್ಥಾಪಿಸಲ್ಪಟ್ಟಿದ್ದು ಭಾರತ ದೇಶದ ಹೆಮ್ಮೆಯಾಗಿದೆ.
ಚಂದರಯಾನ-೩ ರ ಸಫಲತೆಯಿಂದ ಅಲ್ಲಿನ ಪರಿಸರದ ಅಯಸ್ಕಂತಿಕ ಗುಣಗಳು ವಾಷ್ಟೋಕಾಸ್ಮೋ ವಾತಾವರಣ ಸೇರಿದಂತೆ ನೂರಾರು ವೈeನಿಕ ಸಂಶೋಧನೆಗಳನ್ನು ಕೈಗೊಳ್ಳಲು ಸಹಕಾರಿಯಾಗಿದೆ. ಪ್ರಪಂಚದ ಹಲವಾರು ರಾಷ್ಟ್ರಗಳು ನಮ್ಮ ತಂತeನದ ಪ್ರಯೋಜ ಪಡೆದು ಉಪಗ್ರಹಗಳನ್ನು ಹಾರಿಸಲು ಮುಂದಾಗುತ್ತಿರುವುದು ರಾಷ್ಟ್ರದ ಪ್ರಗತಿಗೆ ಪೂರಕವಾಗಿದೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಡಾ. ನಾಗರಾಜ ಎ.ಎಸ್ ಕಾರ್ಯಕ್ರಮ ಉದ್ಘಾಟಿಸಿದರು. ರೋಟರಿಯನ್ ನಾಗರಾಜ ಗುತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗೀತ ವಿದುಷಿ ಲಕ್ಷ್ಮಿಮುರುಳಿ ದೇಶಭಕ್ತಿಗೀತೆ ಹಾಡಿದರು.
ವೇದಿಕೆಯಲ್ಲಿ ಜಿ ಪರಿಷತ್ ಮಾಜಿ ಉಪಾಧ್ಯಕ್ಷ ಪಾಣಿರಾಜಪ್ಪ, ಲಯನ್ಸ ಕ್ಲಬ್ ಕಾರ್ಯದರ್ಶಿ ಎಸ್.ಕೃಷ್ಣಾನಂದ, ಯುವ ಬಿಗ್ರೇಡ್‌ನ ಮಹೇಶ ಕಾರ್ವಿ, ಪತ್ರಕರ್ತರಾದ ರಾಘವೇಂದ್ರ.ಟಿ, ಸಂದೀಪ ಯು.ಎಲ್, ಡಿ. ಶಿವಯೋಗಿ ಉಪಸ್ಥಿತರಿದ್ದರು.